ಡೆಹ್ರಾಡೂನ್ : ಡಿಸೆಂಬರ್ 30ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾಗಿರುವ ಟೀಮ್ ಇಂಡಿಯಾದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಅವರನ್ನು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ರಿಷಭ್ ಅವರನ್ನು ಶುಕ್ರವಾರ ಐಸಿಯುಗೆ ದಾಖಲು ಮಾಡಲಾಗಿತ್ತು. ಅಲ್ಲೇ ಅವರು ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದರು.
ಉಳಿದ ರೋಗಿಗಳು ಇರುವ ಐಸಿಯುನಲ್ಲಿ ಚಿಕಿತ್ಸೆ ನೀಡುವ ವೇಳೆ ನಾನಾ ಸೋಂಕುಗಳು ತಗುಲುವ ಸಾಧ್ಯತೆಗಳಿವೆ ಎಂಬ ಅನುಮಾನದ ಮೇರೆಗೆ ರಿಷಭ್ ಅವರನ್ನು ಖಾಸಗಿ ವಾರ್ಡ್ಗೆ ದಾಖಲಿಲಾಗಿದೆ. ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಶಿಫಾರಸಿನ ಮೇರೆಗೆ ಆಸ್ಪತ್ರೆಗೆಯ ವೈದ್ಯಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬೆನ್ನು, ಮಂಡಿ ಹಾಗೂ ಹಣೆಗೆ ಗಾಯ ಮಾಡಿಕೊಂಡಿರುವ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅವರನ್ನು ಬೇರೆ ಆಸ್ಪತ್ರೆಗೆ ಏರ್ಲಿಫ್ಟ್ ಮಾಡುವ ಅವಶ್ಯಕತೆ ಇಲ್ಲ ಎಂಬುದಾಗಿಯೂ ಹೇಳಲಾಗಿದೆ.
ರಿಷಭ್ ಅವರು ಕುಟುಂಬಸ್ಥರು ಆಸ್ಪತ್ರೆಯಲ್ಲಿ ಜತೆಗಿದ್ದಾರೆ. ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಹಾಗೂ ಬಿಸಿಸಿಐ ಅಧಿಕಾರಿಗಳು ಆರೋಗ್ಯದ ನಿಗಾ ವಹಿಸಿಕೊಂಡಿದ್ದಾರೆ. ಬೇರೆ ವ್ಯಕ್ತಿಗಳಿಗೆ ರಿಷಭ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ.
ಇದನ್ನೂ ಓದಿ | Rishabh Pant | ಅಪಘಾತದಿಂದ ಗಾಯಗೊಂಡಾಗಲೂ ತಾಯಿಯನ್ನೇ ಕನವರಿಸುತ್ತಿದ್ದ ರಿಷಭ್ ಪಂತ್!