ಬೆಂಗಳೂರು: ವಿಶ್ವಕಪ್ ಟಿಕೆಟ್ (World Cup 2023) ಹಂಚಿಕೆ ವಿವಾದ ಮುಂದುವರಿದಿದೆ. ಅಧಿಕೃತ ಟಿಕೆಟಿಂಗ್ ಪಾಲುದಾರ ಬುಕ್ ಮೈ ಶೋ (BookMyShow) ಮೂಲಕ ಟಿಕೆಟ್ ಖರೀದಿಸಲು ಮುಂದಾದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ನೀವು ಸರತಿ ಸಾಲಿನಲ್ಲಿದ್ದೀರಿ ಎಂಬ ಸಂದೇಶ ನೋಡಿ ನೋಡಿ ಬೇಸರ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 8ರಂದು ಬಿಡುಗಡೆಗೊಂಡ 4 ಲಕ್ಷ ಟಿಕೆಟ್ಗಳಲ್ಲಿ ಖರೀದಿಗೆ ಮುಂದಾಗಿರುವ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.
ಬುಕ್ ಮೈ ಶೋನಲ್ಲಿ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡರು/ ಸರತಿ ಸಾಲಿನಲ್ಲಿ ಕಾಯುವ ಸಮಯ ಸುಮಾರು 90 ನಿಮಿಷಗಳು ಎಂದು ತೋರಿಸುವ ಮೂಲಕ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಎರಡು ಗಂಟೆ ಬಿಟ್ಟು ನೋಡಿದ ಬಳಿಕ ಟಿಕೆಟ್ಗಳು ಸೋಲ್ಡ್ ಔಟ್ ಎಂಬ ಸಂದೇಶ ಬಂದಿದೆ. ನಿರಂತರವಾಗಿ ಕಾಯುತ್ತಾ ಕುಳಿತು ಅಂತಿಮವಾಗಿ ಸೋಲ್ಡ್ ಔಟ್ ಸಂದೇಶ ಪಡೆಯುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ಕಿರಿಕಿರಿಯ ವಿಷಯವಾಯಿತು. ಅವರೆಲ್ಲರೂ ಏಕಕಾಲಕ್ಕೆ ಬುಕ್ಮೈ ಶೋ ವಿರುದ್ಧ ಸಿಡಿದಿದ್ದೆರು.
ಈ ಹಿಂದೆ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗಿದ್ದಗಲೂ ಅದರು ಕೆಲವೇ ಕ್ಷಣಗಳಲ್ಲಿ ಖಾಲಿಯಾಗಿದ್ದವು ಬಳಿಕ ಬಿಸಿಸಿಐ 400,000 ಹೊಸ ಟಿಕೆಟ್ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿತು. ಅದರ ಪರಿಸ್ಥಿತಿಯೂ ಪುನರಾವರ್ತನೆಯಾಯಿತು.
ಆತಿಥ್ಯ ವಹಿಸುವ ರಾಜ್ಯ ಸಂಘಟನೆಗಳೊಂದಿಗೆ ಚರ್ಚಿಸಿದ ನಂತರ, ಬಿಸಿಸಿಐ ಬಹು ನಿರೀಕ್ಷಿತ ಪಂದ್ಯಾವಳಿಗೆ ಸುಮಾರು 400,000 ಟಿಕೆಟ್ಗಳನ್ನು ಬಿಡುಗಡೆ ಮಾಡುವುದಾಗಿ ಬಿಸಿಸಿಐ ಘೋಷಿಸಿತ್ತ. ಈ ಐತಿಹಾಸಿಕ ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಉತ್ಸಾಹದಲ್ಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಅವಕಾಶ ನೀಡುವ ಗುರಿಯನ್ನು ಹೊಂದಲಾಗಿದೆ” ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ : Asia Cup 2023: ಭಾರತ-ಪಾಕ್ ನಡುವಣ ಸೂಪರ್-4 ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನ ಇದೆಯೇ?
ಆದರೆ ಟಿಕೆಟ್ ವಿತರಣ ವೈಫಲ್ಯವು ಮುಂದುವರಿದಿದೆ. ಏಕೆಂದರೆ ಹೆಚ್ಚಿನ ಅಭಿಮಾನಿಗಳು ತಮ್ಮ ಸರದಿಗಾಗಿ ಕಾಯುತ್ತಿದ್ದು. ಏತನ್ಮಧ್ಯೆ, ಟಿಕೆಟ್ ಗಳು ಮಾರಾಟವಾಗಿವೆ ಎಂಬ ಸಂದೇಶ ಪಡೆದುಕೊಂಡವು.
ಮೊದಲ ಬಾರಿಗೆ ಟಿಕೆಟ್ಗಾಗಿ ಸರದಿಯಲ್ಲಿ ಕಾದು 6 ವರ್ಷಗಳು ಕಳೆಯಿತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ವೆಬ್ಸೈಟ್ ಮೂಲಕ ಕೇವಲ 90 ನಿಮಿಷಗಳ ಕಾಯುವ ಸಮಯವನ್ನು ತೋರಿಸಿತ್ತು. ಅಭಿಮಾನಿಗಳು ಅದಕ್ಕಿಂತ ಹೆಚ್ಚು ಸಮಯ ಕಾಯಬೇಕಾಯಿತು. ಟಿಕೆಟ್ ಗಳನ್ನು ವಿಭಿನ್ನ ದರದಲ್ಲಿ ಮಾರಾಟ ಮಾಡಲಾಯಿತು ಎಂದು ಕ್ರಿಕೆಟ್ ಅಭಿಮಾನಿಗಳು ಆರೋಪಿಸಿದರು.