Site icon Vistara News

Shubman Gill: ಮತ್ತೆ ಬ್ಯಾಟಿಂಗ್​ ವೈಫಲ್ಯ; ಸಿಕ್ಕಾಪಟ್ಟೆ ಟ್ರೋಲ್​ ಆದ ಶುಭಮನ್​ ಗಿಲ್​

Shubman Gill

ಹೈದರಾಬಾದ್​: ಭಾರತ ತಂಡದ ಭರವಸೆಯ ಬ್ಯಾಟರ್​ ಎಂದೇ ಗುರುತಿಸಿಕೊಂಡಿದ್ದ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ‘ರಾಯರ ಕುದುರೆ ಕತ್ತೆ ಆಯಿತು’ ಎನ್ನುವ ಮಾತಿನಂತೆ ಬ್ಯಾಟಿಂಗ್​ ಫಾರ್ಮ್ ಕಳೆದುಕೊಂಡು ತಮ್ಮ ಮೇಲಿಟ್ಟ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದೇ ವಿಚಾರವಾಗಿ ಅವರನ್ನು ಟ್ರೋಲ್​ ಮಾಡಲಾರಂಭಿಸಿದ್ದಾರೆ.

ಹೌದು, ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ರನ್ ಮಳೆಯನ್ನೇ ಸುರಿಸಿದ ಗಿಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಮಂಕಾಗಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನ(India vs England 1st Test) ಎರಡೂ ಇನಿಂಗ್ಸ್​ನಲ್ಲಿಯೂ ಅವರು ನಿರೀಕ್ಷಿತ ಬ್ಯಾಟಿಂಗ್​ ತೋರ್ಪಡಿಸುವಲ್ಲಿ ಎಡವಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ 23 ರನ್​ ಬಾರಿಸಿದ್ದ ಗಿಲ್​ ದ್ವಿತೀಯ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ವಿಕೆಟ್​ ಕಳೆದುಕೊಂಡರು. ಈ ಮೂಲಕ ಕಳೆದ 11 ಟೆಸ್ಟ್​ ಇನಿಂಗ್ಸ್​ನಲ್ಲಿ ಕನಿಷ್ಠ 50 ರನ್​ ಗಡಿ ದಾಟಲು ವಿಫಲರಾದರು.

ಇದನ್ನೂ ಓದಿ Ollie Pope: ಅಲೆಸ್ಟರ್ ಕುಕ್ ದಾಖಲೆ ಮುರಿದ ಓಲಿ ಪೋಪ್

ಶುಭಮನ್​ ಗಿಲ್​ ಅವರ ಈ ಕಳಪೆ ಫಾರ್ಮ್ ಹೀಗೆ ಮುಂದುವರಿದರೆ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಬಾಗಿಲು ಬಂದ್​ ಆಗುವ ಸಾಧ್ಯತೆಯೂ ಅಧಿಕವಾಗಿದೆ. ಈಗಾಗಲೇ ಅವರನ್ನು ತಂಡದಿಂದ ಕೈ ಬಿಡಬೇಕು ಎಂದು ಟೀಮ್​ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳು ವಿಚಿತ್ರ ರೀತಿಯಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

ಕಳೆದ 11 ಟೆಸ್ಟ್‌ ಇನಿಂಗ್ಸ್‌ನಲ್ಲಿ ಗಿಲ್​ ಗಳಿಸಿದ ಮೊತ್ತ


13, 8, 6, 10, 29*, 2, 26, 36, 10, 23, 0. ಇದು ಶುಭಮನ್​ ಗಿಲ್​ ಅವರು ಕಳೆದ 11 ಟೆಸ್ಟ್ ಇನಿಂಗ್ಸ್​ನಲ್ಲಿ ಗಳಿಸ ಮೊತ್ತವಾಗಿದೆ. ದ್ವಿತೀಯ ಟೆಸ್ಟ್​ ಪಂದ್ಯದಲ್ಲಾದರೂ ಎಚ್ಚೆತ್ತುಕೊಂಡು ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರದೇ ಹೋದರೆ ಅವರನ್ನು ತಂಡದಿಂದ ಕೈಬಿಡುವುದು ಬಹುತೇಕ ಖಚಿತ ಎನ್ನಬಹುದು.

ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆ ಕಾರಣವೇ?


ಶುಭಮನ್​ ಗಿಲ್​ ಅವರು ಆರಂಭಿಕ ಬ್ಯಾಟರ್​ ಆಗಿದ್ದಾರೆ. ಟೆಸ್ಟ್​ನಲ್ಲಿ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಇದು ಕೂಡ ಅವರ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ಎನ್ನಬಹುದು. ಏಕೆಂದರೆ ಅವರು ಆರಂಭಿಕನಾಗಿ ಆಡಿದ ಟೆಸ್ಟ್​ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದಾರೆ. ಒಟ್ಟಾರೆ ಅವರಿಗೆ ಬ್ಯಾಟಿಂಗ್​ ಕ್ರಮಾಂಕದ ಬದಲಾವಣೆ ಕುತ್ತು ತಂದಿದೆ.

Exit mobile version