Site icon Vistara News

Lahiru Thirimanne: ಭೀಕರ ಕಾರು ಅಪಘಾತ; ಲಂಕಾ ಕ್ರಿಕೆಟಿಗ ಆಸ್ಪತ್ರೆಗೆ ದಾಖಲು

Thirimanne

ಕೊಲಂಬೊ: ಶ್ರೀಲಂಕಾದ ಮಾಜಿ ಆಟಗಾರ ಲಹಿರು ತಿರಿಮನ್ನೆ(Lahiru Thirimanne) ಪ್ರಯಾಣಿಸುತ್ತಿದ್ದ ಕಾರು ಭೀಕರ(lahiru thirimanne car accident) ಅಪಘಾತಕ್ಕೆ ಒಳಗಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸಣ್ಣಪುಟ್ಟ ಗಾಯಗೊಂಡ ತಿರಿಮನ್ನೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನುರಾಧಪುರದ ತಿರಪನ್ನೆ ಎಂಬಲ್ಲಿ ಈ ಘಟನೆ ನಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಿರಿಮನ್ನೆ ಕಾರು ನಜ್ಜುಗುಜ್ಜಾಗಿದೆ.

ತಿರಿಮನ್ನೆ ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅವರ ಕಾರು ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.


34 ವರ್ಷದ ಲಹಿರು ತಿರಿಮನ್ನೆ ಅವರು 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. 2010 ರಲ್ಲಿ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದ ತಿರಿಮನ್ನೆ ಶ್ರೀಲಂಕಾ ಪರ 44 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 3 ಶತಕಗಳೊಂದಿಗೆ 2088 ರನ್ ಕಲೆಹಾಕಿದ್ದಾರೆ. 127 ಏಕದಿನ ಪಂದ್ಯಗಳಿಂದ 3164 ರನ್ ಬಾರಿಸಿದ್ದಾರೆ. ಈ ವೇಳೆ 4 ಶತಕ ಹಾಗೂ 21 ಅರ್ಧಶತಕಗಳನ್ನು ಸಿಡಿಸಿದ್ದಾರೆ. 26 ಟಿ20 ಪಂದ್ಯಗಳನ್ನಾಡಿರುವ ಅವರು 291 ರನ್ ಕಲೆಹಾಕಿದ್ದರು. ನಿವೃತ್ತಿ ಬಳಿಕ ವಿವಿಧ ಲೀಗ್​ಗಳಲ್ಲಿ ಆಟ ಮುಂದುವರಿಸಿದ್ದಾರೆ.

ಇದನ್ನೂ ಓದಿ IPL 2024: ಈ ಬಾರಿಯೂ ಕೆಕೆಆರ್​ಗೆ ಕೈಕೊಡಲಿದ್ದಾರೆ​ ಅಯ್ಯರ್; ಮತ್ತೆ ಕಾಣಿಸಿಕೊಂಡ ​ಬೆನ್ನು ನೋವು

Exit mobile version