Site icon Vistara News

Euro 2024: ಇಂದು ರೊಮೇನಿಯಾ-ಉಕ್ರೇನ್ ನಡುವೆ ಕಾಲ್ಚೆಂಡಿನ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್​?

Euro 2024

Euro 2024: Underdogs aiming to get Euro 2024 off to a good start

ಮ್ಯೂನಿಚ್: ಯೊರೋ ಕಪ್​ನಲ್ಲಿ ಇಂದು (ಸೋಮವಾರ) 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ರೊಮೇನಿಯಾ(Romania vs Ukraine) ಮತ್ತು ಉಕ್ರೇನ್ ಕಾದಾಟ ನಡೆಸಿದರೆ, ರಾತ್ರಿಯ ಪಂದ್ಯದಲ್ಲಿ ಬೆಲ್ಜಿಯಂ ಮತ್ತು ಸ್ಲೊವಾಕಿಯಾ(Belgium vs Slovakia) ಮುಖಾಮುಖಿಯಾಗಲಿವೆ.

ರೊಮೇನಿಯಾ ತಂಡದ ಪರ ಜಾರ್ಜ್ ಪುಸ್ಕಾಸ್, ಡೆನಿಸ್ ಡ್ರಾಗಸ್ ಮತ್ತು ಡೆನಿಸ್ ಅಲಿಬೆಕ್ ಮಧ್ಯೆ ಗೋಲು ಬಾರಿಸಲು ಜಿದ್ದಾಜಿದ್ದು ಏರ್ಪಡುವ ಸಾಧ್ಯತೆ ಇದೆ. ಯಾರು ಎಷ್ಟು ಗೋಲು ಬಾರಿಸಿ ಗೆಲುವಿನ ಹೀರೋ ಎನಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. ಅನುಭವಿ ಗೋಲ್​ ಕೀಪರ್ ಫ್ಲೋರಿನ್ ನೀಟಾ ಕೂಡ ಕ್ಷಣ ಮಾತ್ರದಲ್ಲಿ ಗೋಲು ತಡೆದು ತಂಡಕ್ಕೆ ಅದೆಷ್ಟೋ ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಇವರು ಕೂಡ ಪಂದ್ಯದ ಪ್ರಮುಖ ಆಕರ್ಷಣೆ. ನಾಯಕ ನಿಕೋಲೇ ಸ್ಟಾನ್ಸಿಯು ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 14 ಗೋಲುಗಳನ್ನು ಬಾರಿಸಿದ ಸಾಧನೆ ಮಾಡಿದ್ದು ಈ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

ಎದುರಾಳಿ ಉಕ್ರೇನ್​ ಕೂಡ ಬಲಿಷ್ಠವಾಗಿ ಗೋಚರಿಸಿದೆ. ಆದರೆ ಸ್ಟಾರ್​ ಆಟಗಾರ ವಿಟಾಲಿ ಮೈಕೊಲೆಂಕೊ ಪಾದದ ಗಾಯದಿಂದಾಗಿ ಈ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಮೈಖೈಲೊ ಮುದ್ರಿಕ್ ಮತ್ತು ವಿಕ್ಟರ್ ತ್ಸೈಗಾಂಕೋವ್ ತಂಡದ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ. ಉಳಿದಂತೆ ಲಾ ಲಿಗಾ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆರ್ಟೆಮ್ ಡೊವ್ಬಿಕ್ ಮೇಲು ತಂಡ ಹೆಚ್ಚಿನ ನಂಬಿಕೆ ಇರಿಸಿದೆ.

ಉಕ್ರೇನ್ ಇದುವರೆಗೆ ಯುರೋಸ್‌ನಲ್ಲಿ 11 ಪಂದ್ಯಗಳನ್ನು ಆಡಿ 8ರಲ್ಲಿ ಗೆಲುವು ಸಾಧಿಸಿದೆ. ರೊಮೇನಿಯಾ ತನ್ನ ಆರನೇ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದೆ, 2016ರಲ್ಲಿ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡಿತ್ತು.

ಇದನ್ನೂ ಓದಿ Euro 2024: ಗೆಲುವಿನ ಶುಭಾರಂಭ ಕಂಡ ಇಂಗ್ಲೆಂಡ್​; ರೋಚಕ ಗೆಲುವು ಸಾಧಿಸಿದ ನೆದರ್ಲೆಂಡ್ಸ್

ಬೆಲ್ಜಿಯಂ ಸವಾಲಿಗೆ ಸ್ಲೊವಾಕಿಯಾ ಸಿದ್ಧ


2022ರ ವಿಶ್ವಕಪ್​ನಲ್ಲಿ ನಿರಾಶಾದಾಯಕ ಪ್ರದರ್ಶನ ತೋರಿದ್ದ ಬೆಲ್ಜಿಯಂ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಯುರೋಪಿಯನ್ ಚಾಂಪಿಯನ್‌ಶಿಪ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಸ್ಲೋವಾಕಿಯಾ ವಿರುದ್ಧ ಆಡಲಿದೆ. ಇದು ಗ್ರೂಪ್ ‘ಇ’ ವಿಭಾಗದ ಮೊದಲ ಪಂದ್ಯವಾಗಿದೆ.

ಕರಾತ್​ನಲ್ಲಿ ನಡೆದಿದ್ದ ವಿಶ್ವಕಪ್​ ಟೂರ್ನಿಯಲ್ಲಿ ಬೆಲ್ಜಿಯಂ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಟೂರ್ನಿಯಿಂದ ಹೊರಬಿದಿತ್ತು. ಈ ವೇಳೆ ಅಭಿಮಾನಿಗಳು ತಂಡದ ಆಟಗಾರರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಸೋಲಿನ ಬಳಿಕ ಹಲವು ಆಟಗಾರರನ್ನು ತಂಡದಿಂದ ಕೈಬಿಟ್ಟು ಹೊಸ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ತಂಡದಲ್ಲಿ ಹೊಸ ಪ್ರತಿಭೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಕೋಚ್ ಡೊಮೆನಿಕೊ ಟೆಡೆಸ್ಕೊ ಅಧಿಕಾರ ವಹಿಸಿಕೊಂಡಾಗಿನಿಂದ ಬೆಲ್ಜಿಯಂ ತಂಡ ಆಡಿದ ಎಲ್ಲ ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿದೆ.

Exit mobile version