Site icon Vistara News

Ind vs Aus : ಭಾರತ ತಂಡ ಕಳಪೆ ಫೀಲ್ಡಿಂಗ್​; ನಿಮಗಿಂತ ಶಾಲಾ ಮಕ್ಕಳೇ ಬೆಸ್ಟ್​ ಎಂದರು ಅಭಿಮಾನಿಗಳು

indvsaus

ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ (ಸೆಪ್ಟೆಂಬರ್ 22) ನಡೆಯುತ್ತಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ಕೆ.ಎಲ್.ರಾಹುಲ್ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಫಾರ್ಮ್ ನಲ್ಲಿರುವ ಮಿಚೆಲ್ ಮಾರ್ಷ್ (4 ಎಸೆತಗಳಲ್ಲಿ 4 ರನ್) ಅವರನ್ನು ಮೊದಲ ಓವರ್ ನಲ್ಲಿಯೇ ಔಟ್ ಮಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.

ಸ್ಟೀವ್ ಸ್ಮಿತ್ (60 ಎಸೆತಗಳಲ್ಲಿ 41 ರನ್) ಮತ್ತು ಡೇವಿಡ್ ವಾರ್ನರ್ (53 ಎಸೆತಗಳಲ್ಲಿ 52 ರನ್) 106 ಎಸೆತಗಳಲ್ಲಿ 94 ರನ್​​ಗಳ ಜೊತೆಯಾಟದೊಂದಿಗೆ ಆಸ್ಟ್ರೇಲಿಯಾದ ಇನ್ನಿಂಗ್ಸ್ ಉತ್ತಮವಾಗಿ ಸಾಗಿತು. ಆದಾಗ್ಯೂ, ಶಾರ್ದೂಲ್ ಠಾಕೂರ್ ಎಸೆದ ಇನ್ನಿಂಗ್ಸ್​​ನ ಒಂಬತ್ತನೇ ಓವರ್​​ನಲ್ಲಿ ವಾರ್ನರ್​ಗೆ ಶ್ರೇಯಸ್ ಅಯ್ಯರ್ ಜೀವ ನೀಡಿದರು.

ಆ ಓವರ್​​ನ ಕೊನೆಯ ಎಸೆತದಲ್ಲಿ, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ವಾರ್ನರ್​​ ​ ಚೆಂಡನ್ನು ಶ್ರೇಯಸ್ ಅಯ್ಯರ್​ ಕಡೆಗೆ ತಪ್ಪಾಗಿ ಹೊಡೆದರು. ಆದರೆ, ಅಯ್ಯರ್​ ಸುಲಭ ಕ್ಯಾಚ್ ಕೈಚೆಲ್ಲುವ ಮೂಲಕ ಅವರಿಗೆ ಜೀವದಾನ ನೀಡಿದರು. 14 ರನ್​ಗೆ ಔಟಾಗಬೇಕಿದ್ದ ವಾರ್ನರ್​ ಅರ್ಧ ಶತಕ ಬಾರಿಸಿದರು.

ಕಳಪೆ ಕೀಪಿಂಗ್

ರವೀಂದ್ರ ಜಡೇಜಾ ಎಸೆದ 23ನೇ ಓವರ್​ನಲ್ಲಿ ಕೆಎಲ್ ರಾಹುಲ್ 11 ರನ್​​ಗಳಿಗೆ ಮಾರ್ನಸ್ ಲಾಬುಶೇನ್ ಅವರನ್ನು ರನ್​ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡರು. ಓವರ್​ಬನ ಮೊದಲ ಎಸೆತದಲ್ಲಿ, ಲಾಬುಶೇನ್ ಚೆಂಡನ್ನು ಕವರ್ ಕಡೆಗೆ ತಳ್ಳಿ ಸಿಂಗಲ್​ಗಾಗಿ ಓಡಿದರು. ಸೂರ್ಯಕುಮಾರ್ ಯಾದವ್ 30 ಯಾರ್ಡ್ ವೃತ್ತದೊಳಗೆ ಅದನ್ನು ತಡೆಯುವಲ್ಲಿ ಯಶಸ್ವಿಯಾದರು, ಇಬ್ಬರೂ ಬ್ಯಾಟರ್​ಗಳು ಪಿಚ್ ಮಧ್ಯೆ ಸಿಲುಕಿಕೊಂಡರು. ರನ್ ಔಟ್ ಅವಕಾಶವನ್ನು ಗ್ರಹಿಸಿದ ಸೂರ್ಯಕುಮಾರ್ ಬೇಗನೆ ಚೆಂಡನ್ನು ಸ್ಟ್ರೈಕರ್ ನ ತುದಿಗೆ ಎಸೆದರು. ಆದರೆ ನಾಯಕ ಕೆಎಲ್ ರಾಹುಲ್ ಚೆಂಡನ್ನು ಪಡೆದ ಔಟ್​ ಮಾಡಲು ವಿಫಲರಾದರು. ಲಾಬುಜೇಶ್​ನಗೆ ಜೀವದಾನ ಸಿಕ್ಕಿತು.

ಇದನ್ನೂ ಓದಿ : World Cup 2023 : ಏಕ ದಿನ ವಿಶ್ವ ಕಪ್​ನ ಬಹುಮಾನ ಎಷ್ಟು ಗೊತ್ತೇ? ಇಲ್ಲಿದೆ ಎಲ್ಲ ವಿವರ

ಭಾರತ ತಂಡದ ಫೀಲ್ಡಿಂಗ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತು. ವಿಶ್ವ ಕಪ್​ ಟೂರ್ನಿಗೆ ಇನ್ನು ಎರಡು ವಾರಗಳು ಬಾಕಿ ಇರುವಾಗ ಇಂಥ ಕಳಪೆ ಫೀಲ್ಡಿಂಗ್ ಮಾಡುವುದು ಎಷ್ಟು ಸರಿ ಎಂಬುದಾಗಿ ಅವರು ಪ್ರಶ್ನಸಿದರು. ಭಾರತ ತಂಡದ ಫೀಲ್ಡಿಂಗ್ ಸಾಮರ್ಥ್ಯವನ್ನು ಕುಹಕ ಮಾಡಿದರು.

ಫೀಲ್ಡಿಂಗ್​ನಲ್ಲಿ ಭಾರತದ ಕಳಪೆ ಸಾಧನೆ

ಭಾರತದ ಫೀಲ್ಡಿಂಗ್ ತಜ್ಞರಿಂದ ಟೀಕೆಗೆ ಒಳಗಾಗಿವೆ. ಏಷ್ಯಾಕಪ್ 2023ರಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತೀಯ ಫೀಲ್ಡರ್​ಗಳು ಹಲವು ಕ್ಯಾಚ್​​ಗಳನ್ನು ಹಿಡಿದಿದ್ದರು. ಆ ಪಂದ್ಯದ ನಂತರ, ಭಾರತದ ಕಳಪೆ ಕ್ಯಾಚ್ ದಕ್ಷತೆಯ ದರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ರೋಹಿತ್ ಶರ್ಮಾ ನೇತೃತ್ವದ ತಂಡವು 2019 ರ ವಿಶ್ವಕಪ್ ನಂತರ 75.1% ರಷ್ಟು ಕೆಟ್ಟ ರೇಟಿಂಗ್ಸ್​​ ಹೊಂದಿದೆ. 71.2% ಕ್ಯಾಚ್ ದಕ್ಷತೆಯ ಪ್ರಮಾಣವನ್ನು ಹೊಂದಿರುವ ಅಫ್ಘಾನಿಸ್ತಾನ 10ನೇ ಸ್ಥಾನ ಹೊಂದಿದ್ದರೆ ಭಾರತ 9ನೇ ಸ್ಥಾನದಲ್ಲಿದೆ.

Exit mobile version