ಡೆಸೆಲ್ ಡಾರ್ಫ್: ಯೂರೋಪಿಯನ್ ಫುಟ್ಬಾಲ್(Euro 2024) ಟೂರ್ನಿಯ 16ರ ಘಟ್ಟದ ಪಂದ್ಯದಲ್ಲಿ ಸ್ಲೊವಾನಿಯಾ(Slovenia ) ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 3-0 ಗೋಲುಗಳ ಅಂತರದ ಜಯ ಸಾಧಿಸಿದ ಪೋರ್ಚುಗಲ್(Portugal ) ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಟ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಎಂಬಾಬೆ ಮತ್ತು ರೊನಾಲ್ಡೊ ನಡುವಣ ಫೈಟ್ ಎಂದು ಬಿಂಬಿಸಲಾಗಿದೆ.
ಸೋಮವಾರ ತಡರಾತ್ರಿ ನಡೆದ ಈ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಮತ್ತು ಹೆಚ್ಚುವರಿ ಅವಧಿಯಲ್ಲಿ ಉಭಯ ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗದ ಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ನಲ್ಲಿ ಪೋರ್ಚುಗಲ್ ಪರ ರೊನಾಲ್ಡೊ, ಬ್ರುನೊ ಫೆರ್ನಾಂಡೀಸ್, ಸಿಲ್ವಾ ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಮೊದಲ ಹೆಚ್ಚುವರಿ ಅವಧಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಪೆನಾಲ್ಟಿ ಅವಕಾಶವೊಂದು ಲಭಿಸಿತ್ತು. ಆದರೆ, ಇದನ್ನು ಗೋಲಾಗಿ ಪರಿವರ್ತಿಸುವಲ್ಲಿ ಅವರು ವಿಫಲರಾದರು. ಇದಕ್ಕೂ ಮುನ್ನ ಸ್ಲೋವಾಕಿಯಾ ಆಟಗಾರ ಬೆಂಜಮಿನ್ ಸೆಸ್ಕೊ ಕೂಡ ಗೋಲು ಬಾರಿಸುವ ಅವಕಾಶವೊಂದನ್ನು ಕಳೆದುಕೊಂಡಿದ್ದರು. ಒಂದೊಮ್ಮೆ ಅವರು ಗೋಲು ಬಾರಿಸುವಲ್ಲಿ ಯಶಸ್ಸು ಕಾಣುತ್ತಿದ್ದರೆ, ಪೋರ್ಚುಗಲ್ ಸೋತು ಟೂರ್ನಿಯಿಂದ ಹೊರಬೀಳುತ್ತಿತ್ತು.
ಡಿಗೊ ಕೋಸ್ಟಾ ಗೆಲುವಿನ ಹೀರೊ
ಗೋಲ್ ಕೀಪರ್ ಡಿಗೊ ಕೋಸ್ಟಾ ಪೋರ್ಚುಗಲ್ ತಂಡದ ಗೆಲುವಿನ ಹೀರೊ ಎನಿಸಿಕೊಂಡರು. ಪೆನಾಲ್ಟಿ ಶೂಟೌಟ್ ನಲ್ಲಿ ಸ್ಲೋವಾಕಿಯಾದ ಎಲ್ಲ ಮೂರು ಪೆನಾಲ್ಟಿಗಳನ್ನು ಯಶಸ್ವಿಯಾಗಿ ತಡೆಯುವಲ್ಲಿ ಯಶಸ್ಸು ಸಾಧಿಸಿದರು.
ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಫ್ರಾನ್ಸ್
ಫ್ರಾನ್ಸ್ ತಂಡ ಕೂಡ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಬೆಲ್ಜಿಯಂ ವಿರುದ್ಧ ರೋಚಕ 1-0 ಗೋಲು ಅಂತರದ ಗೆಲುವು ಸಾಧಿಸಿ 16 ಘಟಕ್ಕೆ ಪ್ರವೇಶ ಪಡೆದಿದೆ. ಪಂದ್ಯ ಮುಗಿಯುವ ಕೊನೆಯ ಕ್ಷಣದಲ್ಲಿ ಬೆಲ್ಜಿಯಂ ಪರ ಡಿಫೆಂಡರ್ ಜಾನ್ ವೆರ್ಟೊಂಗೆನ್ (85ನೇ ನಿಮಿಷ) ಗೋಲು ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಮತ್ತೊಂದು ಪಂದ್ಯದಲ್ಲಿ ಸ್ಪೇನ್ ತಂಡ 4-1 ರಿಂದ ಜಾರ್ಜಿಯಾ ತಂಡವನ್ನು ಮಣಿಸಿ, ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಜಾರ್ಜಿಯ ಪರ ರಾಬಿನ್ ಲೆ ನಾರ್ಮಂಡ್ (18ನೇ ನಿಮಿಷ) ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಮೂರು ಗೋಲು ಗಳಿಸಿತು.