ನವದೆಹಲಿ: ಫಿಫಾ ವಿಶ್ವಕಪ್ ಪೂರ್ವಭಾವಿ ಅರ್ಹತಾ(FIFA World Cup qualifiers) ಸುತ್ತಿನ ಎರಡು ಪಂದ್ಯಗಳಿಗೆ ಭಾರತದ(Indian Football Team) 26 ಮಂದಿಯ ಸಂಭವನೀಯ ಆಟಗಾರರ ಪಟ್ಟಿ ಪ್ರಕಟಗೊಂಡಿದೆ. ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಚ್ ಈ ತಂಡವನ್ನು ಪ್ರಕಟಿಸಿದರು. ಐ-ಲೀಗ್ ನ ನಾಲ್ವರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕುವೈತ್ ಮತ್ತು ಕತಾರ್ ವಿರುದ್ಧ ಭಾರತ ಪಂದ್ಯವನ್ನಾಡಲಿದೆ.
ಭಾರತ ತಂಡ ಮೇ 10ರಿಂದ ಭುವನೇಶ್ವರದಲ್ಲಿ ತರಬೇತಿ ಶಿಬಿರ ಆರಂಭಿಸಲಿದ್ದು, ಜೂನ್ 6ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ಸೆಣಸಲಿದೆ. ಜೂನ್ 11ರಂದು ದೋಹಾದಲ್ಲಿ ಕತಾರ್ ವಿರುದ್ಧ ಆಡಲಿದೆ. ಆಡಿರುವ ನಾಲ್ಕು ಅಂಕಗಳೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತಿಗೆ ಅರ್ಹತೆ ಪಡೆಯಲಿವೆ ಮತ್ತು 2027ರ ಎಎಫ್‌ಸಿ ಏಷ್ಯನ್ ಕಪ್‌ಗೆ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಳ್ಳಲಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದ ಹಲವು ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿತ್ತು.
The first list of 26 probables for the Bhubaneswar camp 👇🏼#BlueTigers 🐯 #IndianFootball ⚽️ pic.twitter.com/VsQsA8xI7G
— Indian Football Team (@IndianFootball) May 4, 2024
ಐ-ಲೀಗ್‌ನಲ್ಲಿ ಮೊಹಮ್ಮದನ್ ಸ್ಪೋರ್ಟಿಂಗ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಿಜೋರಾಂನ ಫಾರ್ವರ್ಡ್ ಆಟಗಾರ ಡೇವಿಡ್ ಲಾಲ್ಹನ್ಸಂಗಾ, ಐಜ್ವಾಲ್ ಎಫ್‌ಸಿ ತಂಡದ ಲಾಲ್ರಿನ್ಜುವಾಲಾ ಲಾಲ್ಬಿಯಾಕ್ನಿಯಾ, ರಿಯಲ್ ಕಾಶ್ಮೀರ ಕ್ಲಬ್‌ನ ಡಿಫೆಂಡರ್ ಮುಹಮ್ಮದ್ ಹಮ್ಮದ್ ಮತ್ತು ಇಂಟರ್ ಕಾಶಿ ಎಫ್‌ಸಿ ಮಿಡ್ ಫೀಲ್ಡರ್ ಎಡ್ಮಂಡ್ ಲಾಲ್ರಿಂಡಿಕಾ ಸ್ಥಾನ ಪಡೆದ ಆಟಗಾರರಾಗಿದ್ದಾರೆ.
ಜೂನ್ 12, 2005 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನದ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ಹಿರಿಯ ರಾಷ್ಟ್ರೀಯ ತಂಡದ ಜರ್ಸಿಯನ್ನು ತೊಟ್ಟಿದ್ದರು. ಆ ಪಂದ್ಯ 1-1 ಡ್ರಾದಲ್ಲಿ ಅತ್ಯಂಕಡಿತ್ತು. ಭಾರತದ ಈ ಒಂದು ಗೋಲ್ ಬಾರಿಸಿದ್ದು ಚೆಟ್ರಿ. ಅಂದಿನಿಂದ, ಅವರು ಇದುವರೆಗೂ ರಾಷ್ಟ್ರೀಯ ತಂಡದ ಪರ ಹಲವು ಸಾಧನೆ ಮಾಡಿದ್ದಾರೆ.
ಸಂಭಾವ್ಯ ತಂಡ
ಗೋಲ್ ಕೀಪರ್‌ಗಳು: ಅಮರಿಂದರ್ ಸಿಂಗ್, ಗುರ್‌ಪ್ರೀತ್ ಸಿಂಗ್ ಸಂಧು.
ಡಿಫೆಂಡರ್ಸ್: ಅಮೇಯ ಗಣೇಶ್ ರಣವಾಡೆ, ಜಯ್ ಗುಪ್ತಾ, ಲಾಲ್‌ಚುಂಗ್ನುಂಗಾ, ಮೊಹಮ್ಮದ್ ಹಮ್ಮದ್, ನರೇಂದರ್, ನಿಖಿಲ್ ಪೂಜಾರಿ, ರೋಷನ್ ಸಿಂಗ್ ನೌರೆಮ್.
ಮಿಡ್ ಫೀಲ್ಡರ್ಸ್: ಬ್ರೆಂಡನ್ ಫರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕಾ, ಇಮ್ರಾನ್ ಖಾನ್, ಇಸಾಕ್ ವನ್ಲಾಲ್ರುವಾಟ್ಫೆಲ್ಲಾ, ಜೀಕ್ಸನ್ ಸಿಂಗ್, ಮಹೇಶ್ ಸಿಂಗ್ ನೌರೆಮ್, ಮೊಹಮ್ಮದ್ ಯಾಸಿರ್, ನಂದಕುಮಾರ್ ಶೇಕರ್, ರಾಹುಲ್ ಕನೋಲಿ ಪ್ರವೀಣ್, ಸುರೇಶ್ ಸಿಂಗ್ ವಾಂಗ್ಜಾಮ್, ವಿಬಿನ್ ಮೋಹನನ್.
ಫಾರ್ವರ್ಡ್ಸ್: ಡೇವಿಡ್ ಲಾಲ್ಹನ್ಸಂಗಾ, ಜಿತಿನ್ ಮಡತಿಲ್ ಸುಬ್ರಾನ್, ಲಾಲ್ರಿನ್ಜುವಾಲಾ ಲಾಲ್ಬಿಯಾಕ್‌ನಿಯಾ, ಪಾರ್ಥಿಬ್ ಗೊಗೊಯ್, ರಹಿಮ್ ಅಲಿ, ಸುನಿಲ್ ಚೆಟ್ರಿ