ದೋಹಾ: ಫಿಪಾ ವಿಶ್ವ ಕಪ್(Fifa World Cup 2022) ಪಂದ್ಯ ವೀಕ್ಷಿಸಲು ಬರುವ ವಿದೇಶಿಯರು ಕತಾರ್‌ನ ಸಂಸ್ಕೃತಿಯನ್ನು ಗೌರವಿಸುವಂತಹ ಬಟ್ಟೆ ಧರಿಸಬೇಕು ಎಂಬ ಹೇಳಿಕೆಯನ್ನೊಳಗೊಂಡ ಪ್ರಕಟಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಇದು ನಕಲಿ ಪ್ರಕಟನೆ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.
ಪ್ರಕಟಣೆಯಲ್ಲಿ ಏನಿದೆ
ಅರಬ್ ರಾಷ್ಟ್ರ ಕತಾರ್‌ನಲ್ಲಿ ಮಹಿಳೆಯರು ತುಂಡುಡುಗೆ ಧರಿಸುವುದಕ್ಕೆ ನಿಷೇಧವಿದೆ. ವಿಶ್ವಕಪ್ ಟೂರ್ನಿಯ ವೇಳೆ ವಿದೇಶಿಯರಿಗೂ ಈ ನಿಯಮ ಅನ್ವಯಿಸಲಿದೆ. ಮಹಿಳೆಯರು ಮಂಡಿಯಿಂದ ಭುಜದವರೆಗೆ ದೇಹವನ್ನು ಮುಚ್ಚುವಂತಹ ಬಟ್ಟೆಗಳನ್ನು ಧರಿಸಬೇಕು. ಈ ನಿಯಮ ಉಲಂಘಿಸಿದ್ದಲ್ಲಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬ ಸೂಚನೆ ಪ್ರಕಟಣೆಯಲ್ಲಿದೆ. ಆದರೆ ಇದು ‘ನಕಲಿ’ ಪ್ರಕಟಣೆ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.
‘ಅಭಿಮಾನಿಗಳು ಕತಾರ್‌ನ ಸಂಸ್ಕೃತಿಯನ್ನು ಗೌರವಿಸಬೇಕು. ಆದರೆ ಬಟ್ಟೆಯ ಆಯ್ಕೆಯ ವಿಚಾರದಲ್ಲಿ ಯಾರನ್ನೂ ಬಂಧಿಸುವ ಅಥವಾ ಟೂರ್ನಿಯಿಂದ ಹೊರಹಾಕುವ ಪ್ರಶ್ನೆ ಉದ್ಭವಿಸದು’ ಎಂದು ಸಂಘಟಕರು ಹೇಳಿದ್ದಾರೆ.
‘ಮಹಿಳೆಯರು ತಮ್ಮಿಷ್ಟದ ಬಟ್ಟೆಗಳನ್ನು ಧರಿಸಬಹುದು. ಆದರೆ ಕತಾರ್‌ನ ನಿಯಮಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಫಿಫಾ ವೆಬ್‌ಸೈಟ್ ಹೇಳಿದೆ. ಆದರೂ ವಸ್ತ್ರಸಂಹಿತೆಯ ಕುರಿತ ಊಹಾಪೋಹಗಳು ಹರಿದಾಡುತ್ತಲೇ ಇವೆ.
ಇದನ್ನೂ ಓದಿ | Fifa World Cup| ಆಕಾಶದಲ್ಲೂ ಈ ದೇಶದ ಫುಟ್ಬಾಲ್ ಆಟಗಾರರಿಗೆ ಮಿಲಿಟರಿ ರಕ್ಷಣೆ!