ಮೆಲ್ಬೋರ್ನ್ : ಟಿ೨೦ ವಿಶ್ವ ಕಪ್ ಆರಂಭಕ್ಕೆ ಒಂದು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಆಯೋಜಕ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಶನಿವಾರ ೧೬ ತಂಡಗಳ ನಾಯಕರ ಫೋಟೋ ಶೂಟ್ ಆಯೋಜನೆ ಮಾಡಿತ್ತು. ಇದೇ ವೇಳೆ ತಂಡದ ಕ್ಯಾಪ್ಟನ್‌ಗಳು ಪತ್ರಿಕಾಗೋಷ್ಠಿಯಲ್ಲೂ ಮಾತನಾಡಿದರು. ಜತೆಗೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರ ಜನುಮ ದಿನವನ್ನೂ ಆಚರಿಸಲಾಯಿತು. ಇವೆಲ್ಲ ಸಂಭ್ರಮದ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಾಯಕರಾರ ರೋಹಿತ್ ಶರ್ಮಾ ಹಾಗೂ ಬಾಬರ್ ಅಜಮ್ ಅವರ ಪ್ರತ್ಯೇಕ ಫೋಟೋಶೂಟ್ ನಡೆಯಿತು. ಈ ಚಿತ್ರಗಳಿಗೆ ಭಾರತ ತಂಡದ ಮಾಜಿ ಬ್ಯಾಟರ್ ವಾಸಿಮ್ ಜಾಫರ್ ಸೇರಿದಂತೆ ಹಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೆಲವು ಅಭಿಮಾನಿಗಳು ಮದುವೆಯ ಫೋಟೋಶೂಟ್ ಎಂದು ಗೇಲಿ ಮಾಡಿದ್ದಾರೆ.
ಬಾಬರ್ ಅಜಮ್ ಮತ್ತು ರೋಹಿತ್ ಶರ್ಮ ಅವರ ಫೋಟೋ ಶೂಟ್ ಭಾರತದಲ್ಲಿ ಮಾಡುವ ಮದುವೆಯ ಫೋಟೋ ಶೂಟ್ ಮಾದರಿಯಲ್ಲಿತ್ತು. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಅದೇ ರೀತಿ ಕಮೆಂಟ್ ಮಾಡುತ್ತಿದೆ. ಏಷ್ಯಾದ ಮಂದಿ ಎಲ್ಲ ಫೋಟೊಗಳನ್ನು ಮದುವೆ ಫೋಟೋದಂತೆ ಯಾಕೆ ತೆಗೆದುಕೊಳ್ಳುತ್ತಾರೆ ಎಂಬುದಾಗಿ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದೇ ಫೋಟೋವನ್ನು ಹಾಕಿರುವ ಮತ್ತೊಬ್ಬರು ಅಭಿಮಾನಿ, ಬಾಬರ್ ಅಜಮ್ ಹಾಗೂ ರೋಹಿತ್ ಶರ್ಮ ಅವರ ಫೊಟೋಗಳನ್ನು ನೋಡಿದ ಮಾಜಿ ಆಟಗಾರ ಗೌತಮ್ ಗಂಭೀರ್ ಖಂಡಿತವಾಗಿಯೂ ಬೇಸರಗೊಂಡಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಅಕ್ಟೋಬರ್ ೨೩ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಏಷ್ಯಾ ಕಪ್ ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ಬೀಗುವುದಕ್ಕೆ ಇತ್ತಂಡಗಳ ಆಟಗಾರರು ಸಜ್ಜಾಗಿದ್ದಾರೆ.
ತಂಡಗಳು ಇಂತಿವೆ
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯಜ್ವೇಂದ್ರ ಚಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರವೂಫ್, ಇಫ್ತಿಕಕಾರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜುನರ್, , ಶಾಹೀನ್ ಶಾ ಆಫ್ರಿದಿ ಮತ್ತು ಶಾನ್ ಮಸೂದ್.
ಇದನ್ನೂ ಓದಿ | Team India | ಬಾಬರ್ ಅಜಮ್ ಬಳಿ ಹೊಸ ಕಾರು ತಂಗೊಡಿದ್ಯಾ ಎಂದು ಕೇಳಿದ್ದೆ; ರೋಹಿತ್ ಶರ್ಮ