Site icon Vistara News

Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

Euro 2024

Euro 2024: Jude Bellingham guides England to narrow 1-0 victory against Serbia

ಮ್ಯೂನಿಚ್: ಇಂಗ್ಲೆಂಡ್‌ ತಂಡ ಯುರೋ(Euro Cup) 2024(Euro 2024) ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಆಂಗ್ಲರು ಸೆರ್ಬಿಯಾ ವಿರುದ್ಧ 1-0 ಗೆಲುವು ಸಾಧಿಸಿದರು. ಮತ್ತೊಂದು ನೆದರ್ಲೆಂಡ್ಸ್(Poland vs Netherlands) ತಂಡ 2-1 ರಿಂದ ಪೋಲೆಂಡ್ ತಂಡವನ್ನು ಸೋಲಿಸಿದರೆ, ಡೆನ್ಮಾರ್ಕ್ ಮತ್ತು ಸ್ಲೊವೇನಿಯಾ(Denmark vs Slovenia) ಪಂದ್ಯ 1-1 ಸಮಬಲದೊಂದಿಗೆ ಡ್ರಾಗೊಂಡಿತು.

ಬದಲಿ ಆಟಗಾರನಾಗಿ ಕಣಕ್ಕಿಳಿದ ವೌಟ್ ವೆಗ್ ಹಾರ್ಟ್ಸ್ ಕೊನೆಯ ಕ್ಷಣದಲ್ಲಿ ಸಿಡಿಸಿದ ಗೋಲಿನಿಂದ ನೆದರ್ಲೆಂಡ್ಸ್ ತಂಡ ಪೋಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ನೆದರ್ಲೆಂಡ್ಸ್ ತಂಡದ ಪರ ಗೋಡಿ ಗಪ್ಕೊ (29ನೇ ನಿಮಿಷ) ಮತ್ತು ವೌಟ್ ವೆಗ್ ಹಾರ್ಟ್ಸ್ (83ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರೆ, ಪೋಲೆಂಡ್ ಪರ ಆಡಂ ಬುಕ್ಸ (16ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

ಪೋಲೆಂಡ್ ತಂಡ ಪಂದ್ಯ ಆರಂಭಗೊಂಡ 16ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ಸಾಧಿಸಿತು. ಆದರೆ 29ನೇ ನಿಮಿಷದಲ್ಲಿ ಎದುರಾಳಿ ತಂಡದ ಗೋಡಿ ಗಪ್ಕೊ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಇಲ್ಲಿಂದ ಮೇಲೆ ಉಭಯ ತಂಡಗಳ ರಕ್ಷಣ ವಿಭಾಗ ಅತ್ಯಂತ ಬಲಿಷ್ಠವಾಗಿ ಗೋಚರಿಸಿತು. ಇನ್ನೇನು ಪಂದ್ಯ ಟೈಗೊಳ್ಳುತ್ತದೆ ಎನ್ನುವಾಗ ನೆದರ್ಲೆಂಡ್ಸ್ ಪರ ಬದಲಿ ಆಟಗಾರನಾಗಿ ಕಣಕ್ಕಿಳಿದ ವೌಟ್ ವೆಗ್ ಹಾರ್ಟ್ಸ್ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇಂಗ್ಲೆಂಡ್​ಗೆ ಗೆಲುವು


ಇಂಗ್ಲೆಂಡ್​ ತಂಡ ಜೂಡ್ ಬೆಲ್ಲಿಂಗ್ಹ್ಯಾಮ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಸೆರ್ಬಿಯಾ ವಿರುದ್ಧ ಗೆದ್ದು ಬೀಗಿತು. ಪಂದ್ಯ ಆರಂಭಗೊಂಡ 13ನೇ ನಿಮಿಷದಲ್ಲೇ ಬೆಲ್ಲಿಂಗ್ಹ್ಯಾಮ್ ಗೋಲು ಬಾರಿಸಿ ಮಿಂಚಿದರು. ಈ ಗೋಲು ದಾಖಲಾದ ಬಳಿಕ ಇಂಗ್ಲೆಂಡ್ ಆಟಗಾರರು ಕೇವಲ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು ಕೊನೆಗೂ ಪಂದ್ಯವನ್ನು ಜಯಿಸಿದರು.

ಡೆನ್ಮಾರ್ಕ್-ಸ್ಲೊವೇನಿಯಾ ಪಂದ್ಯ ಡ್ರಾ


ಬಲಿಷ್ಠ ತಂಡಗಳಾದ ಸ್ಲೊವೇನಿಯಾ ಮತ್ತು ಡೆನ್ಮಾರ್ಕ್ ನಡುವಿನಿ ಪಂದ್ಯ ಡ್ರಾಗೊಳ್ಳುವ ಮೂಲಕ ಅಂತ್ಯ ಕಂಡಿತು. ಸ್ಲೊವೇನಿಯಾದ ಎರಿಕ್ ಜಾಂಜಾ ಅವರು ತಂಡದ ಪರ ಮೊದಲ ಗೋಲು ಗಳಿಸಿದರು. ಕ್ರಿಶ್ಚಿಯನ್ ಎರಿಕ್ಸನ್ ಡೆನ್ಮಾರ್ಕ್ ಪರ ಗೋಲು ಬಾರಿಸಿದರು. ಮ್ಯಾಂಚೆಸ್ಟರ್ ಕ್ಲಬ್​ ಪರ ಆಡುವ ಮಿಡ್​ಫೀಲ್ಡರ್​ ಕ್ರಿಶ್ಚಿಯನ್ ಎರಿಕ್ಸೆನ್(Christian Eriksen) 2021ರಲ್ಲಿ ಅವರು ಯರೋ ಕಪ್​ ಆಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮೈದಾನದಲ್ಲೇ ಕುಸಿದ್ದು ಬಿದ್ದು ಆಸ್ಪತ್ರೆ ಸೇರಿದ್ದರು. ಅದೃಷ್ಟವಶಾತ್ ಅವರು ಬದುಕುಳಿದಿದ್ದರು.

Exit mobile version