Site icon Vistara News

Team India | ಸಂಜು ಅಭಿಮಾನಿಗಳ ಜತೆ ಟೀಮ್‌ ಇಂಡಿಯಾ ಆಟಗಾರರ ಸಂಭ್ರಮ

team india

ತಿರುವನಂತಪುರ : ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಯ ಮೊದಲ ಪಂದ್ಯದಲ್ಲಿ ಪಾಲ್ಗೊಳ್ಳಲು ಟೀಮ್‌ ಇಂಡಿಯಾದ (Team India) ಆಟಗಾರರು ತಿರುವನಂತಪುರಕ್ಕೆ ಹೋಗಿದ್ದಾರೆ. ಸೆಪ್ಟೆಂಬರ್‌ ೨೮ರಂದು ಇತ್ತಂಡಗಳ ನಡುವೆ ಹಣಾಹಣಿ ನಡೆಯಲಿದ್ದು, ಮಂಗಳವಾರ ಅಭ್ಯಾಸ ಒಂದು ದಿನದ ಅಭ್ಯಾಸ ನಡೆಸಲಿದೆ. ಏತನ್ಮಧ್ಯೆ, ಟೀಮ್ ಇಂಡಿಯಾದ ಆಟಗಾರರು ಹೋದಲೆಲ್ಲ ಅವರಿಗೆ ಸಂಜು ಸ್ಯಾಮ್ಸನ್ ಅಭಿಮಾನಿಗಳು ಎದುರಾಗಿದ್ದಾರೆ. ಅವರೆಲ್ಲರೂ ಸಂಜು ಅಭಿಮಾನಿಗಳ ಜತೆಗಿನ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.

ಸೋಮವಾರ ಭಾರತ ತಂಡದ ಆಟಗಾರರು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಹೋಗುವ ದಾರಿಯಲ್ಲಿ ಸಂಜು ಸ್ಯಾಮ್ಸನ್‌ ಅವರ ಅಭಿಮಾನಿಗಳು ಕ್ರಿಕೆಟಿಗರಿದ್ದ ಬಸ್‌ಗೆ ಸುತ್ತುವರಿದಿದ್ದಾರೆ. ಅಂತೆಯೇ ಸೂರ್ಯಕುಮಾರ್‌ ಯಾದವ್ ಅವರು ಸಂಜು ಸ್ಯಾಮ್ಸನ್‌ ಅವರ ಫೋಟೊವನ್ನು ಅಭಿಮಾನಿಗಳಿಗೆ ತೋರಿಸಿ ಖುಷಿ ಪಟ್ಟಿದ್ದಾರೆ. ಅಂತೆಯೇ ಸ್ಪಿನ್ನರ್ ಆರ್‌. ಅಶ್ವಿನ್‌ ಅವರು ಸಂಜು ಅವರ ಅಭಿಮಾನಿಗಳ ಜತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಯಜ್ವೇಂದ್ರ ಚಹಲ್‌ ಅವರೂ ಸ್ಯಾಮ್ಸನ್‌ ಅಭಿಮಾನಿಗಳ ಹರ್ಷೋದ್ಘಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ | IND VS SA | ಕೇರಳದ ಅನಂತಪದ್ಮನಾಭ ಸ್ವಾಮಿ ದೇಗುಲ ಪ್ರವೇಶಿಸಿದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ

Exit mobile version