Site icon Vistara News

T20 World Cup | ಟೂರ್ನಿಯ ಶ್ರೇಷ್ಠ ಆಟಗಾರರ ಆಯ್ಕೆಗೆ ವೋಟ್‌ ಮಾಡಲು ಅಭಿಮಾನಿಗಳಿಗೂ ಅವಕಾಶ

virat kohli

ಮೆಲ್ಬೋರ್ನ್‌ : ಈ ಬಾರಿಯ ಟಿ೨೦ ವಿಶ್ವ ಕಪ್‌ನ (T20 World Cup) ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗಾಗಿ ಐಸಿಸಿ ೯ ಆಟಗಾರರನ್ನು ಆಯ್ಕೆ ಮಾಡಿದೆ. ಅವರಲ್ಲೊಬ್ಬರು ಫೈನಲ್ ಪಂದ್ಯದ ಬಳಿಕ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲಿದ್ದಾರೆ. ಹೊಸತು ಏನೆಂದರೆ, ಈ ಬಾರಿ ಕ್ರಿಕೆಟ್‌ ಅಭಿಮಾನಿಗಳು ಕೂಡ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗಾಗಿ ವೋಟ್‌ ಮಾಡಬಹುದು.

೯ ಆಟಗಾರರ ಪೈಕಿ ಭಾರತದ ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಹಾಲಿ ಆವೃತ್ತಿಯಲ್ಲಿ ಒಟ್ಟಾರೆ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದು ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ಎರಡು ವಿಶ್ವ ಕಪ್‌ಗಳಲ್ಲಿ ಉತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದು, ಹಾಲಿ ಆವೃತ್ತಿಯಲ್ಲೂ ಫೇವರಿಟ್‌ ಎನಿಸಿಕೊಂಡಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಕೂಡ ವಿಶ್ವ ಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದಾಗ್ಯೂ ಅವರು ಸೆಮಿಫೈನಲ್‌ನಲ್ಲಿ ಬೇಗ ವಿಕೆಟ್‌ ಒಪ್ಪಿಸಿದ್ದರು.

ಫೈನಲ್‌ಗೆ ಎಂಟ್ರಿ ಪಡೆದಿರುವ ಪಾಕಿಸ್ತಾನದ ಆಲ್‌ರೌಂಡರ್‌ ಶದಾಬ್‌ ಖಾನ್‌ ಹಾಗೂ ವೇಗದ ಬೌಲರ್‌ ಶಹೀನ್‌ ಶಾ ಅಫ್ರಿದಿ ಈ ಪಟ್ಟಿಯಲ್ಲಿದ್ದಾರೆ. ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿರುವ ಇಂಗ್ಲೆಂಡ್‌ ತಂಡದ ಮೂವರು ಆಟಗಾರರು ಪಟ್ಟಿಯಲ್ಲಿದ್ದಾರೆ. ಸ್ಯಾಮ್‌ ಕರನ್ ಇಂಗ್ಲೆಂಡ್‌ ತಂಡದ ಆದ್ಯ ಆಟಗಾರನಾಗಿದ್ದರೆ, ಜೋಸ್ ಬಟ್ಲರ್‌ ಹಾಗೂ ಅಲೆಕ್ಸ್‌ ಹೇಲ್ಸ್‌ ಮತ್ತಿಬ್ಬರು ಆಟಗಾರರೆನಿಸಿಕೊಂಡಿದ್ದಾರೆ.

ಜಿಂಬಾಬ್ವೆ ತಂಡ ಸೂಪರ್-೧೨ ಹಂತಕ್ಕಿಂತ ಮೇಲೆ ಬಂದಿಲ್ಲ. ಆದರೆ, ಅ ತಂಡದ ಸಿಕಂದರ್‌ ರಾಜಾ ಅಬ್ಬರದ ಪ್ರದರ್ಶನ ನೀಡಿದ್ದರು. ೨೧೯ ರನ್‌ ಹಾಗೂ ೧೦ ವಿಕೆಟ್‌ ಪಡೆಯುವ ಮೂಲಕ ಆಲ್‌ರೌಂಡ್‌ ಅಟ ಪ್ರದರ್ಶಿಸಿದ್ದಾರೆ. ಹೀಗಾಗಿ ಅವರು ೯ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ಸ್ಪಿನ್ನರ್‌ ವಾನಿಂದು ಹಸರಂಗ ಈ ಪಟ್ಟಿಯಲ್ಲಿರುವ ಕೊನೇ ಆಟಗಾರ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ | IND vs ENG | ಟಿ20 ವಿಶ್ವ ಕಪ್‌ನಲ್ಲಿ ಬಟ್ಲರ್‌- ಅಲೆಕ್ಸ್‌ ಹೇಲ್ಸ್‌ ವಿಶ್ವ ದಾಖಲೆ, ಓಪನರ್‌ಗಳ ಸಾಧನೆಯೇನು?

Exit mobile version