Site icon Vistara News

Team India : ಭಾರತ ತಂಡದ ಹೊಸ ಜೆರ್ಸಿಯ ರೇಟ್​ ಕೇಳಿ ಬೆಚ್ಚಿದ ಅಭಿಮಾನಿಗಳು, ಡೂಪ್ಲಿಕೇಟ್​ ಬೆಸ್ಟ್​ ಎಂದ ನೆಟ್ಟಿಗರು!

Team India new Jersey

#image_title

ಮುಂಬಯಿ: ಭಾರತೀಯ ಕ್ರಿಕೆಟ್ ತಂಡ ಹೊಸ ಕಿಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಕ್ರೀಡಾಪರಿಕರಗಳು ಹಾಗೂ ಉಡುಪುಗಳ ಬೃಹತ್​ ಕಂಪನಿಯಾಗಿರುವ ಅಡಿಡಾಸ್​ ಪ್ರಾಯೋಜಕತ್ವದ ಜೆರ್ಸಿ ಹಾಗೂ ಇನ್ನಿತರ ಸಾಧನಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಅನೇಕ ಮಂದಿ ಇದನ್ನು ಅತ್ಯುತ್ತಮ ಜೆರ್ಸಿ ಎಂದು ಕರೆದಿದ್ದಾರೆ. ಇಷ್ಟೆಲ್ಲ ಹೊಗಳಿಕೆಯ ನಡುವೆ ಅಭಿಮಾನಿಗಳ ದೊಡ್ಡ ವರ್ಗವೊಂದು ಈ ಟಿಶರ್ಟ್​ನ ಬೆಲೆ ಕೇಳಿ ಬೆಚ್ಚಿ ಬಿದ್ದಿದೆ. ದುಬಾರಿ ಬೆಲೆಯ ಈ ಜೆರ್ಸಿಯನ್ನು ಕೊಳ್ಳುವುದು ಅಸಾಧ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅದರೆ, ಇನ್ನೂ ಕೆಲವರು ಒರಿಜಿನಲ್ ತೆಗೆದುಕೊಳ್ಳಬೇಡಿ. ಲೋಕಲ್​ ಮಾರ್ಕೆಟ್​ನಲ್ಲಿ ಸಿಗುವುದನ್ನೇ ತೆಗೆದುಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

ಟ್ವೀಟ್ ಒಂದನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ , ಹೊಸದಾಗಿ ಬಿಡುಗಡೆಯಾಗಿರುವ ಜೆರ್ಸಿಗಳ ಬೆಲೆ ತಲಾ 4999 ರೂಪಾಯಿ. ಏಕದಿನ ಮಾದರಿಯ ಜೆರ್ಸಿಯ ರೆಪ್ಲಿಕಾಗೆ 2,999 ರೂಪಾಯಿ. ಅದೇ ರೀತಿ ಏಕ ದಿನ ಕ್ರಿಕೆಟ್​ ತಂಡದ ಫ್ಯಾನ್​ ಜೆರ್ಸಿಗೆ 999 ರೂ.ಗೆ ನಿಗದಿಪಡಿಸಲಾಗಿದೆ. ಇಷ್ಟೊಂದು ಬೆಲೆ ಇಟ್ಟಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಅಡಿಡಾಸ್​ ಕಂಪನಿಯು ಮಾರುವ ಜೆರ್ಸಿಯ ಬೆಲೆಯು ಅಧಿಕವಾಯಿತು. ಇಷ್ಟೊಂದು ದರ ನೀಡಿ ಕೊಳ್ಳುವುದು ಅಸಾಧ್ಯ. ಹೀಗಾಗಿ ಡೂಪ್ಲಿಕೇಟ್​ ಜೆರ್ಸಿಯನ್ನು ಹಾಕಿಕೊಂಡು ಸಂಭ್ರಮಪಡುವುದೇ ಉತ್ತಮ ಎಂಬುದಾಗಿ ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು adidas ಬದಲಿಗೆ abibas ಬ್ರಾಂಡ್​ನ ಟಿಶರ್ಟ್​ ಕೊಳ್ಳುವುದೇ ಉತ್ತಮ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಕೆಲವರು ವಾಖೆಂಡೆ ಸ್ಟೇಡಿಯಮ್​ನ ಬಳಿಗೆ ಹೋದರೆ 4999 ರೂಪಾಯಿಗೆ 20 ಟಿಶರ್ಟ್ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ, ಲೋಕಲ್​ ಮಾರ್ಕೆಟ್​ನಲ್ಲಿ 300 ರೂಪಾಯಿ ಕೊಟ್ಟು ಖರೀದಿಸಿ ಎಂದು ಹೇಳಿದ್ದಾರೆ.

ಅಡಿಡಾಸ್ ಇಂಡಿಯಾ ಕಳೆದ ಶುಕ್ರವಾರ ಹೊಸ ಜೆರ್ಸಿಗಳನ್ನು ಅನಾವರಣಗೊಳಿಸಿತ್ತು. ಕ್ರೀಡಾ ಪರಿಕರಗಳ ಉತ್ಪನ್ನದ ದೈತ್ಯ ಸಂಸ್ಥೆಯಾಗಿರುವ ಅಡಿಡಾಸ್​ 2023ರ ಮೇ ತಿಂಗಳಿಂದ ಆರಂಭಿಸಿ ಐದು ವರ್ಷಗಳ ಒಪ್ಪಂದವನ್ನು ಬಿಸಿಸಿಐ ಜತೆ ಮಾಡಿಕೊಂಡಿದೆ.

ಇದನ್ನೂ ಓದಿ : Team India Cricket: ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ ಅಡಿಡಾಸ್ ಲೋಗೊ; ಕಾರಣ ಏನು?

ಇದೊಂದು ಅಪ್ರತಿಮ ಕ್ಷಣ. ಅಪ್ರತಿಮ ಕ್ರೀಡಾಂಗಣ. ಹೊಸ ಟೀಮ್ ಇಂಡಿಯಾ ಜರ್ಸಿಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಟಿ 20, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​​ನ ಜೆರ್ಸಿಗಳನ್ನು ಅನಾವರಣ ಮಾಡುವ ವೇಳೆ ಅಡಿಡಾಸ್​ ಬರೆದುಕೊಂಡಿತ್ತು.

ಅಡಿಡಾಸ್​​ ಕಂಪನಿಯು ಟಿ20 ಮಾದರಿಯ ಕ್ರಿಕೆಟ್​ಗೆ ಕಾಲರ್ ಇಲ್ಲದೆ ಗಾಢ ನೀಲಿ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಏಕದಿನ ತಂಡಕ್ಕಾಗಿ ಕಾಲರ್ ಹೊಂದಿರುವ ತಿಳಿ ನೀಲಿ ಜೆರ್ಸಿ ವಿನ್ಯಾಸ ಮಾಡಿದೆ. ಟೆಸ್ಟ್ ಕ್ರಿಕೆಟ್​​ಗಾಗಿ ಬಿಳಿ ಜರ್ಸಿ ಸಿದ್ಧಪಡಿಸಿದೆ.

ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ಕ್ರಿಕೆಟ್ ಜಗತ್ತಿಗೆ ಪ್ರವೇಶಿಸುವ ಕ್ಷಣ ಇದು. ಭಾರತದಲ್ಲಿ ಅತ್ಯಂತ ಪ್ರಸಿದ್ಧ ಕ್ರೀಡೆಯ ಮೂಲಕ ನಮ್ಮ ಗ್ರಾಹಕರೊಂದಿಗಿನ ಬಾಂಧವ್ಯ ವೃದ್ಧಿಗೆ ಎದುರು ನೋಡುತ್ತಿದ್ದೆವೆ. ಅಡಿಡಾಸ್ ಭಾರತದಲ್ಲಿ ಕ್ರಿಕೆಟ್​​ಗಿರುವ ಜನಪ್ರಿಯತೆ ಮೇಲೆ ನಂಬಿಕೆ ಇಟ್ಟಿದೆ. ಬಿಸಿಸಿಐ ಜತೆಗಿನ ಪಾಲುದಾರಿಕೆ ಮೂಲಕ ನಾವು ಬೆಳವಣಿಗೆಯನ್ನು ವೇಗಗೊಳಿಸಲಿದ್ದೇವೆ “ಎಂದು ಅಡಿಡಾಸ್ ಇಂಡಿಯಾದ ಜಿಎಂ ನೀಲೇಂದ್ರ ಸಿಂಗ್ ಹೇಳಿದ್ದಾರೆ.

Exit mobile version