Site icon Vistara News

England Women’s Team : ವಿಶ್ವಕಪ್ ವಿಜೇತ ಇಂಗ್ಲೆಂಡ್ ಆಟಗಾರ್ತಿ ಅಲೆಕ್ಸ್ ಹಾರ್ಟ್ಲಿ ವಿದಾಯ

Alex Hartley

ಲಂಡನ್: ಇಂಗ್ಲೆಂಡ್​ ಮಹಿಳೆಯರ ಕ್ರಿಕೆಟ್​ ತಂಡ ಅನುಭವಿ ಎಡಗೈ ಸ್ಪಿನ್ನರ್ ಅಲೆಕ್ಸ್ ಹಾರ್ಟ್ಲಿ ವೃತ್ತಿಪರ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಅವರು ಮಂಗಳವಾರ ಖಚಿತಪಡಿಸಿದ್ದಾರೆ. ಅವರು ಪ್ರಸ್ತುತ ನಡೆಯುತ್ತಿರುವ ಹಂಡ್ರಡ್​ ಟೂರ್ನಮೆಂಟ್​​ನಲ್ಲಿ ವೆಲ್ಸ್​ ಫೈರ್ ಮಹಿಳಾ ಪರ ಆಡುತ್ತಿದ್ದಾರೆ. ಅವರ ತಂಡ ಪ್ರಸ್ತುತ 11 ಅಂಕಗಳೊಂದಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್​​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

2023ರಲ್ಲಿ ಅವರು ಆಟದಿಂದ ವಿರಾಮ ಪಡೆದುಕೊಂಡು ಥಂಡರ್ ತಂಡ ಪರ ರೀಜಿನಲ್​ ಕ್ರಿಕೆಟ್​ನಲ್ಲಿ ಆಡಿದ್ದರು. ಈ ವೇಳೆ ಅವರು ಮಾನಸಿಕವಾಗಿ ಒತ್ತಡದ ಬಗ್ಗೆ ಮಾತನಾಡಿದ್ದರು. ತನ್ನ ಬೌಲಿಂಗ್​ನಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದೇನೆ ಹಾಗೂ ಕ್ರೀಡೆಯ ಬಗ್ಗೆ ಉತ್ಸಾಹ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದರು. ಆದಾಗ್ಯೂ, 2017 ರ ಏಕದಿನ ವಿಶ್ವಕಪ್ ವಿಜೇತ ಆಟಗಾರ್ತಿ ದಿ ಹಂಡ್ರೆಡ್ ಮೂಲಕ ಕ್ರಿಕೆಟ್​ ಅಂಗಳಕ್ಕೆ ಮರಳಿದ್ದರು. ಟಮ್ಮಿ ಬ್ಯೂಮಾಂಟ್ ನೇತೃತ್ವದ ತಂಡಕ್ಕಾಗಿ ಮೂರು ಪಂದ್ಯಗಳಲ್ಲಿ 35.00 ಸರಾಸರಿಯಲ್ಲಿ ಎರಡು ವಿಕೆಟ್​ಗಳನ್ನು ಉರಳಿಸಿದ್ದಾರೆ.

“ನಾನು ನಿವೃತ್ತಿ ಪಡೆಯುತ್ತಿದ್ದೇನೆ . ನಾನು ಅಧಿಕೃತವಾಗಿ ಕ್ರಿಕೆಟ್​ನಿಂದ ನಿವೃತ್ತನಾಗುತ್ತಿದ್ದೇನೆ. ವೆಲ್ಷ್ ಫೈರ್ ತಂಡವನ್ನು ನಾನು ಸಂಪೂರ್ಣವಾಗಿ ಪ್ರೀತಿಸುತ್ತೇನೆ. ತಂಡದ ಬಗ್ಗೆ ಪ್ರೀತಿಯಿದೆ. ಆ ತಂಡದ ಸಿಬ್ಬಂದಿ ಪ್ರತಿ ಕ್ಷಣವೂ ಬೆಂಬಲ ನೀಡಿದ್ದಾರೆ. ಅವರು ಕಳೆದ ಒಂದು ತಿಂಗಳಿನಿಂದ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ನಾನು 50 ಓವರ್​ಗಳ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ಕ್ರಿಕೆಟ್​ ಆಡುವುದಕ್ಕೆ ನಾನು ಪ್ರತಿ ಬಾರಿಯೂ ಇಷ್ಟ ಪಡುತ್ತೇವೆ. ಪ್ರತಿ ಸಲವೂ ಆಟವನ್ನು ಪ್ರೀತಿಸುತ್ತೇನೆ. ಆದರೆ, ಹಿಂದೆ ಯೋಚನೆ ಮಾಡಿದಂತೆ ಆಟ ಮುಂದುವರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನ ನಿರ್ಧಾರ ಸರಿಯಾಗಿರುತ್ತದೆ ಎಂಬುದಾಗಿ 29 ವರ್ಷದ ಆಟಗಾರ್ತಿ ಹೇಳಿದ್ದಾರೆ.

2016ರಲ್ಲಿ ಪದಾರ್ಪಣೆ

ಜೂನ್ 2016 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಹಾರ್ಟ್ಲಿ 28 ಏಕದಿನ ಮತ್ತು ನಾಲ್ಕು ಟಿ 20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 39 ಮತ್ತು 3 ವಿಕೆಟ್​​​ಗಳನ್ನು ಪಡೆದಿದ್ದಾರೆ. 2017 ರ ವಿಶ್ವಕಪ್ ಗೆಲುವು ಅವರ ಅಂತಾರಾಷ್ಟ್ರೀಯ ವೃತ್ತಿಜೀವನದ ಅತಿದೊಡ್ಡ ಹೈಲೈಟ್. ಐಸಿಸಿ (ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ಜಾಗತಿಕ ಪಂದ್ಯಾವಳಿಯಲ್ಲಿ ಒಂಬತ್ತು ಪಂದ್ಯಗಳನ್ನು ಆಡಿರುವ 29 ವರ್ಷದ ಹಾರ್ಟ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್​​ನಲ್ಲಿ ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ನಿರ್ಣಾಯಕ ವಿಕೆಟ್ ಸೇರಿದಂತೆ 10 ವಿಕೆಟ್​​ಗಳೊಂದಿಗೆ ಇಂಗ್ಲೆಂಡ್​​ನ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

ಇಂಗ್ಲೆಂಡ್​​ನ ಪ್ರಮುಖ ಎಡಗೈ ಸ್ಪಿನ್ನರ್ ಆಗಿ ಸೋಫಿ ಎಕ್ಲೆಸ್ಟೋನ್ ಬೆಳೆದಿರುವುದು ಹಾರ್ಟ್ಲಿ ಅವರ ಸ್ಥಾನವನ್ನು ಕಸಿದುಕೊಂಡಿತು. 2019 ರ ಕೊನೆಯಲ್ಲಿ ಅವರು ತಮ್ಮ ಕೇಂದ್ರ ಒಪ್ಪಂದವನ್ನು ಸಹ ಕಳೆದುಕೊಂಡರು. ಆದಾಗ್ಯೂ, ಅವರು 2022 ರಲ್ಲಿ ವೆಲ್ಷ್ ಫೈರ್​​ ಸೇರುವ ಮೊದಲು ದೇಶೀಯ ಕ್ರಿಕೆಟ್​ನಲ್ಲಿ ಥಂಡರ್ ಮತ್ತು ದಿ ಹಂಡ್ರೆಡ್​​ನ ಮೊದಲ ಋತುವಿನಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಆಡುವುದನ್ನು ಆಡಿದ್ದರು.

Exit mobile version