Site icon Vistara News

Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ

Euro Cup 2024

Euro Cup 2024: Euro Cup Tournament From Today; First match between Germany-Scotland

ಮ್ಯೂನಿಚ್: ಫುಟ್ಬಾಲ್​ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದ ಪ್ರತಿಷ್ಠಿತ ಕಾಲ್ಚೆಂಡಿನ ಕಾಳಗ ಯುರೋ ಕಪ್(Euro Cup 2024) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಈ ಟೂರ್ನಿಗೆ(euro cup) ಅಧಿಕೃತ ಚಾಲನೆ ಸಿಗಲಿದೆ. ಭಾರತೀಯ ಕಾಲಮಾನದ ಪ್ರಕಾರ ತಡರಾತ್ರಿ ನಡೆಯಲಿರುವ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಜರ್ಮನಿ 28 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.

ಒಟ್ಟು 5 ಗುಂಪುಗಳು


ಒಟ್ಟು 24 ತಂಡಗಳು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದು, 6 ಗುಂಪುಗಳನ್ನು ಮಾಡಲಾಗಿದೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ, ಫ್ರಾನ್ಸ್‌ನ ಕೀಲಿಯನ್ ಎಂಬಾಪೆ ಅವರು ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅಚ್ಚರಿ ಎಂದರೆ 2014ರ ವಿಶ್ವಕಪ್ ಜಯಿಸಿದ್ದ ಜರ್ಮನಿ ತಂಡಕ್ಕೆ ನಾಯಕರಾಗಿದ್ದ ಫಿಲಿಪ್ ಲಾಮ್ ಈಗ ಯುರೋ 2024 ಟೂರ್ನಿಯ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ Lionel Messi Retirement: ನಿವೃತ್ತಿಯ ಸುಳಿವು ನೀಡಿದ ಲಿಯೋನೆಲ್​ ಮೆಸ್ಸಿ

ತಂಡಗಳು


A ಗುಂಪಿನ ತಂಡಗಳು: ಜರ್ಮನಿ, ಸ್ಕಾಟ್ಲೆಂಡ್​, ಹಂಗೆರಿ, ಸ್ವಿಜರ್ಲೆಂಡ್​

B ಗುಂಪಿನ ತಂಡಗಳು; ಸ್ಪೇನ್​, ಕ್ರೊವೇಷಿಯಾ, ಇಟಲಿ, ಅಲ್ಬೆನಿಯಾ

C ಗುಂಪಿನ ತಂಡಗಳು: ಇಂಗ್ಲೆಂಡ್​, ಸ್ಲವೆನಿಯಾ, ಡನ್ಮಾರ್ಕ್​, ಸರ್ಬಿಯಾ

D ಗುಂಪಿನ ತಂಡಗಳು: ಪೋಲೆಂಡ್​, ನೆದರ್ಲೆಂಡ್​, ಆಸ್ಟ್ರೀಯಾ, ಫ್ರಾನ್ಸ್​.

E ಗುಂಪಿನ ತಂಡಗಳು: ಬೆಲ್ಜಿಯಂ, ಸ್ಲೊವಾಕಿಯಾ, ರೊಮೆನಿಯಾ, ಯುಕ್ರೇನ್​

F ಗುಂಪಿನ ತಂಡಗಳು:​ ಪೋರ್ಚುಗಲ್​, ಟರ್ಕಿ, ಜಾರ್ಜಿಯಾ, ಜೆಕ್​ ಗಣರಾಜ್ಯ

ಬಹುಮಾನ ಮೊತ್ತ


ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದ ತಂಡಕ್ಕೆ ಬರೋಬ್ಬರಿ 71.87 ಕೋಟಿ ರೂ. ಸಿಗಲಿದೆ. ರನ್ನರ್​ ಅಪ್​ ತಂಡ 44.92 ಕೋಟಿ ರೂ. ಪಡೆಯಲಿದೆ. ಸೆಮಿಫೈನಲ್​, ಕ್ವಾರ್ಟರ್​ ಫೈನಲ್​ ಮತ್ತು ಪ್ರೀ ಕ್ವಾರ್ಟರ್​ ಫೈನಲ್​ ತಲುಪಿದ ತಂಡಗಳಿಗೆ ಕ್ರಮವಾಗಿ ತಲಾ, 35.93 ಕೋಟಿ, 22.46 ಕೋಟಿ, 13.47 ಕೋಟಿ ರೂ. ಸಿಗಲಿದೆ. ಇದು ಮಾತ್ರವಲ್ಲದೆ ಪ್ರತಿ ಪಂದ್ಯದ ಗೆಲುವಿಗೆ 8.98 ಕೋಟಿ ಮತ್ತು ಡ್ರಾ ಗೊಂಡ ಪಂದ್ಯದ ತಂಡಗಗಳಿಗೆ 4.49 ಕೋಟಿ ರೂ. ಲಭಿಸಲಿದೆ. ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತ 2,973(331 ದಶಲಕ್ಷ ಯುರೋ) ಕೋಟಿ ರೂ. ಆಗಿದೆ.

ಪಂದ್ಯ ಆರಂಭ: ರಾತ್ರಿ 12.30, ನೇರಪ್ರಸಾರ : ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್.

Exit mobile version