Site icon Vistara News

Fatima Sana: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಪಾಕ್​; 22 ವರ್ಷದ ಫಾತಿಮಾ ನಾಯಕಿ

Fatima Sana: Fatima Sana Named Pakistan Skipper For Women's T20 World Cup

ಕರಾಚಿ: ಮುಂಬರುವ ಮಹಿಳಾ ಟಿ20 ವಿಶ್ವಕಪ್(Women’s T20 World Cup)​ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್​ ಮಂಡಳಿ(Pakistan Cricket Board ) 22 ವರ್ಷದ ಫಾತಿಮಾ ಸನಾ(Fatima Sana) ಅವರನ್ನು ನೂತನ ನಾಯಕಿಯನ್ನಾಗಿ ನೇಮಿಸಿದೆ. ಅಕ್ಟೋಬರ್ 3-20ರ ತನಕ ಯುಎಇಯಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕ್​ ತಂಡವನ್ನು ಫಾತಿಮಾ ಸನಾ ಮುನ್ನಡೆಸಲಿದ್ದಾರೆ ಎಂದು ಭಾನುವಾರ ಪಿಸಿಬಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.

ಈ ಹಿಂದೆ ತಂಡದ ನಾಯಕಿಯಾಗಿದ್ದ 37ರ ಹರೆಯದ ನಿದಾ ದಾರ್(Nida Dar) ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿದೆ. ನಿದಾ ದಾರ್ ನಾಯಕತ್ವದಲ್ಲಿ ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಮಹಿಳೆಯರ ಏಷ್ಯಾ ಕಪ್‌ನಲ್ಲಿ ಪಾಕ್​ ತಂಡ ಸೆಮಿಫೈನಲ್​ನಲ್ಲಿ ನಿರ್ಗಮಿಸಿತ್ತು. ಇದಕ್ಕು ಮುನ್ನ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಕ್​ ತಂಡ ಸೋಲು ಅನುಭವಿಸಿತ್ತು. ಹೀಗಾಗಿ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ. ಆದರೆ ಟಿ20 ವಿಶ್ವಕಪ್​ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.

ಬೌಲಿಂಗ್​ ಆಲ್​ರೌಂಡರ್​ ಆಗಿರುವ ಫಾತಿಮಾ, ಪಾಕ್​ ಪರ ಇದುವರೆಗೆ 41 ಏಕದಿನ ಮತ್ತು 40 ಟಿ20 ಪಂದ್ಯಗಳನ್ನು ಗಳಲ್ಲಿ ಆಡಿದ್ದಾರೆ. ಈ ಹಿಂದೆ ಪಾಕಿಸ್ತಾನದ ದೇಶೀಯ ತಂಡಗಳನ್ನು ಮುನ್ನಡೆಸಿದ್ದ ಅನುಭವ ಹೊಂದಿದ್ದಾರೆ. ಕಳೆದ ವರ್ಷ(2023) ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದ ಗೆಲುವಿನ ವೇಳೆ ತಂಡದ ಹಂಗಾಮಿ ನಾಯಕರಾಗಿದ್ದರು.

ಇದನ್ನೂ ಓದಿ ICC Women’s T20 World Cup: ಯುಎಇಗೆ ಸ್ಥಳಾಂತರಗೊಂಡ ಮಹಿಳಾ ಟಿ20 ವಿಶ್ವಕಪ್

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲ್ಯಾಂಡ್​ ಮತ್ತು ಶ್ರೀಲಂಕಾ ತಂಡದೊಂದಿಗೆ ಕಾಣಿಸಿಕೊಂಡಿದೆ.

ಪಾಕಿಸ್ತಾನ ಮಹಿಳಾ ತಂಡ


ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜಾ, ಇರಾಮ್ ಜಾವೇದ್, ಮುನೀಬಾ ಅಲಿ (ವಿಕೆಟ್ ಕೀಪರ್), ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್ (ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ), ಸಿದ್ರಾ ಅಮೀನ್, ಸೈಯದಾ ಅರೂಬ್ ಶಾ, ತಸ್ಮಿಯಾ ರುಬಾಬ್ ಮತ್ತು ತುಬಾ ಹಸನ್. ಟ್ರಾವೆಲಿಂಗ್ ಮೀಸಲು: ನಜಿಹಾ ಅಲ್ವಿ (ವಿಕೆಟ್-ಕೀಪರ್); ಮೀಸಲು ಆಟಗಾರ್ತಿ ರಮೀನ್ ಶಮೀಮ್ ಮತ್ತು ಉಮ್-ಎ-ಹನಿ.

 ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯ ದಂಗೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯ(ICC Women’s T20 World Cup) ಆತಿಥ್ಯವನ್ನು ಕಳೆದ ವಾರ ಐಸಿಸಿ ಯುಎಇ(UAE )ಗೆ ನೀಡಿತ್ತು. ಪಂದ್ಯಾವಳಿಯು ಯುಎಇಯ ಎರಡು ಸ್ಥಳಗಳಾದ ದುಬೈ ಮತ್ತು ಶಾರ್ಜಾದಲ್ಲಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ.  

Exit mobile version