ಮ್ಯೂನಿಚ್: ಇಂದು ನಡೆಯುವ ಯುರೋ ಕಪ್(Euro 2024) ಫುಟ್ಬಾಲ್ ಟೂರ್ನಿಯ ‘ಸಿ’ ಗ್ರೂಪ್ನ ತಂಡಗಳಾದ ಡೆನ್ಮಾರ್ಕ್ ಮತ್ತು ಸ್ಲೊವೇನಿಯಾ(Denmark vs Slovenia) ಮುಖಾಮುಖಿಯಾಗಲಿವೆ. ತಡ ರಾತ್ರಿಯ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ಮತ್ತು ಸರ್ಬಿಯಾ ಕಾದಾಟ ನಡೆಸಲಿವೆ. ಎಲ್ಲ ನಾಲ್ಕು ತಂಡಗಳಿಗೂ ಇದು ಈ ಬಾರಿಯ ಕೂಡದ ಮೊದಲ ಪಂದ್ಯವಾಗಿದ್ದು ಗೆಲುವಿನ(euro cup) ಶುಭಾರಂಭಕ್ಕೆ ತೀವ್ರ ಪೈಪೋಟಿ ನಡೆಸುವ ನಿರೀಕ್ಷೆ ಇದೆ. ಪಂದ್ಯ ರಾತ್ರಿ 9.30ಕ್ಕೆ ಪ್ರಸಾರಗೊಳ್ಳಲಿದೆ.
ಮ್ಯಾಂಚೆಸ್ಟರ್ ಕ್ಲಬ್ ಪರ ಆಡುವ ಮಿಡ್ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸೆನ್(Christian Eriksen) ಅವರು ತಂಡಕ್ಕೆ ಮರಳಿರುವುದು ಡೆನ್ಮಾರ್ಕ್ ತಂಡದ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. 2021ರಲ್ಲಿ ಅವರು ಯರೋ ಕಪ್ ಆಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮೈದಾನದಲ್ಲೇ ಕುಸಿದ್ದು ಬಿದ್ದು ಆಸ್ಪತ್ರೆ ಸೇರಿದ್ದರು. ಅದೃಷ್ಟವಶಾತ್ ಅವರು ಬದುಕುಳಿದು ಇದೀಗ ಮತ್ತೆ ಯೊರೋ ಕಪ್ನಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಬಲಾಬಲ
ಡೆನ್ಮಾರ್ಕ್ ಮತ್ತು ಸರ್ಬಿಯಾ ಇದುವರೆಗೆ ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಡೆನ್ಮಾರ್ಕ್ ದಾಖಲೆಯ 5 ಪಂದ್ಯಗಳನ್ನು ಗೆದ್ದರೆ, ಸರ್ಬಿಯಾ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಇಂದಿನ ಪಂದ್ಯದಲ್ಲಿಯೂ ಡೆನ್ಮಾರ್ಕ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಕಳೆದ ವರ್ಷ ನಡೆದಿದ್ದ ಟೂರ್ನಿಯಲ್ಲಿ ಡೆನ್ಮಾರ್ಕ್ ತಂಡ ಸರ್ಬಿಯಾ ವಿರುದ್ಧ 2-1 ಗೋಲುಗಳ ಅಂತರದಿಂದ ಗೆದ್ದು ಬೀಗಿತ್ತು. ಆದರೂ ಕೂಡ ಸವಾಲನ್ನು ಹಗುರುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಈ ಬಾರಿ ಸರ್ಬಿಯಾ ಹೆಚ್ಚಾಗಿ ಯುವ ಆಟಗಾರರನ್ನು ನೆಚ್ಚಿಕೊಂಡಿದೆ.
ಇದನ್ನೂ ಓದಿ Euro 2024: ಕ್ರೊವೇಷಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್
ಸಂಭಾವ್ಯ ತಂಡಗಳು
ಡೆನ್ಮಾರ್ಕ್: ಕ್ಯಾಸ್ಪರ್ ಷ್ಮೆಚೆಲ್, ಜೋಕಿಮ್ ಆಂಡರ್ಸನ್, ಆಂಡ್ರಿಯಾಸ್ ಕ್ರಿಸ್ಟೆನ್ಸೆನ್, ಜಾನಿಕ್ ವೆಸ್ಟರ್ಗಾರ್ಡ್, ಜೋಕಿಮ್ ಮೆಹ್ಲೆ, ಪಿಯರೆ- ಎಮಿಲಿ ಹೊಜ್ಬ್ಜೆರ್ಗ್, ಮಾರ್ಟೆನ್ ಹ್ಜುಲ್ಮಂಡ್, ವಿಕ್ಟರ್ ಕ್ರಿಸ್ಟಿಯಾನ್ಸೆನ್, ಕ್ರಿಶ್ಚಿಯನ್ ಎರಿಕ್ಸೆನ್, ರಾಸ್ಮಸ್ ಹೊಜ್ಲುಂಡ್, ಮಿಕ್ಕೆಲ್ ಡ್ಯಾಮ್ಸಾರ್ಡ್
ಸ್ಲೊವೇನಿಯಾ: ಜಾನ್ ಒಬ್ಲಾಕ್, ಝಾನ್ ಕಾರ್ನಿಕ್ನಿಕ್, ಡೇವಿಡ್ ಬ್ರೆಕಾಲೊ, ಜಾಕಾ ಬಿಜೋಲ್, ಎರಿಕ್ ಜಾಂಜಾ, ಟೊಮಿ ಹೊರ್ವಟ್, ಟಿಮಿ ಮ್ಯಾಕ್ಸ್ ಎಲ್ಸ್ನಿಕ್, ಆಡಮ್ ಗ್ನೆಜ್ಡಾ ಸೆರಿನ್, ಜಾನ್ ಮ್ಲಾಕರ್, ಆಂಡ್ರಾಜ್ ಸ್ಪೋರಾರ್, ಬೆಂಜಮಿನ್ ಸೆಸ್ಕೋ.
ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಇಂಗ್ಲೆಂಡ್ ನಾಯಕ
ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಅವರು ಸರ್ಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನವೇ ತಮ್ಮ ತಂಡ ಗೆಲುವು ಸಾಧಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂಡ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಪಂದ್ಯಕ್ಕೆ ಬೇಕಾದ ಎಲ್ಲ ಪೂರ್ವ ತಯಾರಿಯನ್ನು ಮಾಡಿದ್ದೇವೆ, ಗೆಲ್ಲುವು ವಿಶ್ವಾಸ ನಮ್ಮ ತಂಡದಲ್ಲಿದೆ ಎಂದು ಹೇಳಿದರು.
ಹ್ಯಾರಿ ಕೇನ್ ಅವರು 2018ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಗೋಲ್ಡನ್ ಶೂ ಪ್ರಶಸ್ತಿ ಗೆದ್ದಿದ್ದರು. ಆದರೆ ತಂಡ ಮಾತ್ರ ಸೆಮಿಫೈನಲ್ನಲ್ಲಿ ಕ್ರೊಯೇಷಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದುವರೆಗೂ ಇಂಗ್ಲೆಂಡ್ ತಂಡ ಯುರೋ ಕಪ್ ಗೆದ್ದಿಲ್ಲ.