Site icon Vistara News

Tax Exemption | ಬಿಸಿಸಿಐಗೆ 955 ಕೋಟಿ ರೂಪಾಯಿ ಆರ್ಥಿಕ ನಷ್ಟದ ಭೀತಿ; ತೆರಿಗೆ ವಿನಾಯಿತಿಗೆ ನಕಾರ

ವಿರಾಟ್‌ ಕೊಹ್ಲಿ

ಮುಂಬಯಿ : ೨೦೨೩ರ ಏಕದಿನ ವಿಶ್ವ ಕಪ್‌ನ ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐಗೆ ೯೯೫ ಕೋಟಿ ರೂಪಾಯಿ ಅರ್ಥಿಕ ನಷ್ಟದ ಭೀತಿ ಎದುರಾಗಿದೆ. ಒಂದು ವೇಳೆ ಕೇಂದ್ರ ಸರಕಾರ ತನ್ನ ನಿಲುವು ಬದಲಿಸದೇ ಹೋದರೆ ಬಿಸಿಸಿಐ ಅಷ್ಟೂ ಮೊತ್ತವನ್ನು ತೆರಿಗೆ ರೂಪದಲ್ಲಿ ಪಾವತಿ ಮಾಡಲೇಬೇಕಾಗುತ್ತದೆ. ಯಾಕೆಂದರೆ ಐಸಿಸಿಐಯಿಂದ ಆತಿಥ್ಯ ಹಕ್ಕು ಪಡೆಯುವ ಮೊದಲು ಬಿಸಿಸಿಐ ತೆರಿಗೆ ವಿನಾಯಿತಿಯ (Tax Exemption) ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ತನ್ನ ನಿಲುವಿಗೆ ಬದ್ಧವಾಗಬೇಕಾಗಿದ್ದು, ತನ್ನ ಜೇಬಿನಿಂದಲೇ ಹಣ ಪಾವತಿಸಬೇಕಾಗುತ್ತದೆ.

ಐಸಿಸಿ ನಿಯಮದ ಪ್ರಕಾರ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳ ಆತಿಥ್ಯ ಪಡೆಯುವ ದೇಶದ ಕ್ರಿಕೆಟ್‌ ಮಂಡಳಿ ಅಲ್ಲಿನ ಸರಕಾರದಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಬೇಕು. ಅಂದರೆ, ನೇರ ಪ್ರಸಾರದ ಹಕ್ಕು ಸೇರಿದಂತೆ ಎಲ್ಲ ರೀತಿಯ ತನ್ನ ಆದಾಯಕ್ಕೆ ತೆರಿಗೆ ಹಾಕುವಂತಿಲ್ಲ. ಆದರೆ, ಭಾರತ ಸರಕಾರದ ಜಿಎಸ್‌ಟಿ ನಿಯಮದ ಪ್ರಕಾರ ಈ ಮಾದರಿಯ ಆದಾಯಕ್ಕೆ ಶೇಕಡಾ ೨೧.೮೪ ತೆರಿಗೆ ಪಾವತಿ ಮಾಡಬೇಕು.

ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಬಿಸಿಸಿಐ ಸರಕಾರಕ್ಕೆ ಮನವಿ ಸಲ್ಲಿಸಿದೆ. ಅದರೆ, ಸರಕಾರ ಅದಕ್ಕೆ ಒಪ್ಪಿಗೆ ಕೊಡುತ್ತಿಲ್ಲ. ತೆರಿಗೆ ಕಟ್ಟಲೇಬೇಕು ಎಂದು ಹೇಳಿದೆ. ಅಲ್ಲದೆ, ಟೂರ್ನಿ ನಡೆಯುವ ಸಂದರ್ಭದಲ್ಲಿ ಸಂಗ್ರಹ ಮಾಡಿರುವ ಮೊತ್ತಕ್ಕೆ ಪೂರಕವಾಗಿ ಪಾವತಿ ಮಾಡಬೇಕು ಎಂದು ಹೇಳಿದೆ. ಈ ತಾಕಲಾಟ ಮುಂದುವರಿದಿದೆ. ಒಂದು ವೇಳೆ ಟೂರ್ನಿಯ ಆರಂಭಕ್ಕೆ ಮೊದಲು ಈ ಸರಕಾರ ವಿನಾಯಿತಿ ಕೊಡದೇ ಹೋದರೆ ಬಿಸಿಸಿಐ ೯೯೫ ಕೋಟಿ ರೂಪಾಯಿ (೧೧೬ ಮಿಲಿಯನ್‌ ಡಾಲರ್‌) ಪಾವತಿ ಮಾಡಲೇಬೇಕಾಗುತ್ತದೆ.

ಬಿಸಿಸಿಐ ೨೦೧೬ರ ವಿಶ್ವ ಕಪ್‌ ಅಯೋಜನೆಯ ವೇಳೆಯೂ ವಿನಾಯಿತಿ ಕೇಳಿತ್ತು. ಆಗಲೂ ಸರಕಾರ ಒಪ್ಪಿರಲಿಲ್ಲ. ಹೀಗಾಗಿ ೧೯೩ ಕೋಟಿ ರೂಪಾಯಿ ಪಾವತಿ ಮಾಡಿತ್ತು. ಬಿಸಿಸಿಐ ಈ ಬಗ್ಗೆ ಐಸಿಸಿ ಟ್ರಿಬ್ಯುನಲ್‌ನಲ್ಲಿ ಹೋರಾಟ ನಡೆಸುತ್ತಿದೆ.

ಇದನ್ನೂ ಓದಿ | BCCI President | ಬಿಸಿಸಿಐ ಅಧ್ಯಕ್ಷ ಗಾದಿ ತೊರೆದ ಬಗ್ಗೆ ಮೌನ ಮುರಿದ ಸೌರವ್‌ ಗಂಗೂಲಿ

Exit mobile version