Site icon Vistara News

Fifa World Cup | ಕೇರಳದಲ್ಲಿ ಅಭಿಮಾನಿಗಳ ಮಧ್ಯೆ ಮೆಸ್ಸಿ, ನೇಮರ್​ ಕಟೌಟ್​ ವಾರ್​

football

ಕಲ್ಲಿಕೋಟೆ: ಭಾರತದಾದ್ಯಂತ ಟಿ20 ಕ್ರಿಕೆಟ್​ ವಿಶ್ವ ಕಪ್​ನ ಹವಾ ಇದ್ದರೆ ನೆರೆಯ ಕೇರಳ ರಾಜ್ಯದಲ್ಲಿ ಮಾತ್ರ ಫುಟ್ಬಾಲ್​ ಜ್ವರ​ ಆರಂಭವಾಗಿದೆ. ಇದಕ್ಕೆ ಸಾಕ್ಷಿಯಾಗಿ ಫುಟ್ಬಾಲ್​​​ ಲೆಜೆಂಡ್​​ಗಳಾದ ಲಿಯೋನಲ್​ ಮೆಸ್ಸಿ ಮತ್ತು ನೇಮರ್ ಅವರ ಕಟೌಟ್​​ನ್ನು ಕೇರಳದ ಕಲ್ಲಿಕೋಟೆಯ​ ನದಿ ಮಧ್ಯದಲ್ಲಿ ಸ್ಥಾಪಿಸಲಾಗಿದೆ.​ ಈ ವಿಡಿಯೊ ಎಲ್ಲಡೆ ವೈರಲ್​ ಆಗಿದೆ.

ಅರ್ಜೆಂಟೀನಾ ಫುಟ್ಬಾಲ್ ತಂಡದ ಕೇರಳ ಅಭಿಮಾನಿಗಳು ಲಿಯೋನೆಲ್ ಮೆಸ್ಸಿಯ 30 ಅಡಿ ಕಟೌಟ್​ನ್ನು ನಿಲ್ಲಿಸಿದರೆ, ಇದಕ್ಕೆ ಪ್ರತಿಯಾಗಿ ಬ್ರೆಜಿಲ್​ ಅಭಿಮಾನಿಗಳು ನೇಮರ್ ಜೂನಿಯರ್​​ ಕಟೌಟನ್ನು 35 ಅಡಿ ಎತ್ತರದಲ್ಲಿ ನಿಲ್ಲಿಸಿ ಟಕ್ಕರ್​ ನೀಡಿದ್ದಾರೆ. ಒಟ್ಟಾರೆ ಕತಾರ್​ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವ ಕಪ್‌ಗೆ ಕ್ಷಣಗಣನೆ ಆರಂಭದ ಹೊತ್ತಲ್ಲೇ, ಇವೆರಡೂ ಫ್ಯಾನ್ಸ್​ ವಾರ್​ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಗಲ್ಲಿ ಗಲ್ಲಿಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಜೆರ್ಸಿಗಳನ್ನು ತೊಟ್ಟು ಮೆರವಣಿಗೆ ಮಾಡಿ ಎಲ್ಲಡೆ ಗಮನ ಸೆಳೆದಿದ್ದಾರೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ | Team India | ಮೆಲ್ಬೋರ್ನ್​ ತಲುಪಿದ ರೋಹಿತ್​ ಪಡೆ; ಶುಕ್ರವಾರದಿಂದ ಅಭ್ಯಾಸ ಆರಂಭ

Exit mobile version