Site icon Vistara News

Fabian Allen: ವಿಂಡೀಸ್​ ಆಟಗಾರನ ಹಣೆಗೆ ಗನ್​ ತೋರಿಸಿ ದರೋಡೆ!

Fabian Allen

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರು ಐಪಿಎಲ್​ ಮಾದರಿಯ ಟಿ20 ಕ್ರಿಕೆಟ್​ ಲೀಗ್(SA20)​ ವೇಳೆ ವೆಸ್ಟ್​ ಇಂಡೀಸ್​(West Indies) ತಂಡದ ಆಟಗಾರ ಫ್ಯಾಬಿಯನ್‌ ಅಲೆನ್‌(Fabian Allen) ಅವರ ಹಣೆಗೆ ಗನ್​ ಹಿಡಿದು ಅವರ ಬಳಿ ಇದ್ದ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿದ ಘಟನೆ ನಡೆದಿದೆ.

ದರೋಡೆಕೋರರು ಫ್ಯಾಬಿಯನ್‌ ಅಲೆನ್​ ಅವರ ಮೊಬೈಲ್ ಫೋನ್, ಬ್ಯಾಗ್‍ನಲ್ಲಿದ್ದ ಇತರ ವಸ್ತುಗಳನ್ನು ಮತ್ತು ಕ್ರಿಕೆಟ್​ ಕಿಟ್​ಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪರ್ಲ್ ರಾಯಲ್ಸ್(Paarl Royals) ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಸ್ಪಷ್ಟಪಡಿಸಿದೆ.

ಘಟನೆಯಲ್ಲಿ ಅಲೆನ್ ಪ್ರಾಣಾಪಾಯದಿಂದ ಪಾರಾಗಿದ್ದು ಸುರಕ್ಷಿತವಾಗಿದ್ದಾರೆ. ಸೌತ್​ ಆಫ್ರಿಕಾ ಸೂಪರ್ ಲೀಗ್ ಅಂಗವಾಗಿ ಪರ್ಲ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಅಲೆನ್, ಜೋಹಾನ್ಸ್‍ಬರ್ಗ್‍ನ ನ್ಯೂವಂಡಸರ್ಸ್ ಮೈದಾನದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಕ್ರೀಡಾಂಗಣಕ್ಕೆ ಹೊರಡಲು ಹೊಟೇಲ್‍ನಿಂದ ಹೊರಬರುತ್ತಿದ್ದಂತೆ ದರೋಡೆಕೋರರು ಅವರನ್ನು ಸುತ್ತುವರಿದು ಹಣೆಗೆ ಗನ್‍ ಹಿಡಿದು ದರೋಡೆ ಮಾಡಿದ್ದಾರೆ.

ಇದನ್ನೂ ಓದಿ IND vs ENG: ಮೂರು ವಿಕೆಟ್​ ಕಿತ್ತು ಕನ್ನಡಿಗ ಚಂದ್ರಶೇಖರ್‌ ದಾಖಲೆ ಮುರಿದ ಅಶ್ವಿನ್

ಈ ಘಟನೆ ಬಗ್ಗೆ ವೆಸ್ಟ್​ ಇಂಡೀಸ್​ ಕ್ರಿಕೆಟ್ ಮಂಡಳಿಯು ದಕ್ಷಿಣ ಆಫ್ರಿಕಾದಲ್ಲಿರುವ ತಮ್ಮ ರಾಯಭಾರಿ ಕಛೇರಿಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆ. ಅಲ್ಲದೆ ತಮ್ಮ ರಾಷ್ಟ್ರದ ಕ್ರಿಕೆಟ್​ ಆಟಗಾರರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಗೆ ಮನವಿ ಮಾಡಿದೆ. ಜೋಹಾನ್ಸ್‍ಬರ್ಗ್‍ನಲ್ಲಿ ಕ್ರಿಕೆಟಿಗರ ದರೋಡೆ ಮಾಡಿರುವ ಪ್ರಕರಣವು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು. ಆಫ್ರಿಕಾ ಕಂಡದ ಕೆಲ ಬಡ ರಾಷ್ಟ್ರಗಳ ಜನರು ತಮ್ಮ ಜಿವನೋಪಯಕ್ಕಾಗಿ ಈ ರೀತಿ ದರೋಡೆ ಮಾಡುವುದು ಸರ್ವೆ ಸಾಮಾನ್ಯ. ಸದ್ಯ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದೇವೆ ಎಂದು ಇಲ್ಲಿನ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

28 ವರ್ಷದ ಆಲ್​ರೌಂಡರ್​ ಫ್ಯಾಬಿಯನ್​ ಅಲೆನ್​ ವೆಸ್ಟ್​ ಇಂಡೀಸ್​ ತಂಡದ ಪರ 20 ಏಕದಿನ, 34 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 200 ಹಾಗೂ ಟಿ20ಯಲ್ಲಿ 267 ರನ್​ ಗಳಿಸಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ಪರ ಆಡಿದ್ದಾರೆ. ಒಟ್ಟು 5 ಐಪಿಎಲ್​ ಪಂದ್ಯಗಳನ್ನಾಡಿ 14 ರನ್​ ಮಾತ್ರ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ ಏಕದಿನ ಮತ್ತು ಟಿ20ಯಲ್ಲಿ ಕ್ರಮವಾಗಿ 7 ಮತ್ತು 24 ವಿಕೆಟ್​ ಕಿತ್ತಿದ್ದಾರೆ.

Exit mobile version