Site icon Vistara News

FIFA World Cup: ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು; ತನಿಖೆಗೆ ಕೋರಿದ ಎಐಎಫ್‌ಎಫ್‌

FIFA World Cup

FIFA World Cup: India vs Qatar Football Highlights, FIFA World Cup Qualifier 2026: India Out Of WC Qualifiers After Qatar's Controversial Goal Sparks Outrage

ದೋಹಾ: ಮಂಗಳವಾರ ನಡೆದಿದ್ದ ಫಿಫಾ ವಿಶ್ವಕಪ್(FIFA World Cup) ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಕತಾರ್(India vs Qatar) ವಿರುದ್ಧ 2-1 ಗೋಲುಗಳ ಅಂತರದಿಂದ ಸೋತು ಐತಿಹಾಸಿಕ ಮೂರನೇ ಸುತ್ತಿಗೆ ಪ್ರವೇಶ ಪಡೆಯುವ ಅವಕಾಶ ಕಳೆದುಕೊಂಡಿತ್ತು. ಭಾರತದ ಈ ಸೋಲಿಗೆ ಈ ಪಂದ್ಯದಲ್ಲಿ ರೆಫರಿ ನೀಡಿರುವ ವಿವಾದಾತ್ಮಕ(Controversial Goal) ಗೋಲು ಪ್ರಮುಖ ಕಾರಣ ಎಂದು ರೆಫರಿ ಮತ್ತು ಸಂಘಟಕರ ವಿರುದ್ಧ ಎಲ್ಲಡೆ ವಿರೋಧ ವ್ಯಕ್ತವಾಗಿದೆ. ಈ ಕುರಿತು ದೂರು ದಾಖಲಿಸಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌(All India Football Federation) (ಎಐಎಫ್‌ಎಫ್‌) ತನಿಖೆಯನ್ನು ಬಯಸಿದೆ.

ಈ ಪಂದ್ಯದಲ್ಲಿ ಲಾಲಿಯನ್ಜುವಾಲಾ ಚಾಂಗ್ಟೆ ಅವರು 37 ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನಿಂದ ಭಾರತ ಮುಂದಿತ್ತು. ಆದರೆ, 73ನೇ ನಿಮಿಷದಲ್ಲಿ ಕತಾರ್‌ನ ಯೂಸುಫ್ ಐಮೆನ್ ವಿವಾದಾತ್ಮಕ ಗೋಲು ಗಳಿಸಿದರು. ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವಂತಾಯಿತು.

ಏನಿದು ಘಟನೆ?


ಕತಾರ್‌ನ ಆಟಗಾರ ಅಬ್ದುಲ್ಲಾ ಅಲರಾಕ್ ಅವರ ‘ಫ್ರಿ-ಕಿಕ್’ ಅನ್ನು ಯೂಸೆಫ್ ಅಯೆಮ್ ಹೆಡರ್ ಮೂಲಕ ಭಾರತದ ಗೋಲು ಪೆಟ್ಟಿಗೆಗೆ ಸೇರಿಸಲು ಯತ್ನಿಸಿದರು. ಈ ವೇಳೆ ಭಾರತೀಯ ಗೋಲು ಕೀಪರ್ ಗುರ್ಪಿತ್ ಸಿಂಗ್ ಸಂಧು ಅವರು ಗೋಲು ಪೋಸ್ಟ್ ಸಮೀಪದಲ್ಲಿ ಚೆಂಡನ್ನು ತಡೆಯಲು ಯತ್ನಿಸಿದಾಗ ಕೈಯಿಂದ ಕೈಚೆಲ್ಲಿದ ಚೆಂಡು ಗೆರೆ ದಾಟಿ ಹೊರಗೆ ಹೋಯಿತು. ಇದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಆದರೆ ಈ ವೇಳೆ ಮೋಸದಾಟದ ಮೂಲಕ ಕತಾರ್ ಆಟಗಾರ ಹಶ್ಮಿ ಹುಸೇನ್ ಚೆಂಡನ್ನು ಮತ್ತೆ ಒಳಕ್ಕೆ ಒದ್ದಿದ್ದಾರೆ. ಈ ವೇಳೆ ಮತೋರ್ವ ಆಟಗಾರ ಯೂಸುಫ್ ಐಮೆನ್ ಚೆಂಡನ್ನು ಬಲೆಯೊಳಗೆ ಸೇರಿಸಿದ್ದಾರೆ. ರೆಫರಿ ಗೋಲ್​ ಎಂದು ತೀರ್ಪು ನೀಡಿದರು.

ರೆಫರಿ ನಿರ್ಧಾರಕ್ಕೆ ಭಾರತೀಯ ಆಟಗಾರರು ಮೈದಾನದಲ್ಲೇ ತೀವ್ರ ಪ್ರತಿರೋಧ ತೋರಿದರೂ, ರೆಫರಿಗಳು ಪರಿಗಣಿಸಲೇ ಇಲ್ಲ. ಇದರಿಂದಾಗಿ ಪಂದ್ಯದಲ್ಲಿ ಭಾರತ ಹಿನ್ನಡೆ ಅನುಭವಿಸಿತು. ಬಳಿಕ 85ನೇ ನಿಮಿಷದಲ್ಲಿ ಅಹ್ಮದ್ ಅಲ್-ರಾವಿ ಗಳಿಸಿದ ಗೋಲಿನಿಂದ ಕತಾರ್ ಗೆಲುವು ಸಾಧಿಸಿತ್ತು.

ಇದನ್ನೂ ಓದಿ FIFA World Cup: ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಭುವನೇಶ್ವರ, ಗುವಾಹಟಿ ಆತಿಥ್ಯ

ಚೆಂಡು ಭಾರತೀಯ ಗೋಲು ಕೀಪರ್ ಕೈಗೆ ತಾಗಿ ಹೊರ ಹೋಗಿರುವುದು ಸ್ಪಷ್ಟವಾಗಿ ಕಂಡು ಬಂದರೂ ಕೂಡ ರೆಫರಿಗಳು ಕತಾರ್​ಗೆ ಯಾವ ಮಾನದಂಡದಲ್ಲಿ ಗೋಲು ನೀಡಿದರು ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ. ಫಿಫಾ ನಿಯಮದ ಪ್ರಕಾರ ಚೆಂಡು ಗೆರೆ ದಾಟಿದ ಬಳಿಕ ಆಟ ಅಲ್ಲಿಗೆ ನಿಲುಗಡೆಗೊಳ್ಳಬೇಕು. ಜತೆಗೆ ಕತಾರ್‌ಗೆ ‘ಕಾರ್ನರ್-ಕಿಕ್’ ನೀಡಬೇಕಿತ್ತು. ಆದರೆ ಇಲ್ಲಿ ಹೀಗಾಗಲಿಲ್ಲ.

ತನಿಖೆಗೆ ಆಗ್ರಹ


ರೆಫರಿ ವಿವಾದಾತ್ಮಕ ತೀರ್ಪಿನ ಕುರಿತು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ದೂರು ದಾಖಲಿಸಿ ತನಿಖೆಗೆ ಬಯಸಿದೆ.

Exit mobile version