Site icon Vistara News

Euro 2024: ಉಕ್ರೇನ್​ಗೆ ಆಘಾತವಿಕ್ಕಿದ ರೊಮೇನಿಯಾ; 3-0 ಗೋಲ್​ ಅಂತರದ ಗೆಲುವು

Euro 2024

Euro 2024: Romania shocks Ukraine to win 3-0 in opening Group E match

ಫ್ರಾಂಕ್​ಫರ್ಟ್​: ಸೋಮವಾರ ರಾತ್ರಿ ನಡೆದ ಯುರೋ ಕಪ್​ ಫಟ್​​ಬಾಲ್​ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶವೊಂದು ದಾಖಲಾಯಿತು. ಬೆಲ್ಜಿಯಂ ತಂಡದ ಸ್ಟಾರ್​ ಆಟಗಾರ ರೊಮೆಲೂ ಲುಕಾಕೊ 2 ಗೋಲು ಬಾರಿಸಿದರೂ ಕೂಡ ಇದು ಅಮಾನ್ಯಗೊಂಡು ಸ್ಲೋವಾಕಿಯಾ ವಿರುದ್ಧ 1-0 ಅಂತರದ ಸೋಲು ಕಂಡಿತು. ಈ ಸೋಲಿನಿಂದ ಬೆಲ್ಜಿಯಂನ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್​ ಬಿದ್ದಿದೆ.

ಪಂದ್ಯ ಆರಂಭಗೊಂಡ 7ನೇ ನಿಮಿಷದಲ್ಲಿ ಸ್ಲೋವಾಕಿಯಾ ಆಟಗಾರ ಇವಾನ್​ ಸ್ಕ್ರಾನ್ಜ್​ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಲುಕಾಕು 55 ಹಾಗೂ 86ನೇ ನಿಮಿಷಲ್ಲಿ 2 ಗೋಲು ಬಾರಿಸಿದರು. ಆದರೆ ವಿಎಆರ್​ ಪರಿಶೀಲನೆಯಲ್ಲಿ 2 ಗೋಲುಗಳು ಅಮಾನ್ಯಗೊಂಡವು. ರೆಫರಿ ಆಫ್ ಸೈಡ್ ಎಂದು ಘೋಷಿಸುವ ಮೂಲಕ ಈ ಗೋಲುಗಳನ್ನು ನಿರಾಕರಿಸಿದರು.

ಇದನ್ನೂ ಓದಿ Euro 2024: ಡೆನ್ಮಾರ್ಕ್ ಸವಾಲನ್ನು ಮೆಟ್ಟಿ ನಿಂತೀತೇ ಸ್ಲೊವೇನಿಯಾ?; ಬಲಾಬಲ ಹೇಗಿದೆ?

ದಿನದ ಮತ್ತೊಂದು ಪಂದ್ಯದಲ್ಲಿ ರೊಮೇನಿಯಾ ತಂಡ ಉಕ್ರೇನ್​ ವಿರುದ್ಧ 3-0 ಅಂತರದ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಯುರೋ ಕಪ್​ನಲ್ಲಿ ರೊಮೇನಿಯಾ ದಾಖಲಿಸಿದ 2ನೇ ಗೆಲುವು ಇದಾಗಿದೆ. ಪಂದ್ಯದ 29ನೇ ನಿಮಿಷದಲ್ಲಿ ನಾಯಕ ನಿಕೋಲೇ ಸ್ಟಾನ್ಸಿಯು ಗೋಲು ಬಾರಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ರಜ್ವಾನ್​ ಮರಿನ್​(53) ಹಾಗೂ ಡೆನಿಸ್​ ಮಿಹೈ ಡ್ರಾಗಸ್​(57) ಗೋಲು ಬಾರಿಸಿ ಮಿಂಚಿದರು. ಎದುರಾಳಿ ಉಕ್ರೇನ್​ಗೆ ಕನಿಷ್ಠ ಒಂದು ಗೋಲು ಕೂಡ ಬಾರಿಸಲು ಸಾಧ್ಯವಾಗಲಿಲ್ಲ. 24 ವರ್ಷಗಳ ಹಿಂದೆ ಇಂಗ್ಲೆಂಡ್​ ವಿರುದ್ಧ 3-2 ಅಂತರದ ಗೆಲುವು ಸಾಧಿಸಿದ ಬಳಿಕ ಯುರೊ ಕಪ್​ನಲ್ಲಿ ರೊಮೇನಿಯಾಗೆ ಒಲಿದ ಮೊದಲ ಗೆಲುವು ಇದಾಗಿದೆ. ಒಟ್ಟಾರೆ 2 ಗೆಲುವು.

ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​


ಇಂಗ್ಲೆಂಡ್‌ ತಂಡ ಯುರೋ(Euro Cup) 2024(Euro 2024) ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಆಂಗ್ಲರು ಸೆರ್ಬಿಯಾ ವಿರುದ್ಧ 1-0 ಗೆಲುವು ಸಾಧಿಸಿದರು. ಮತ್ತೊಂದು ನೆದರ್ಲೆಂಡ್ಸ್(Poland vs Netherlands) ತಂಡ 2-1 ರಿಂದ ಪೋಲೆಂಡ್ ತಂಡವನ್ನು ಸೋಲಿಸಿದರೆ, ಡೆನ್ಮಾರ್ಕ್ ಮತ್ತು ಸ್ಲೊವೇನಿಯಾ(Denmark vs Slovenia) ಪಂದ್ಯ 1-1 ಸಮಬಲದೊಂದಿಗೆ ಡ್ರಾಗೊಂಡಿತು.

ಇಂಗ್ಲೆಂಡ್​ ತಂಡ ಜೂಡ್ ಬೆಲ್ಲಿಂಗ್ಹ್ಯಾಮ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಸೆರ್ಬಿಯಾ ವಿರುದ್ಧ ಗೆದ್ದು ಬೀಗಿತು. ಪಂದ್ಯ ಆರಂಭಗೊಂಡ 13ನೇ ನಿಮಿಷದಲ್ಲೇ ಬೆಲ್ಲಿಂಗ್ಹ್ಯಾಮ್ ಗೋಲು ಬಾರಿಸಿ ಮಿಂಚಿದರು. ಈ ಗೋಲು ದಾಖಲಾದ ಬಳಿಕ ಇಂಗ್ಲೆಂಡ್ ಆಟಗಾರರು ಕೇವಲ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು ಕೊನೆಗೂ ಪಂದ್ಯವನ್ನು ಜಯಿಸಿದರು.

Exit mobile version