Site icon Vistara News

Pathan Movie | ಶಾರುಖ್​ ಖಾನ್​ ಭಾರತದ ಟಾಮ್​ ಕ್ರೂಸ್​ ಎಂದ ಪತ್ರಕರ್ತನಿಗೆ ಬೆಂಡೆತ್ತಿದ ಅಭಿಮಾನಿಗಳು!

pathan movie

#image_title

ಮುಂಬಯಿ: ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ಅಭಿನಯದ ಪಠಾಣ್​ ಚಲನಚಿತ್ರ (Pathan Movie) ಬಾಕ್ಸ್​ ಆಫೀಸ್​ನಲ್ಲಿ ಚಿಂದಿ ಉಡಾಯಿಸುತ್ತಿದೆ. ಜಗತ್ತಿನಾದ್ಯಂತ ಶಾರುಖ್​ ಖಾನ್​ ಅಭಿನಯ ಹಾಗೂ ಬದ್ಧತೆಯ ಬಗ್ಗೆ ಹೊಗಳಿಕೆಗಳು ಕೇಳಿ ಬರುತ್ತಿವೆ. ಏತನ್ಮಧ್ಯೆ ಅಮೆರಿಕದ ಪತ್ರಕರ್ತರೊಬ್ಬರು ಶಾರುಖ್​ ಖಾನ್​ (ShaRukh Khan) ಅವರನ್ನು ಬಾಲಿವುಡ್ ನಟ ಟಾಮ್​ ಕ್ರೂಸ್​ಗೆ ಹೋಲಿಕೆ ಮಾಡಿದ್ದರು. ಇದು ಶಾರುಖ್ ಅಭಿಮಾನಿಗಳನ್ನೇ ಕೆರಳಿಸಿದ್ದು, ಹೋಲಿಕೆ ಸರಿಯಲ್ಲ ಎಂದು ಆ ಪತ್ರಕರ್ತನಿಗೆ ಬೆಂಡೆತ್ತಿದ್ದಾರೆ.‘

ಸ್ಕಾಟ್​ ಮೆಂಡೆಲ್ಸನ್​ ಎಂಬ ಪತ್ರಕರ್ತ ತಮ್ಮ ಸಿನಿಮಾ ಲೇಖನದಲ್ಲಿ ಶಾರುಖ್​ ಖಾನ್ ಅವರ ಪಠಾಣ್​ ಸಿನಿಮಾದ ಬಗ್ಗೆ ಬರೆದಿದ್ದಾರೆ. ಅದರಲ್ಲಿ ಭಾರತದ ಟಾಮ್​ ಕ್ರೂಸ್ ಆಗಿರುವ ಶಾರುಖ್​ ಖಾನ್​ ಅವರು ಬಾಲಿವುಡ್​ ಸಿನಿಮಾ ಕ್ಷೇತ್ರವನ್ನು ಪತನದ ಹಾದಿಯಿಂದ ಬಚಾವ್​ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದು ಖಾನ್​ ಅಭಿಮಾನಿಗಳಿಗೆ ಹಿಡಿಸಿಲ್ಲ. ಶಾರುಖ್​ ಅವರನ್ನು ಟಾಸ್​ ಕ್ರೂಸ್​ಗೆ ಹೋಲಿಕೆ ಮಾಡುವುದೇ ಅಗೌರವ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Pathaan Movie: ʻಪಠಾಣ್‌ʼ ಸಕ್ಸೆಸ್‌ ಬೆನ್ನಲ್ಲೇ ಇಬ್ಬರು ಸೂಪರ್‌ ಸ್ಟಾರ್ಸ್‌ ಬಾಲ್ಯದ ಫೋಟೊ ವೈರಲ್‌!

ಶಾರುಖ್​ಗೆ ಇನ್ಯಾರೂ ಹೋಲಿಕೆಯಿಲ್ಲ. ಅವರು ಒನ್​ ಆ್ಯಂಡ್​ ಓನ್ಲಿ ಶಾರುಖ್ ಖಾನ್​. ಅವರ ಚಲನಚಿತ್ರಕ್ಕಿಂತ ಮಿಗಿಲಾದ ವ್ಯಕ್ತಿ ಎಂಬುದಾಗಿ ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ನಟನೆಯಲ್ಲಿ ಶಾರುಖ್​ ಅವರನ್ನು ಮೀರಿಸುವವರು ಇನ್ಯಾರೂ ಇಲ್ಲ. ಅವರು ಎಲ್ಲ ಬಗೆಯಲ್ಲೂ ಅಪ್ರತಿಮ ನಟ. ಅವರ ಸಮೀಪ ಇನ್ಯಾರೂ ಇಲ್ಲ. ಹೀಗಾಗಿ ಹೋಲಿಕೆ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ.

Exit mobile version