Site icon Vistara News

Tushar Arothe: ಭಾರತ ತಂಡದ ಮಾಜಿ ಕೋಚ್ ಮನೆಯಲ್ಲಿ ಕೋಟಿ ರೂ. ಪತ್ತೆ; ವಶಕ್ಕೆ ಪಡೆದ ಪೊಲೀಸರು

Cricket Coach Tushar Arothe

ವಡೋದರಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಕೋಚ್ ತುಷಾರ್ ಅರೋಥೆ(Tushar Arothe) ಅವರ ಮನೆಯಲ್ಲಿ 1 ಕೋಟಿ ರೂ. ಪತ್ತೆಯಾದ ಹಿನ್ನೆಲೆ ಅವರನ್ನು ವಡೋದರಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳವಾರದಂದು ಖಚಿತ ಮಾಹಿತಿ ಮೇರೆಗೆ ತುಷಾರ್ ಮನೆಗೆ ದಾಳಿ ನಡೆಸಿದ್ದ ಪೊಲೀಸರು 1 ಕೋಟಿ ಮೊತ್ತವನ್ನು ವಶಪಡಿಸಿ ತನಿಖೆ ಆರಂಭಿಸಿದ್ದಾರೆ.

ತುಷಾರ್ ಅರೋಥೆ ಅವರ ವಿರುದ್ಧ ಈಗಾಗಲೇ ಹಲವು ಬಾರಿ ಬೆಟ್ಟಿಂಗ್​ ಆರೋಪ ಕೇಳಿ ಬಂದಿತ್ತು. ಆದರೆ ಇದು ಸಾಬೀತು ಆಗಿಲ್ಲ. ಇದೀಗ ಮನೆಯಲ್ಲಿ 1 ಕೋಟಿ ರೂ. ಸಿಕ್ಕಿರುವುದನ್ನು ನೋಡುವಾಗ ಅವರು ಬೆಟ್ಟಿಂಗ್​ ದಂದೆಯಲ್ಲಿ ತೊಡಗಿರವುದು ನಿಜ ಎನ್ನುವಂತಿದೆ. ಅರೋಥೆ ಕೆಲವು ವರ್ಷಗಳ ಕಾಲ ಭಾರತ ಮಹಿಳಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. 2018 ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. 2017 ರಲ್ಲಿ ತುಷಾರ್ ಅವರ ಕೋಚಿಂಗ್ ಸಾರಥ್ಯದಲ್ಲಿ ಭಾರತ ಮಹಿಳಾ ತಂಡ ಐಸಿಸಿ ವಿಶ್ವಕಪ್‌ನಲ್ಲಿ ಫೈನಲ್​ಗೆ ಪ್ರವೇಶಿಸಿತ್ತು.

ಖಚಿತ ಮಾಹಿತಿಯೊಂದಿಗೆ ವಡೋದರದ ಪತ್ಪರ್‌ಗಂಜ್ ಪ್ರದೇಶದಲ್ಲಿರುವ ತುಷಾರ್ ಅರೋಥೆ ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಪೊಲೀಸರಿಗೆ 1 ಕೋಟಿ ರೂ. ಲಭಿಸಿದೆ. ಈ ಹಣ ಹೇಗೆ ಬಂತು, ಎಲ್ಲಿಂದ ಬಂತು, ಇದರ ಮೂಲ ಯಾವುದು, ಇಂತಹ ಪ್ರಶ್ನೆಗಳಿಗೆ ಭಾರತದ ಮಾಜಿ ಕೋಚ್‌ನಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ WPL 2024: ಗೆಲುವಿನೊಂದಿಗೆ ತವರಿನ ಅಭಿಯಾನ ಮುಗಿಸಿದ ಆರ್​ಸಿಬಿ; ಯುಪಿ ವಿರುದ್ಧ 23 ರನ್​ ಜಯ

2019ರ ಐಪಿಎಲ್ ಸಂದರ್ಭದಲ್ಲಿ ಬೆಟ್ಟಿಂಗ್​ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸರು ಕೆಫೆಯೊಂದರ ಮೇಲೆ ದಾಳಿ ನಡೆಸಿ 19 ಜನರನ್ನು ಬಂಧಿಸಿದ್ದರು. ಇದರಲ್ಲಿ ಅರೋಥೆ ಕೂಡ ಸೇರಿದ್ದರು. ತುಷಾರ್ ಅರೋಥೆಯ ಬಳಿಯಿಂದ ಫೋನ್ ಮತ್ತು ಕಾರನ್ನು ಜಪ್ತಿ ಮಾಡಲಾಗಿತ್ತು. ಆದರೆ, ಅರೋಥೆ ಅವರ ಮೊಬೈಲ್‌ ತಪಾಸಣೆ ನಡೆಸಿದಾಗ ಅದರಲ್ಲಿ ಯಾವುದೇ ಬೆಟ್ಟಿಂಗ್ ಆ್ಯಪ್​ ಪತ್ತೆಯಾಗಿರಲಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಕೋಟಿ ರೂ. ಪತ್ತೆಯಾದ್ದ ಬಗ್ಗೆ ಅವರು ಸೂಕ್ತ ಮಾಹಿತಿ ನೀಡಿಬೇಕಿದೆ.

Exit mobile version