ಕತಾರ್ : ಫುಟ್ಬಾಲ್ ವಿಶ್ವ ಕಪ್ (FIFA World Cup) ಗೆದ್ದು ದಾಖಲೆ ನಿರ್ಮಿಸಿದ ಅರ್ಜೆಂಟೀನಾ ತಂಡ ಗೆಲುವಿನ ಸಂಭ್ರಮದಲ್ಲಿ ನಡೆಸಿದ ವಿಜಯೋತ್ಸವ ಮಿತಿಮೀರಿತ್ತು ಎಂದಿರುವ ವಿಶ್ವ ಫುಟ್ಬಾಲ್ ಒಕ್ಕೂಟ (FIFA) ಆ ದೇಶದ ಫುಟ್ಬಾಲ್ ಸಂಸ್ಥೆಗೆ ದಂಡ ವಿಧಿಸಿದೆ. ಕಳೆದ ಡಿಸೆಂಬರ್ 18ರಂದು ನಡೆದ ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ 4-2 ಪೆನಾಲ್ಟಿ ಗೋಲ್ಗಳಿಂದ ಜಯ ಸಾಧಿಸಿತ್ತು. ಆ ಬಳಿಕ ಆಟಗಾರರು ಮೈದಾನದಲ್ಲಿ ಕಂಡ ಕಂಡಲ್ಲಿ ಓಡಿ ಸಂಭ್ರಮಿಸಿದ್ದರು. ಹೀಗಾಗಿ ಫಿಫಾ ಕ್ರಮ ಕೈಗೊಂಡಿದೆ.
ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಹಾಗೂ ಸಹ ಸದಸ್ಯರು ಮಾಧ್ಯಮಗಳ ಸಂದರ್ಶನಕ್ಕೆ ಎಂದು ಮೀಸಲಾಗಿದ್ದ ಸ್ಥಳದಲ್ಲೂ ಓಡಿದ್ದರು. ಅಲ್ಲಿ ಹಾಕಿದ್ದ ಬೋರ್ಡ್ಗಳು ಆಟಗಾರರ ಓಟದ ವೇಗಕ್ಕೆ ನೆಲಕ್ಕೆ ಬಿದ್ದಿದ್ದವು. ಸಂದರ್ಶನ ಕೂಡ ಸರಿಯಾಗಿ ಕೊಟ್ಟಿರಲಿಲ್ಲ.
ಅರ್ಜೆಂಟೀನಾ ತಂಡ ಗೋಲ್ ಕೀಪರ್ ಎಮಿಲಿಯೊ ಮಾರ್ಟಿನೆಜ್ ಅವರು ಟೂರ್ನಿಯ ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿ ಪಡೆದ ಬಳಿಕ ಟ್ರೋಫಿಯನ್ನು ತೊಡೆ ಸಂಧಿಯಲ್ಲಿಟ್ಟುಕೊಂಡು ಅಶ್ಲೀಲ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಈ ವರ್ತನೆಯೂ ಸರಿಯಿಲ್ಲ ಎಂದು ಫಿಫಾ ಹೇಳಿದೆ.
ಇದನ್ನೂ ಓದಿ | Emiliano Martinez | ಅನುಚಿತ ವರ್ತನೆ ತೋರಿದ ಅರ್ಜೆಂಟೀನಾದ ಗೋಲ್ ಕೀಪರ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಫಿಫಾ!