ಮುಂಬಯಿ: ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಆಡುತ್ತಿದ್ದ ಕಾಲದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಸಚಿನ್… ಸಚಿನ್… ಎಂದು ಕೂಗುವುದು ಸಾಮಾನ್ಯ ಸಂಗತಿಯಾಗಿತ್ತು. ಅವರೀಗ ವೃತ್ತಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದಾಗ್ಯೂ ಅವರ ಕುರಿತ ಅಭಿಮಾನ ಇನ್ನೂ ಕಡಿಮೆಯಾಗಿಲ್ಲ ಹಾಗೂ ಸಚಿನ್… ಸಚಿನ್ ಎಂದು ಕೂಗುವುದು ಕೂಡ ನಿಂತಿಲ್ಲ. ಇಂಥದ್ದೊಂದು ಪ್ರಸಂಗ ವಿಮಾನದೊಳಗೂ ನಡೆದಿದ್ದು ಅವರೆಲ್ಲರಿಗೂ ಸಚಿನ್ ತೆಂಡೂಲ್ಕರ್ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ.
49 ವರ್ಷದ ಅವರು ಇತ್ತೀಚೆಗೆ ವಿಮಾನವೊಂದಕ್ಕೆ ಏರಿದ್ದನ್ನು ಸಹ ಪ್ರಯಾಣಿಕರು ನೋಡಿದ್ದಾರೆ. ತಕ್ಷಣ ಅವರು ಸಚಿನ್… ಸಚಿನ್ ಎಂದು ಕೂಗಾಡಲು ಆರಂಭಿಸಿದ್ದಾರೆ. ಏತನ್ಮಧ್ಯೆ ವಿಮಾನದ ಸ್ಪೀಕರ್ಗಳಲ್ಲಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಧರಿಸುವ ಸೂಚನೆ ನೀಡಲಾಗುತ್ತಿತ್ತು. ಹೀಗಾಗಿ ಸಚಿನ್ ತೆಂಡೂಲ್ಕರ್ ಅವರು ಎದ್ದು ನಿಂತು ಪ್ರತಿಕ್ರಿಯೆ ಕೊಡುವುದಿಲ್ಲ.
ಪ್ರಯಾಣದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಪ್ರತಿಕ್ರಿಯೆ ಕೊಡಲಾಗದಿರುವ ಬಗ್ಗೆ ಸಚಿನ್ ಅವರಿಗೂ ವಿಷಾದವಿದೆ. ಹೀಗಾಗಿ ಅವರು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ನನ್ನ ಹೆಸರನ್ನು ಕೂಗಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು. ನಾನು ಬ್ಯಾಟ್ ಮಾಡಲು ಬಂದಾಗ ಕಾಣುತ್ತಿದ್ದ ಕ್ಷಣ ಇಲ್ಲಿ ನೆನಪಾಯಿತು. ಇದೇ ವೇಳೆ ಸೀಟ್ ಬೆಲ್ಟ್ ಹಾಕುವ ಸೂಚನೆ ಬಂದ ಕಾರಣ ಎದ್ದು ನಿಂತು ಕೈ ಬೀಸಿಲ್ಲ. ಆದಾಗ್ಯೂ ಎಲ್ಲರಿಗೂ ಬಿಗ್ ಥ್ಯಾಂಕ್ಸ್ ಎಂದು ಹೇಳಿದ್ದಾರೆ.
ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | ಗಾಡ್ಫಾದರ್ಗಳಿದ್ದರೂ ಪರಿಶ್ರಮದಿಂದ ಗಮನ ಸೆಳೆಯುತ್ತಿದ್ದಾರೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್