ರಾಂಚಿ : ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvsNZ T20) ಮೊದಲ ಪಂದ್ಯದಲ್ಲಿ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಟ್ರೋಲ್ಗೆ ಒಳಗಾಗಿದ್ದಾರೆ. ಅವರು ಇನಿಂಗ್ಸ್ನ ಕೊನೇ ಓವರ್ನಲ್ಲಿ ನೋಬಾಲ್ ಸಮೇತ 27 ರನ್ಗಳನ್ನು ಬಿಟ್ಟುಕೊಡುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೆ ಬೇಸರ ಮೂಡಿಸಿದರು. ಅರ್ಶ್ದೀಪ್ ಅವರ ಆ ಓವರ್ನಲ್ಲಿ ಎದುರಾಳಿ ತಂಡದ ಬ್ಯಾಟರ್ ಮೂರು ಸಿಕ್ಸರ್ ಹಾಗೂ ಒಂದು ಫೋರ್ ಬಾರಿಸಿದ್ದಾರೆ.
19ನೇ ಓವರ್ ಮುಕ್ತಾಯದ ವೇಳೆಗೆ ಎದುರಾಳಿ ನ್ಯೂಜಿಲ್ಯಾಂಡ್ ತಂಡ 6 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಕೊನೇ ಓವರ್ ಎಸೆಯಲು ಚೆಂಡನ್ನು ಅರ್ಶ್ದೀಪ್ ಸಿಂಗ್ ಕೈಗಿತ್ತಿದ್ದರು. ಮೊದಲ ಎಸೆತದಲ್ಲಿಯೇ ಬ್ಯಾಟರ್ ಡ್ಯಾರಿಲ್ ಮಿಚೆಲ್ ಸಿಕ್ಸರ್ ಬಾರಿಸಿದ್ದರು. ಆ ಎಸೆತವನ್ನು ಕ್ರೀಸ್ಗಿಂತ ಮುಂದೆ ಹೆಜ್ಜೆ ಇಟ್ಟು ಎಸೆದಿದ್ದರು ಯುವ ಬೌಲರ್ ಅರ್ಶ್ದೀಪ್ ಸಿಂಗ್. ಹೀಗಾಗಿ ನ್ಯೂಜಿಲ್ಯಾಂಡ್ ತಂಡಕ್ಕೆ ನೊಬಾಲ್ ರನ್ ಜತೆ ಏಳು ರನ್ ಬೋನಸ್ ಸಿಕ್ಕಿದಂತಾಯಿತು. ನಂತರದ ಎಸೆತ ಫ್ರೀ ಹಿಟ್. ಅದರಲ್ಲೂ ಡ್ಯಾರಿಲ್ ಮಿಚೆಲ್ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲೂ ಸಿಕ್ಸರ್. ನಂತರದ ಎಸೆತದಲ್ಲಿ ಫೋರ್. ಬಳಿಕ ಎರಡು ಬಾರಿ ಎರಡೆರಡು ರನ್ಗಳನ್ನು ಕಬಳಿಸಿದ ನ್ಯೂಜಿಲ್ಯಾಂಡ್ ಬ್ಯಾಟರ್ಗಳು 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿದರು.
ಕೊನೇ ಹಂತದಲ್ಲಿ ನೋ ಬಾಲ್ ಎಸೆಯುವ ಮೂಲಕ ಅರ್ಶ್ದೀಪ್ ಸಿಂಗ್ ಈ ಹಿಂದೆಯೂ ಟೀಕೆಗೆಗ ಒಳಗಾಗಿದ್ದರು. ಇದೀಗ ಮತ್ತೊಮ್ಮೆ ಅದೇ ಮಾದರಿಯ ತಪ್ಪು ಎಸಗಿದ್ದಾರೆ. ಜತೆಗೆ ನಾಲ್ಕು ಓವರ್ಗಳ ಸ್ಪೆಲ್ನಲ್ಲಿ 51 ರನ್ ನೀಡಿದರು. ಈ ಮೂಲಕವೂ ಅವರು ಚುಟುಕು ಕ್ರಿಕೆಟ್ಗೆ ಸೂಕ್ತವಲ್ಲ ಎಂಬುದನ್ನು ಸಾಬೀತುಪಡಿಸಿದರು.
ಇದನ್ನೂ ಓದಿ : INDvs IND T20 | ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯ; ಭಾರತ ತಂಡಕ್ಕೆ 177 ರನ್ಗಳ ಗೆಲುವಿನ ಗುರಿ