Site icon Vistara News

Jasprit Bumrah | ಜಸ್​ಪ್ರಿತ್​ ಬುಮ್ರಾ ಅಲಭ್ಯತೆಗೆ ಕಾರಣ ತಿಳಿಸಿದ ಬಿಸಿಸಿಐ; ಏನಾಗಿದೆ ಅವರಿಗೆ?

ಮುಂಬಯಿ : ಜನವರಿ 10ರಂದು ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕ ದಿನ ಸರಣಿಯ ವೇಗದ ಬೌಲರ್​ ಜಸ್​ಪ್ರಿತ್​ ಬುಮ್ರಾ ಯಾಕೆ ಅಲಭ್ಯರಾಗಿದ್ದಾರೆ ಎಂಬ ಮಾಹಿತಿಯನ್ನು ಬಿಸಿಸಿಐ ಪ್ರಕಟಿಸಿದೆ. ಅಲ್ಲದೆ, ಅವರು ಆಡದಿರುವ ಹೊರತಾಗಿಯೂ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂಬುದಾಗಿಯೂ ಇದೇ ವೇಳೆ ಪ್ರಕಟಿಸಿದೆ.

ಬಿಸಿಸಿಐನ ಅಧಿಕೃತ ವೆಬ್​ಸೈಟ್​ ಬಿಸಿಸಿಐ ಟಿವಿಯಲ್ಲಿ ಈ ಕುರಿತು ಅಧಿಕೃತ ಮಾಹಿತಿ ಹೊರಡಿಸಲಾಗಿದೆ. ಜಸ್​ಪ್ರಿತ್​ ಬುಮ್ರಾ ಅವರು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಲು ಗುವಾಹಟಿಗೆ ತೆರಳಬೇಕಾಗಿತ್ತು. ಆದಾಗ್ಯೂ ಕೊನೇ ಹಂತದಲ್ಲಿ ಅವರು ಪ್ರಯಾಣ ಮಾಡಿಲ್ಲ. ಅವರು ಬೌಲಿಂಗ್​ ಮಾಡುವುದಕ್ಕೆ ಇನಷ್ಟು ಸಮಯ ಬೇಕಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಪ್ರಕಟಣೆಯಲ್ಲಿ ಹೇಳಲಾಗಿದೆ. ಹಿರಿಯರ ಕ್ರಿಕೆಟ್​ ಸಮಿತಿ ಬದಲಿ ಆಟಗಾರನನ್ನೂ ಸೂಚಿಸಿಲ್ಲ ಎಂಬುದಾಗಿಯೂ ಹೇಳಿದೆ.

ಆರು ದಿನಗಳ ಹಿಂದೆ ಜಸ್​ಪ್ರಿತ್​ ಬುಮ್ರಾ ಅವರು ಲಂಕಾ ವಿರುದ್ಧದ ಏಕ ದಿನ ಸರಣಿಯಲ್ಲಿ ಆಡಲಿದ್ದಾರೆ ಎಂದು ಘೋಷಿಸಲಾಗಿತ್ತು. ಅಲ್ಲದೆ, ಪರಿಷ್ಕೃತ ಭಾರತ ತಂಡವನ್ನೂ ಪ್ರಕಟಿಸಲಾಗಿತ್ತು. ಅದರೀಗ ಕೊನೇ ಹಂತದಲ್ಲಿ ಅವರನ್ನು ಆಡಿಸದೇ ಇರಲು ಯೋಜನೆ ರೂಪಿಸಲಾಗಿದೆ.

ಲಂಕಾ ವಿರುದ್ಧ ಆಡಲಿರುವ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಬ್ಮನ್​ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್​ಕೀಪರ್), ಇಶಾನ್ ಕಿಶನ್ (ವಿಕೆಟ್​ಕಿಪರ್​), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯಜ್ವೇಂದ್ರ ಚಾಹಲ್, ಕುಲ್ಪ್ದೀಪ್​ ಯಾದವ್, ಅಕ್ಸರ್ ಪಟೇಲ್, ಮೊಹಮ್ಮದ್ಶ ಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್​​ದೀಪ್ ಸಿಂಗ್.

Exit mobile version