Site icon Vistara News

IPL 2024 : ಲೈಂಗಿಕ ಕಿರುಕುಳ ಹಗರಣದಲ್ಲಿ ಸಿಕ್ಕಿಬಿದ್ದವರಿಗೆ ಐಪಿಎಲ್​ ಆಡಳಿತ ಮಂಡಳಿಯಲ್ಲಿ ಸ್ಥಾನ?

V Chamundeswaranath

ಬೆಂಗಳೂರು: 2009ರ ಟಿ 20 ವಿಶ್ವಕಪ್ ಗಾಗಿ ಭಾರತ ಕ್ರಿಕೆಟ್ ತಂಡದ ವ್ಯವಸ್ಥಾಪಕರಾಗಿದ್ದ ವಿ ಚಾಮುಂಡೇಶ್ವರಿನಾಥ್ ಅವರು ಐಪಿಎಲ್ (IPL 2024) ಆಡಳಿತ ಮಂಡಳಿಯ ಹೊಸ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರ ಸ್ಥಾನವನ್ನು ಅವರು ತುಂಬಲಿದ್ದಾರೆ. ಕಳೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಅರುಣ್ ಧುಮಾಲ್ ಮತ್ತು ಅಭಿಷೇಕ್ ದಾಲ್ಮಿಯಾ ಇಬ್ಬರೂ ಐಪಿಎಲ್ 2024 ಹರಾಜಿಗೆ ಮುಂಚಿತವಾಗಿ ಮರು ಆಯ್ಕೆಯಾದರು. ಇದೇ ವೇಳೆ ಇಂಡಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ಐಸಿಎ) ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಚಾಮುಂಡೇಶ್ವರಿನಾಥ್ ಅವರನ್ನೂ ಮಂಡಳಿಗೆ ನೇಮಕ ಮಾಡಲಾಗಿದೆ. ಇದು ಅಚ್ಚರಿಯ ನೇಮಕ ಎಂದು ಹೇಳಲಾಗುತ್ತಿದೆ.

ಆಂಧ್ರ ಕ್ರಿಕೆಟ್ ಅಸೋಸಿಯೇಷನ್​​ನ ಆಯ್ಕೆಗಾರ ಹುದ್ದೆಯಲ್ಲಿದ್ದ ಅವರು ಲೈಂಗಿಕ ಕಿರುಕುಳದ ಆರೋಪದ ಮೇಲೆ ಅವರನ್ನು ಭಾರತ ತಂಡದ ವ್ಯವಸ್ಥಾಪಕ ಹುದ್ದೆಯಿಂದ ಅವರನ್ನು ವಜಾ ಮಾಡಲಾಗಿತ್ತು. ಇಂಥವರ ನೇಮಕವು ಕೆಲವರ ಹುಬ್ಬೇರುವಂತೆ ಮಾಡಿದೆ. ಆಂಧ್ರದ ಮಾಜಿ ಆಟಗಾರ ವಿ.ಚಾಮುಂಡೇಶ್ವರಿನಾಥ್ ಅವರು ಬಿಸಿಸಿಐ ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಐಪಿಎಲ್​ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅವರು 317 ಮತಗಳನ್ನು ಪಡೆದಿದ್ದರೆ, ಹರ್ವಿಂದರ್ ಸಿಂಗ್ 228 ಮತಗಳನ್ನು ಪಡೆದರು. ಒಟ್ಟು 545 ಮತಗಳು ಚಲಾವಣೆಯಾಗಿದ್ದವು. ಈ ಹಿಂದೆ ಬಿಸಿಸಿಐ ಚುನಾವಣೆಗಳನ್ನು ನಿರ್ವಹಿಸಿದ್ದ ಐಸಿಎ ಚುನಾವಣಾ ಅಧಿಕಾರಿ ಎ.ಕೆ.ಜ್ಯೋತಿ ಗುರುವಾರ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ.

ಐಪಿಎಲ್ ಆಡಳಿತ ಮಂಡಳಿ ಸದಸ್ಯರು

ವಿ ಚಾಮುಂಡೇಶ್ವರಿನಾಥ್ ಯಾರು?

1978ರಿಂದ 1992ರ ಅವಧಿಯಲ್ಲಿ ಆಂಧ್ರ ಪರ 44 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ವಂಕಿನಾ ಚಾಮುಂಡೇಶ್ವರಿನಾಥ್ 1818 ರನ್ ಗಳಿಸಿದ್ದಾರೆ. ಅವರು 13 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು. ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಅವರು ಐಪಿಎಲ್ ಆಡಳಿತ ಮಂಡಳಿಯಲ್ಲಿ ಹೊಸ ಮುಖವಾಗಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಗಳನ್ನೂ ಓದಿ:
ICC World Cup 2023 : ಜಿಂಬಾಬರ್​; ಪಾಕ್​ ನಾಯಕ ವಿಕಿಪೀಡಿಯಾ ಮಾಹಿತಿಯನ್ನೇ ತಿದ್ದಿದರು!
Virat kohli : ಕೊಹ್ಲಿ 50ನೇ ಒಡಿಐ ಶತಕ ಬಾರಿಸುವ ದಿನಾಂಕ ತಿಳಿಸಿದ ಗವಾಸ್ಕರ್​
Ben Stokes : ಬೆಂಗಳೂರಿನ ಆಟೋ ಡ್ರೈವರ್​ನ ವೇಗಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್​ ಆಟಗಾರ ಬೆನ್​ಸ್ಟೋಕ್ಸ್​​

ಕ್ರಿಕೆಟ್​ನಿಂದ ನಿವೃತ್ತರಾದ ನಂತರ, ಅವರು ಆಂಧ್ರ ಕ್ರಿಕೆಟ್ ಅಸೋಸಿಯೇಷನ್​ ಆಯ್ಕೆದಾರರಾದರು. 2009ರ ಟಿ20 ವಿಶ್ವಕಪ್​​ನಲ್ಲಿ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೂ ಸೇವೆ ಸಲ್ಲಿಸಿದ್ದರು. ಆದಾಗ್ಯೂ, ಅವರು ಆಯ್ಕೆದಾರರಾಗಿದ್ದ ಅವಧಿಯಲ್ಲಿ ಆಂಧ್ರ ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಹಿರಂಗವಾದ ನಂತರ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿತ್ತು.

ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕೂಡ ಕಿರುಕುಳ ಪ್ರಕರಣಗಳು ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ವಜಾಗೊಳಿಸಿತು. ಆಂಧ್ರದ ಮಹಿಳಾ ಕ್ರಿಕೆಟರ್ ದುರ್ಗಾ ಭವಾನಿ 2009ರಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಂತರ ಆಟಗಾರ್ತಿ ದೂರನ್ನು ಹಿಂತೆಗೆದುಕೊಂಡರು ಮತ್ತು ಕ್ರಿಕೆಟ್​ನಿಂದ ನಿವೃತ್ತರಾದರು. ಅವರು 2009 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆಟಗಾರರ ಪಟ್ಟಿ ಬಿಡುಗಡೆ ಮಾಡಲು ಗಡುವು

ಕ್ರಿಕೆಟ್ ವಿಶ್ವಕಪ್​​ನ ಜ್ವರ ಹೆಚ್ಚಾಗುತ್ತಿರುವ ನಡುವೆಯೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಕ್ಷಗಳನ್ನು ಐಪಿಎಲ್ ಸಂಭ್ರಮವನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವ ಸಮಯ ಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಹರಾಜಿಗೆ ಮುಂಚಿತವಾಗಿ ಉಳಿಸಿಕೊಂಡ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳಿಗೆ ನವೆಂಬರ್ 15 ರ ಗಡುವನ್ನು ನಿಗದಿಪಡಿಸಿದೆ ಎಂದು ವರದಿಯಾಗಿದೆ. ಪ್ರಸ್ತುತ, ಐಪಿಎಲ್ 2024 ಟ್ರೇಡಿಂಗ್ ವಿಂಡೋ ತೆರೆದಿದೆ. ಆದರೆ ವಿಶ್ವಕಪ್ ಮೇಲೆ ಗಮನ ಹೆಚ್ಚಿರುವ ಕಾರಣ ಇಲ್ಲಿಯವರೆಗೆ ಯಾವುದೇ ಆಟಗಾರರ ಬದಲಾವಣೆಗಳು ನಡೆದಿಲ್ಲ.

ಕಳೆದ ಬಾರಿಗಿಂತ ಭಿನ್ನವಾಗಿ ಐಪಿಎಲ್ 2024 ರ ಹರಾಜು ಒಂದು ದಿನಕ್ಕೆ ಮುಕ್ತಾಯಗೊಳ್ಳಲಿದೆ. ಮೊದಲ ಬಾರಿಗೆ, ಹರಾಜು ವಿದೇಶಕ್ಕೆ ಹೋಗುತ್ತದೆ, ಬಹುಶಃ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಬಹುದು ಎನ್ನಲಾಗಿದೆ. ಇದು 2024ರ ಐಪಿಎಲ್​ ಮೆಗಾ ಹರಾಜಿಗೆ ಮುಂಚಿತವಾಗಿ ನಡೆಯುವ ಮಿನಿ ಹರಾಜು ಆಗಿರುತ್ತದೆ. ಆದಾಗ್ಯೂ, ಎಲ್ಲಾ ಮಿನಿ ಹರಾಜುಗಳಂತೆ ಆಟಗಾರರ ವೇತನದ ಮೇಲೆ ಹೆಚ್ಚಿನ ಗಮನ ಹರಿದಿದೆ.

Exit mobile version