Site icon Vistara News

ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು ಒಳ್ಳೆಯ ಸ್ಟೇಡಿಯಮ್‌ ಇಲ್ವೆ? ; ಬಿಸಿಸಿಐ ವಿರುದ್ಧ ಪ್ರೇಕ್ಷಕರ ಬೇಸರ

Ind vs Aus

ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಶುಕ್ರವಾರ ನಡೆದ ಟಿ೨೦ ಸರಣಿಯ ಎರಡನೇ ಪಂದ್ಯ ಮಳೆಯ ಕಾರಣಕ್ಕೆ ೮ ಓವರ್‌ಗಳ ಇನಿಂಗ್ಸ್‌ಗೆ ಸೀಮಿತಗೊಂಡಿತ್ತು. ಕಡಿಮೆ ಸಂಖ್ಯೆಯ ಓವರ್‌ಗಳ ಈ ಪಂದ್ಯ ರೋಚಕವಾಗಿ ನಡೆದ ಭಾರತ ಜಯ ಸಾಧಿಸಿತ್ತು. ಆದರೆ, ಓವರ್‌ಗಳ ಸಂಖ್ಯೆ ಕಡಿತಗೊಸಿದ್ದಕ್ಕೆ ಕ್ರಿಕೆಟ್‌ ಅಭಿಮಾನಿಗಳೂ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲು ಒಳ್ಳೆಯ ಸ್ಟೇಡಿಯಮ್‌ ಸಿಗಲಿಲ್ಲವೇ ಎಂಬುದು ಅವರ ವಾದವಾಗಿದೆ.

ಶುಕ್ರವಾರದ ಪಂದ್ಯಕ್ಕಿಂತ ಸಾಕಷ್ಟು ಮೊದಲು ಮಳೆ ನಿಂತಿತ್ತು. ಆದರೆ, ಒದ್ದೆಯಾಗಿದ್ದ ಸ್ಟೇಡಿಯಮ್‌ ಒಣಗಿರಲಿಲ್ಲ. ಹೀಗಾಗಿ ೯.೧೫ ಗಂಟೆಯ ತನಕ ಪಂದ್ಯ ಆರಂಭಿಸಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಮೊದಲು ಪಿಚ್‌ ಒಣಗಿಸಲು ನಾನಾ ತಂತ್ರಗಳನ್ನು ಬಳಸಿದ್ದರೂ ಪ್ರಯೋಜನಕ್ಕೆ ಬಂದಿರಲಿಲ್ಲ. ಮೈದಾನದ ಸುತ್ತ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಅವ್ಯವಸ್ಥೆಗೆ ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಇದರ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

“ಮಳೆಯೇ ಇಲ್ಲ. ಆದರೆ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿಯ ಸ್ಟೇಡಿಯಮ್‌ನಲ್ಲಿ ಸರಿಯಾದ ಮಳೆ ನೀರು ಕಾಲುವೆ ವ್ಯವಸ್ಥೆ ಇಲ್ಲ,” ಎಂಬುದಾಗಿ ಪ್ರೇಕ್ಷಕರೊಬ್ಬರು ಹೇಳಿದ್ದಾರೆ.

“ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಮಳೆ ನೀರು ಹೋಗುವುದಕ್ಕೆ ಸರಿಯಾದ ಚರಂಡಿ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ,” ಎಂಬುದಾಗಿ ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಬಿಸಿಸಿಐ ಬಳಿ ಸಾಕಷ್ಟು ದುಡ್ಡು ಇದೆ. ಸ್ಟೇಡಿಯಮ್‌ನಲ್ಲಿ ಮೂಲ ಸೌಕರ್ಯದ ಕೊರತೆ. ವೇಗದ ಬೌಲರ್‌ಗಳೂ ಇಲ್ಲ. ಸ್ವಿಂಗ್‌ ಮತ್ತು ಯಾರ್ಕರ್ ಇಲ್ಲವೇ ಇಲ್ಲ. ಗಂಗೂಲಿ ನೇತೃತ್ವದಲ್ಲಿ ಭಾರತದ ಕ್ರಿಕೆಟ್ ಸರಿಯಾದ ಪಥದಲ್ಲಿ ಸಾಗುತ್ತಿದೆ ಎಂದು ಅನಿಸುತ್ತಿಲ್ಲ ಎಂಬುದಾಗಿ ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

ಮತ್ತೆ ಮತ್ತೆ ಪಿಚ್‌ ಪರಿಶೀಲನೆ ಮಾಡಲಾಗಿದೆ. ಏನಿದು ಅವಸ್ಥೆ. ಮಳೆ ಬಿಟ್ಟು ಸಾಕಷ್ಟು ಹೊತ್ತು ಕಳೆದ ಬಳಿಕವೂ ಆಡಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ? ಒಂದು ವೇಳೆ ಪಂದ್ಯಕ್ಕೆ ೧೫ ನಿಮಿಷ ಮಳೆ ಬಂದಿದ್ದರೆ ಖಂಡಿತವಾಗಿಯೂ ರದ್ದಾಗುತ್ತಿತ್ತು ಎಂಬುದಾಗಿ ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | IND vs AUS | ಮಳೆಯಿಂದ ತೇವಗೊಂಡ ಪಿಚ್; ಎರಡನೇ ಏಕ ದಿನ ಪಂದ್ಯದ ಟಾಸ್‌ ಸಮಯ ಮುಂದೂಡಿಕೆ

Exit mobile version