ನವದೆಹಲಿ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸುಳ್ಳು ಸುದ್ದಿಗಳ ಬಗ್ಗೆ ಕೆಂಡಮಂಡಲರಾಗಿದ್ದಾರೆ. ನಿರ್ಮಾಣ ಹಂತದಲ್ಲಿರುವ ಅಲಿಬಾಗ್ ಫಾರ್ಮ್ಹೌಸ್ನಲ್ಲಿ ತಾನು ಪಿಚ್ ಸಿದ್ಧಪಡಿಸುತ್ತಿದ್ದೇನೆ ಎಂಬ ಸುದ್ದಿ ವರದಿಯನ್ನು ಖಂಡಿಸಿದ್ದಾರೆ. ಮುಂಬೈನ ತಮ್ಮ ಮನೆಯಲ್ಲಿರುವ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಅಲಿಬಾಗ್ನಲ್ಲಿರುವ ಫಾರ್ಮ್ ಹೌಸ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು. ದಂಪತಿ ಅಲಿಬಾಗ್ನ ಜಿರಾದ್ ಗ್ರಾಮದಲ್ಲಿ 8 ಎಕರೆ ಭೂಮಿಯಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲಿ ಅವರು ಐಷಾರಾಮಿ ತೋಟದ ಮನೆಯನ್ನು ನಿರ್ಮಿಸಲಿದ್ದಾರೆ ಎಂದು ಬರೆದುಕೊಂಡಿತ್ತು.
34 ವರ್ಷದ ಕ್ರಿಕೆಟಿಗ ಫಾರ್ಮ್ ಹೌಸ್ ಒಳಗೆ ಕ್ರಿಕೆಟ್ ಪಿಚ್ ಕೂಡ ನಿರ್ಮಿಸುತ್ತಿದ್ದಾರೆ ಎಂದು ವರದಿಯಲ್ಲಿ ಬರೆಯಲಾಗಿತ್ತು. ಹಸಿರಿನಿಂದ ಕೂಡಿದ ಪಿಚ್ ನಿರ್ಮಿಸಲು ದಂಪತಿ ತಮ್ಮ ಆರ್ಕಿಟೆಕ್ಟ್ಗೆ ವಿವರಿಸಿದ್ದಾರೆ ಎಂದು ವರದಿಯಲ್ಲಿ ಬರೆಯಲಾಗಿತ್ತು.
ಇನ್ಸ್ಟಾಗ್ರಾಮ್ ಮೂಲಕ, ವಿರಾಟ್ ಕೊಹ್ಲಿ ಸುದ್ದಿಯನ್ನು ಸಂಪೂರ್ಣವಾಗಿ ನಿರಾಕರಿಸಿ ಪೋಸ್ಟ್ ಮಾಡಿದ್ದಾರೆ. ಪ್ರಸಿದ್ಧ ಮಾಧ್ಯಮ ಸಂಸ್ಥೆ ಕೂಡ ಈಗ ‘ನಕಲಿ ಸುದ್ದಿಗಳನ್ನು’ ಪ್ರಕಟಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.. ಅವರು ‘ಬಚ್ಪನ್ ಸೆ ಜೋ ಅಖ್ಬಾರ್ ಪಡಾ ಹೈ, ವೋಹ್ ಭಿ ಫೇಕ್ ನ್ಯೂಸ್ ಚಾಪ್ನೆ ಲಗೆ ಅಬ್’ ಎಂದು ಬರೆದಿದ್ದಾರೆ.
ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮತ್ತೆ ದೀರ್ಘ ಅವಧಿಯ ರಜೆ! ಯಾಕೆ ಗೊತ್ತೇ?
ದಂಪತಿ ಪ್ರಸ್ತುತ ಮುಂಬೈನಲ್ಲಿ ಸಮುದ್ರ ಮುಖದ ಐಷಾರಾಮಿ ಅಪಾರ್ಟ್ಮೆಂಟ್ನ್ಲ್ಲಿ ವಾಸಿಸುತ್ತಿದ್ದಾರೆ. ಅವರು ಗುರುಗ್ರಾಮದಲ್ಲಿ ಬಂಗಲೆಯನ್ನೂ ಹೊಂದಿದ್ದಾರೆ. ಕೊಹ್ಲಿ ದೆಹಲಿ ಮೂಲದವರಾಗಿದ್ದು, ತಮ್ಮ ಕುಟುಂಬವನ್ನು ಭೇಟಿ ಮಾಡುವಾಗ ಹೆಚ್ಚಾಗಿ ಬಂಗಲೆಯಲ್ಲಿಯೇ ಉಳಿಯುತ್ತಾರೆ.
Chutti hai fir bhi bhaagna toh padega 😁🏃 pic.twitter.com/BwNVLDs2O9
— Virat Kohli (@imVkohli) August 15, 2023
ಕೆಲವು ದಿನಗಳ ಹಿಂದೆ, ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಪ್ರತಿ ಪೋಸ್ಟ್ಗೆ 11.45 ಕೋಟಿ ರೂ.ಗಳನ್ನು ಪಡೆಯುವುದನ್ನು ನಿರಾಕರಿಸಿದ್ದರು. ಇದಕ್ಕೂ ಮುನ್ನ, ಕೊಹ್ಲಿ ಜಿಮ್ನಲ್ಲಿ ತಮ್ಮ ತಾಲೀಮಿನ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದರು. ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯಂದು ಸಾರ್ವಜನಿಕ ರಜಾದಿನವನ್ನು ಉಲ್ಲೇಖಿಸಿ ಕೊಹ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ “ಚುಟ್ಟಿ ಹೈ ಫಿರ್ ಭಿ ಭಾಗ್ನಾ ತೋ ಪಡೇಗಾ” ಎಂದು ಬರೆದಿದ್ದಾರೆ.