ನ್ಯೂಯಾರ್ಕ್: ಅಫಘಾನಿಸ್ತಾನ(AFG vs UGA) ತಂಡದ ಎಡಗೈ ವೇಗಿ ಫಜಲ್ಹಕ್ ಫಾರೂಕಿ (Fazalhaq Farooqi) ಅವರು ಉಂಗಾಡ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಕಿತ್ತು ಹಲವು ದಾಖಲೆ ಬರೆದಿದ್ದಾರೆ. ಇಂದು(ಮಂಗಳವಾರ) ನಡೆದ ಪಂದ್ಯದಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ಫಾರೂಕಿ ಕೇವಲ 9 ರನ್ಗೆ 5 ವಿಕೆಟ್ ಉಡಾಯಿಸಿ ಅಫಘಾನಿಸ್ತಾನಕ್ಕೆ ಅಮೋಘ ಗೆಲುವು ತಂದುಕೊಟ್ಟರು.
5 ವಿಕೆಟ್ ಕೀಳುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ಗೆ ಅತ್ಯಧಿಕ ವಿಕೆಟ್ ಕಿತ್ತ ಅಫಘಾನಿಸ್ತಾನ ಮೊದಲ ಬೌಲರ್ ಎನಿಸಿಕೊಂಡರು. ಒಟ್ಟಾರೆಯಾಗಿ 4ನೇ ಸ್ಥಾನ ಪಡೆದರು. ಟಿ20 ವಿಶ್ವಕಪ್(T20 World Cup 2024) ಟೂರ್ನಿಯ ಪಂದ್ಯವೊಂದರಲ್ಲಿ ಕಡಿಮೆ ರನ್ಗೆ ಅತಿ ಹೆಚ್ಚು ವಿಕೆಟ್ ಕಿತ್ತ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಅಜಂತಾ ಮೆಂಡೀಸ್ ಹೆಸರಿನಲ್ಲಿದೆ. ಮೆಂಡೀಸ್ 8 ರನ್ಗೆ 6 ವಿಕೆಟ್ ಕಿತ್ತಿದ್ದರು.
ಟಿ20 ವಿಶ್ವಕಪ್ನಲ್ಲಿ ಅತಿ ಕಡಿಮೆ ರನ್ಗೆ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು
ಅಜಂತಾ ಮೆಂಡೀಸ್- 8 ರನ್ಗೆ 6 ವಿಕೆಟ್ (2012)
ರಂಗನಾ ಹೆರಾತ್- 3 ರನ್ಗೆ 5 ವಿಕೆಟ್(2014)
ಉಮ್ಮರ್ ಗುಲ್- 6ನ್ಗೆ 5 ವಿಕೆಟ್ (2009)
ಫಜಲ್ಹಕ್ ಫಾರೂಕಿ- 9 ರನ್ಗೆ 5 ವಿಕೆಟ್ (2024)
ಸ್ಯಾಮ್ ಕರನ್-10 ರನ್ಗೆ 5 ವಿಕೆಟ್ (2022)
ಇದು ಮಾತ್ರವಲ್ಲದೆ ಟಿ20 ಕ್ರಿಕೆಟ್ನಲ್ಲಿ ಅಫಘಾನಿಸ್ತಾನ ಪರ ಅತಿ ಕಡಿಮೆ ರನ್ಗೆ 5 ವಿಕೆಟ್ ಕಿತ್ತ ಎರಡನೇ ಬೌಲರ್ ಎನಿಸಿಕೊಂಡರು. 3 ರನ್ಗೆ 5 ವಿಕೆಟ್ ಕಿತ್ತ ರಶೀದ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ. 11 ರನ್ಗೆ 5 ವಿಕೆಟ್ ಕಿತ್ತ ಕರೀಂ ಜನ್ನತ್ ಮೂರನೇ ಸ್ಥಾನಿಯಾಗಿದ್ದಾರೆ.
ಅಫಘಾನಿಸ್ತಾನ ಪರ ಟಿ20ಯಲ್ಲಿ ಕಡಿಮೆ ರನ್ಗೆ 5 ವಿಕೆಟ್ ಕಿತ್ತ ಬೌಲರ್ಗಳು
ರಶೀದ್ ಖಾನ್- 3ಕ್ಕೆ 5 ವಿಕೆಟ್(2017)
ಫಜಲ್ಹಕ್ ಫಾರೂಕಿ- 9ಕ್ಕೆ 5 ವಿಕೆಟ್ (2024)
ಕರೀಂ ಜನ್ನತ್- 11ಕ್ಕೆ 5 ವಿಕೆಟ್ (2011)
ಸಮೀವುಲ್ಲಾ ಶಿನ್ವಾರಿ- 13ಕ್ಕೆ 5 ವಿಕೆಟ್ (2013)
ಮುಜೀಬ್ ಉರ್ ರೆಹಮಾನ್- 20ಕ್ಕೆ 5 ವಿಕೆಟ್ (2021)
ಇದನ್ನೂ ಓದಿ IND vs IRE T20 World Cup: ಐರ್ಲೆಂಡ್ ಸವಾಲಿಗೆ ಟೀಮ್ ಇಂಡಿಯಾ ಸಿದ್ಧ; ವಿಶ್ವಕಪ್ ಸಾಧನೆ ಹೇಗಿದೆ?
ಪಂದ್ಯ ಗೆದ್ದ ಅಫ್ಘಾನ್
ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಫಘಾನಿಸ್ತಾನ ಫುಲ್ ಜೋಶ್ನಲ್ಲಿಯೇ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 183 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಉಂಗಾಡ 58 ರನ್ಗೆ ಸರ್ವಪತನ ಕಂಡಿತು. ಅಫಘಾನಿಸ್ತಾನ 125 ರನ್ಗಳ ಬೃಹತ್ ಗೆಲುವು ಸಾಧಿಸಿತು.