ಸಿಡ್ನಿ: ಐಸಿಸಿ ಟಿ20 ವಿಶ್ವ ಕಪ್ ಕೂಟದಲ್ಲಿ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿವೆ. ಈ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಈ ಪಂದ್ಯಕ್ಕಾಗಿ ವಿಶ್ವವೇ ಎದುರು ನೋಡುತ್ತಿದೆ ಎಂದು ತಿಳಿಸಿದ್ದಾರೆ.
ವಿಶ್ವ ಕಪ್ ಫೈನಲ್ ಪಂದ್ಯದ ಕುರಿತು ಟೂರ್ನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತನಾಡಿರುವ ವಾಟ್ಸನ್, 2007ರ ಟಿ20 ವಿಶ್ವ ಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಅದೇ ರೀತಿ ಈ ತಂಡಗಳು ಮತ್ತೊಮ್ಮೆ ಸೆಣಸಾಟ ನಡೆಸುವುದನ್ನು ನೋಡಲು ಎಲ್ಲರೂ ಬಯಸುತ್ತಿದ್ದಾರೆ. ದುರದೃಷ್ಟವಶಾತ್ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಮೊದಲ ಸೂಪರ್-12 ಹಂತದ ಪಂದ್ಯವನ್ನು ಮೆಲ್ಬೋರ್ನ್‌ನಲ್ಲಿ ನೋಡಲು ಸಾಧ್ಯವಾಗಿರಲಿಲ್ಲ. ಪಂದ್ಯ ವಿಶೇಷವಾಗಿತ್ತು ಎಂದು ಆ ಬಳಿಕ ತಿಳಿಯಿತು. ಇದೀಗ ಫೈನಲ್‌ನಲ್ಲಿ ಉಭಯ ತಂಡಗಳ ಹೋರಾಟ ಕಣ್ತುಂಬಿಕೊಳ್ಳುವ ಭಾಗ್ಯ ಸಿಗಲಿದೆ ಎಂಬ ನಿರೀಕ್ಷೆ ನನ್ನಲಿದೆʼ ಎಂದು ತಿಳಿಸಿದ್ದಾರೆ.
ಸೂಪರ್ 12ರ ಹಂತದಲ್ಲಿ ಬಿ ಗುಂಪಿನಲ್ಲಿ ಆಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ‘ಎ’ ಗುಂಪಿನಿಂದ ನಾಕೌಟ್ ತಲುಪಿರುವ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಸೆಣಸಾಟ ನಡೆಸಲಿವೆ. ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ vs ಪಾಕಿಸ್ತಾನ, ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ vs ಭಾರತ ನವೆಂಬರ್ 9 ಮತ್ತು 10 ರಂದು ಮುಖಾಮುಖಿಯಾಗಲಿವೆ.
ಇದನ್ನೂ ಓದಿ | T20 World Cup | ಅಡಿಲೇಡ್ ತಲುಪಿದ ರೋಹಿತ್ ಪಡೆ; ಮಂಗಳವಾರದಿಂದ ಕಠಿಣ ಅಭ್ಯಾಸ