Site icon Vistara News

FIFA World Cup 2026: ಫಿಫಾ ಫುಟ್ಬಾಲ್​ ವಿಶ್ವಕಪ್​ನಲ್ಲಿ ಮಹತ್ವದ ಬದಲಾವಣೆ; ಏನದು?

FIFA World Cup 2026: Significant change in FIFA World Cup; what is

FIFA World Cup 2026: Significant change in FIFA World Cup; what is

ವಾಷಿಂಗ್ಟನ್​​: 2026ರಲ್ಲಿ ಅಮೆರಿಕದಲ್ಲಿ(USA) ನಡೆಯಲಿರುವ ಫಿಫಾ ವಿಶ್ವ ಕಪ್​ ಫುಟ್ಬಾಲ್​ ಟೂರ್ನಿಯಲ್ಲಿ(FIFA World Cup 2026) ಮಹತ್ವದ ಬದಲಾವಣೆ ಮಾಡಲಾಗಿದೆ. 2022ರಲ್ಲಿ ಕತಾರ್​ನಲ್ಲಿ ನಡೆದ ಕೂಟದಲ್ಲಿ 32 ತಂಡಗಳು ಪಾಲ್ಗೊಂಡಿದ್ದವು ಆದರೆ ಈ ಬಾರಿ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸಲಾಗಿದೆ ಫಿಫಾ ತಿಳಿಸಿದೆ.

2022ರ ಫಿಫಾ ವಿಶ್ವಕಪ್​ಗೆ​ ಅಮೆರಿಕ, ಕೆನಡಾ(Canada) ಮತ್ತು ಮೆಕ್ಸಿಕೋ(Mexico) ದೇಶಗಳು ಆತಿಥ್ಯ ವಹಿಸಿಕೊಳ್ಳಲಿವೆ. ಈ ಟೂರ್ನಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿರುವ ವಿವಾರವನ್ನು ಮಂಗಳವಾರ ಫಿಫಾ ಕೌನ್ಸಿಲ್ ತಿಳಿಸಿದೆ. ಹೊಸ ನಿಯಮದಂತೆ ಈ ಹಿಂದೆ ಇದ್ದ 16 ತಂಡಗಳ ಮೂರು ಗುಂಪನ್ನು 12 ತಂಡದ ನಾಲ್ಕು ಗುಂಪಾಗಿ ವಿಭಾಗಿಸಲಾಗಿದೆ. ಕತಾರ್​ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಒಟ್ಟು 64 ಪಂದ್ಯಗಳನ್ನು ಆಡಿಸಲಾಗಿತ್ತು. ಇದೀಗ ಹೊಸ ಬದಲಾವಣೆಯ ಪ್ರಕಾರ 104 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ FIFA World Cup | ವಿಶ್ವ ಕಪ್ ವಿಜೇತ ಅರ್ಜೆಂಟೀನಾ ತಂಡದ ಅಸಭ್ಯ ವರ್ತನೆಗೆ ದಂಡ ವಿಧಿಸಿದ ಫಿಫಾ!

ಪರಿಷ್ಕೃತ ಸ್ಪರ್ಧೆಯ ರಚನೆಯು ಹಲವು ದೇಶಗಳಿಗೆ ವಿಶ್ವಕಪ್ ಆಡುವ ಕನಸು ನನಸಾಗಿಸಲು ಸಹಾಯ ಮಾಡಲಿದೆ ಎಂದು ಫಿಫಾ ಕೌನ್ಸಿಲ್ ತಿಳಿಸಿದೆ. ಈ ಟೂರ್ನಿಯ ಪಂದ್ಯಗಳು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಪ್ರಮುಖ 16 ನಗರಗಳಲ್ಲಿ ನಡೆಯಲಿವೆ. ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೂರ್ನಿಗೆ ಮೂರು ತಂಡಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿದೆ.

Exit mobile version