ಟೊರೊಂಟೊ: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಸ್ಪರ್ಧಿಸಲು ಬೇಕಾಗಿರುವ ಅರ್ಹತೆಗಾಗಿ ನಡೆಯುವ ಕ್ಯಾಂಡಿಡೇಟ್ಸ್(FIDE Candidates) ಟೂರ್ನಿ ಇಂದಿನಿಂದ( ಬುಧವಾರ) ಕೆನಡಾದಲ್ಲಿ ಆರಂಭಗೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತದಿಂದ ಗರಿಷ್ಠ 5 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಏಪ್ರಿಲ್ 22ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ತಲಾ 8 ಪುರುಷ, ಮಹಿಳಾ ಚೆಸ್ ಪಟುಗಳು ಸ್ಪರ್ಧಿಸಲಿದ್ದಾರೆ. ಅಚ್ಚರಿ ಎಂದರೆ ಪ್ರಜ್ಞಾನಂದ(Praggnanandhaa) ಮತ್ತು ಅವರ ಅಕ್ಕ ವೈಶಾಲಿ(Vaishali) ಕೂಡ ಕಾಣಿಸಿಕೊಂಡಿದ್ದಾರೆ.
ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ, ಡಿ.ಗುಕೇಶ್, ವಿದಿತ್ ಗುಜರಾತಿ ಮುಕ್ತ (ಪುರುಷ) ವಿಭಾಗದಲ್ಲಿ ಸ್ಪರ್ಧಿಸಿದರೆ, ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ, ಆರ್.ವೈಶಾಲಿ ಆಡಲಿದ್ದಾರೆ. ಪ್ರತಿ ಆಟಗಾರ, ಆಟಗಾರ್ತಿ ಇನ್ನುಳಿದ 7 ಮಂದಿಯ ವಿರುದ್ಧ ತಲಾ 2 ಬಾರಿ ಆಡಲಿದ್ದು, 14 ಸುತ್ತುಗಳ ಮುಕ್ತಾಯಕ್ಕೆ ಅಗ್ರಸ್ಥಾನ ಗಳಿಸುವವರಿಗೆ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಕ್ಕೆ ಅರ್ಹತೆ ಸಿಗಲಿದೆ.
ಇದೇ ಜನವರಿಯಲ್ಲಿ ನಡೆದಿದ್ದ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ನಲ್ಲಿ(Tata Steel Masters tournament) ವಿಶ್ವ ಚಾಂಪಿಯನ್ ಡಿಂಗ್ ಲಿರೆನ್(World Champion Ding Liren) ಅವರನ್ನು ಮಣಿಸುವ ಮೂಲಕ ಪ್ರಜ್ಞಾನಂದ ನಂಬರ್ 1 ಸ್ಥಾನಕ್ಕೇರಿದ್ದರು. ಪ್ರಜ್ಞಾನಂದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಭಾರತದ ಅಗ್ರ ಶ್ರೇಯಾಂಕದ ಚೆಸ್ ಆಟಗಾರನಾಗುವ ಮೂಲಕ ಅನುಭವಿ ವಿಶ್ವನಾಥನ್ ಆನಂದ್(Viswanathan Anand) ಅವರನ್ನು ಹಿಂದಿಕ್ಕಿದ್ದರು.
Praggnanandhaa: ಹೆತ್ತವರ ಜತೆ ಮೋದಿ ಭೇಟಿಯಾದ ಪ್ರಜ್ಞಾನಂದ; ಚೆಸ್ ಬೋರ್ಡ್ ಮುಂದೆಯೇ ಉಭಯ ಕುಶಲೋಪರಿ
FIDE Candidates Tournament 2024 is set to kick off this Wednesday in Toronto, Canada! #FIDECandidates
— European Chess Union (@ECUonline) April 1, 2024
For the first time ever, the same venue will host the FIDE Candidates and the FIDE Women’s Candidates Tournaments. The events will be played from 3-22 April at The Great Hall,… pic.twitter.com/cJiCxbQ9ki
ವಿಶ್ವಕಪ್ ಚೆಸ್ ಟೂರ್ನಿಯಲ್ಲಿ(Chess World Cup) 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ್ದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಮೇಲೆ ಭಾರೀ ನಿರೀಕ್ಷೆ ಮಾಡಲಾಗಿದೆ. ಕಳೆದ ವರ್ಷ ನಡೆದ ವಿಶ್ವಕಪ್ ಫೈನಲ್ನಲ್ಲಿ ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen)ಗೆ ತೀವ್ರ ಪೈಪೋಟಿ ನೀಡಿ ಸಣ್ಣ ಅಂತರದಿಂದ ಸೋಲು ಕಂಡು ದ್ವಿತೀಯ ಸ್ಥಾನ ಪಡೆದಿದ್ದರು. 18 ವರ್ಷದಲ್ಲಿ ಈ ಮಟ್ಟದ ಸಾಧನೆ ತೋರಿದ ಪ್ರಜ್ಞಾನಂದ ಟ್ರೋಫಿ ಗೆಲ್ಲದಿದ್ದರೂ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
18 ವರ್ಷದ ಚೆಸ್ ಆಟಗಾರ ಯಾವಾಗಲೂ ತನ್ನ ತಾಯಿ ನಾಗಲಕ್ಷ್ಮಿ ಅವರ ಜತೆಗೆ ಇರುವ ಪ್ರತಿಭೆ. ತಾಯಿಯೂ ಪ್ರತಿ ಕ್ಷಣವೂ ಮಗನ ಜತೆಗೆ ಇರುತ್ತಾರೆ. ಈ ಮೂಲಕ ಅವರು ಪುತ್ರನ ಯಶಸ್ಸಿನ ಬಲವಾದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ. ಅವರ ತಾಯಿ ನಾಗಲಕ್ಷ್ಮಿ ಅವರು ಚೆಸ್ ವಿಶ್ವಕಪ್ ಫೈನಲ್ ಸಮಯದಲ್ಲಿ ಪೂರ್ತಿಯಾಗಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು. ಈ ಸಂದರ್ಭದ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.