ಬೆಂಗಳೂರು: ಭಾರತ ತಂಡದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ಸರ್ಜರಿ ಯಶಸ್ವಿಯಾಗಿ ನಡೆದಿದ್ದು ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಅಭ್ಯಾಸ ಆರಂಭಿಸಿದ್ದಾರೆ ಎಂಬುದಾಗಿ ಬಿಸಿಸಿಐ ಮಾಹಿತಿ ನೀಡಿದೆ. ಇದರೊಂದಿಗೆ ಮುಂದಿನ ವಿಶ್ವ ಕಪ್ಗೆ ಬುಮ್ರಾ ಅವರ ಲಭ್ಯತೆ ದೃಢಪಟ್ಟಿದೆ. ಬುಮ್ರಾ ಅವರು ಅಲಭ್ಯತೆಯಿಂದ ಭಾರತ ತಂಡದ ಬೌಲಿಂಗ್ ವಿಭಾಗದ ದುರ್ಬಲಗೊಂಡಿದೆ ಮಾತುಗಳ ನಡುವೆಯೇ ಅವರ ಲಭ್ಯತೆಯ ಮಾಹಿತಿ ಟೀಮ್ ಮ್ಯಾನೇಜ್ಮೆಂಟ್ಗೆ ವಿಶ್ವಾಸ ಮೂಡಿಸಿದೆ.
ಜಸ್ಪ್ರಿತ್ ಬುಮ್ರಾ ಅವರಿಗೆ ನ್ಯೂಜಿಲ್ಯಾಂಡ್ನಲ್ಲಿ ಸರ್ಜರಿ ಮಾಡಲಾಗಿತ್ತು. ಅಲ್ಲಿಂದ ಬಳಿಕ ವಾಪಸಾಗಿರುವ ಅವರು ನೋವಿನಿಂದ ಮುಕ್ತರಾಗಿದ್ದಾರೆ. ಇದೀಗ ಅವರು ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಸ್ಪ್ರಿತ್ ಬುಮ್ರಾಗೆ ಕಳೆದ ವಾರ ಸರ್ಜರಿ ಮಾಡಲಾಗಿದೆ. ಅವರಿಗಿದ್ದ ಕೆಳ ಬೆನ್ನಿನ ನೋವು ಸಂಪೂರ್ಣ ನಿವಾರಣೆಯಾಗಿದೆ. ಹೀಗಾಗಿ ಅವರು ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ. ಬಳಿಕ ಅವರು ಅಭ್ಯಾಸ ಆರಂಭಿಸಲಿದ್ದಾರೆ ಎಂಬುದಾಗಿ ಬಿಸಿಸಿಐ ಮಾಹಿತಿ ನೀಡಿದೆ.
ಬುಮ್ರಾ ಅವರ ಪುನಶ್ಚೇತನ ಕಾರ್ಯ ತಜ್ಱರ ನೆರವಿನಿಂದ ನಡೆಯುತ್ತಿದೆ. ಆರು ವಾರಗಳ ಕಾಲ ಪುನಶ್ಚೇತನ ನಡೆಯಲಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನೇತೃತ್ವದಲ್ಲಿ ಪುನಶ್ಚೇತನ ಕಾರ್ಯ ನಡೆಯಲಿದೆ ಎಂಬುದಾಗಿ ಬಿಸಿಸಿಐ ಮಾಹಿತಿ ನೀಡಿದೆ.
ಜಸ್ಪ್ರಿತ್ ಬುಮ್ರಾ ಸೆಪ್ಟೆಂಬರ್ 2022ರಿಂದ ಆಡಲು ಕಣಕ್ಕೆ ಇಳಿದಿಲ್ಲ. 2022ರಲ್ಲ ನಡೆದ ಏಷ್ಯಾ ಕಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ನಲ್ಲಿ ಅವರಿಗೆ ಆಡಲು ಸಾಧ್ಯವಾಗಿರಲಿಲ್ಲ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ ಅವಕಾಶ ಕಳೆದುಕೊಂಡಿದ್ದರು. ಐಪಿಎಲ್ನಲ್ಲೂ ಆಡಲು ಸಾಧ್ಯವಾಗಿರಲಿಲ್ಲ.
ಶ್ರೇಯಸ್ ಅಯ್ಯರ್ಗೆ ಸರ್ಜರಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶ್ರೇಯಸ್ ಅಯ್ಯರ್ ಕುರಿತು ಮಾಹಿತಿ ನೀಡಿದೆ. ಭಾರತ ತಂಡದ ಮಧ್ಯಮ ಕ್ರಮಾಂಕದಲ ಬ್ಯಾಟರ್ ಆಗಿರುವ ಅವರು ಕೂಡ ಕೆಳ ಬೆನ್ನಿನ ನೋವಿಗೆ ಒಳಗಾಗಿದ್ದರು. ಕಳೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ನೋವಿನ ಸಮಸ್ಯೆ ತೀವ್ರಗೊಂಡಿತ್ತು. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ ಆಡುವುದಕ್ಕೆ ಅವರಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ : WPL: ಹೊಸ ಮಾದರಿಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ಗೆ ಬಿಸಿಸಿಐ ಚಿಂತನೆ
ಅಯ್ಯರ್ ಕೂಡ ಮುಂದಿನ ವಾರ ಸರ್ಜರಿಗೆ ಒಳಗಾಗಲಿದ್ದಾರೆ. ಎರಡು ವಾರಗಳ ಕಾಲ ವೈದ್ಯರ ನಿಗಾದಲ್ಲಿರುವ ಅವರು ಬೆಂಗಳೂರಿಗೆ ಮರಳಿ ಪುನಶ್ಚೇತನಕ್ಕೆ ಒಳಪಡಲಿದ್ದಾರೆ.
ಶ್ರೇಯಸ್ ಅಯ್ಯರ್ಗೂ ಮುಂದಿನ ವಾರ ಶಸ್ತ್ರ ಚಿಕತ್ಸೆ ನಿಗದಿ ಮಾಡಲಾಗಿದೆ. ಪ್ರಕ್ರಿಯೆ ಮುಗಿದ ಎರಡು ವಾರದ ಬಳಿಕ ಎನ್ಸಿಎ ವೈದ್ಯಕೀಯ ತಂಡದ ನೇತೃತ್ವದಲ್ಲಿ ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ ಎಂಬುದಾಗಿ ಬಿಸಿಸಿಐ ಮಾಹಿತಿ ನೀಡಿದೆ.