Site icon Vistara News

Fifa World Cup | ವಿಶ್ವ ಕಪ್​ ಫುಟ್ಬಾಲ್​ ಟೂರ್ನಿಗೆ ಕತಾರ್​ ತಲುಪಿದ ಬಲಿಷ್ಠ ತಂಡಗಳು

fifa world cup 2022

ಕತಾರ್​: ಫಿಫಾ ಫುಟ್ಬಾಲ್​ ವಿಶ್ವ ಕಪ್‌(Fifa World Cup) ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಫುಟ್ಬಾಲ್​ ಪ್ರೇಮಿಗಳ ಚಿತ್ತ ಅರಬ್ ರಾಷ್ಟ್ರ ಕತಾರ್‌ನತ್ತ ನೆಟ್ಟಿದೆ. ನವೆಂಬರ್​ 20ರಂದು ಆರಂಭವಾಗುವ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಂದೊಂದೇ ತಂಡಗಳು ದೋಹಾಕ್ಕೆ ಬಂದಿಳಿಯುತ್ತಿವೆ. ಪ್ರಮುಖ ತಂಡಗಳಾದ ಇಂಗ್ಲೆಂಡ್‌, ನೆದರ್ಲೆಂಡ್ಸ್‌, ಜಪಾನ್‌, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದ ಆಟಗಾರರು ಈಗಾಗಲೇ ಕತಾರ್‌ ತಲುಪಿದ್ದು ಅಭ್ಯಾಸ ಆರಂಭಿಸಿದ್ದಾರೆ.

ವಿವಾದಗಳ ಮಧ್ಯೆಯೂ ಟೂರ್ನಿ
ವಲಸೆ ಕಾರ್ಮಿಕರು ಮತ್ತು ಎಲ್‌ಜಿಬಿಟಿ ಸಮುದಾಯದವರ ಬಗ್ಗೆ ಕತಾರ್‌ ತಳೆದಿರುವ ಧೋರಣೆಗೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕೆಲವು ತಂಡಗಳು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿವೆ. ಜತೆಗೆ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಆದರೆ ಟೂರ್ನಿ ಆರಂಭವಾದ ಬಳಿಕ ಈ ವಿವಾದಗಳು ತಣ್ಣಗಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ ಸಂಘಟಕರು.

ಅಭ್ಯಾಸ ಆರಂಭಿಸಿದ ಮೆಸ್ಸಿ
ಫಿಫಾ ಫುಟ್ಬಾಲ್​ ವಿಶ್ವ ಕಪ್‌ ಟೂರ್ನಿ ಆರಂಭಕ್ಕೂ ಮುನ್ನವೇ ಅರ್ಜೆಂಟೀನಾ ತಂಡದ ಸ್ಟಾರ್​ ಆಟಗಾರ ಇದು ತನ್ನ ಕೊನೆಯ ಫುಟ್ಬಾಲ್​ ವಿಶ್ವಕಪ್​ ಆ ಬಳಿಕ ನಿವೃತ್ತಿ ಘೋಷಣೆ ಮಾಡಲಿದ್ದೇನೆ ಎಂದು ಹೇಳಿದ್ದರು. ಇದೀಗ ಕೊನೆಯ ವಿಶ್ವ ಕಪ್​ ಆಡುತ್ತಿರುವ ಲಯೋನೆಲ್‌ ಮೆಸ್ಸಿ ಇಲ್ಲಿ ತಂಡವನ್ನು ಚಾಂಪಿಯನ್​ ಪಟ್ಟಕೇರಿಸುವ ಮೂಲಕ ತಮ್ಮ ಫುಟ್ಬಾಲ್​ ವಿದಾಯವನ್ನು ಸ್ಮರಣೀಯಗೊಳಿಸಲು ಎದುರು ನೋಡುತ್ತಿದ್ದಾರೆ. ಅದರಂತೆ ತಮ್ಮ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮೆಸ್ಸಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

‘ನಮ್ಮ ತಂಡ ಸಮತೋಲನದಿಂದ ಕೂಡಿದೆ. ವಿಶ್ವ ಕಪ್‌ನಂತಹ ಪ್ರಮುಖ ಟೂರ್ನಿಯಲ್ಲಿ ಎಚ್ಚರಿಕೆಯ ಆಟ ಅಗತ್ಯ. ಹಂತ ಹಂತವಾಗಿ ಮೇಲಕ್ಕೇರುವುದು ನಮ್ಮ ಗುರಿ’ ಎಂದು ಮೆಸ್ಸಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | IPL 2023 | ಶಸ್ತ್ರಚಿಕಿತ್ಸೆಗೆ ಒಳಗಾದ ಮ್ಯಾಕ್ಸ್‌ವೆಲ್ ಈ ಬಾರಿ ಐಪಿಎಲ್​ ಆಡಲಿದ್ದಾರಾ? ಮೈಕ್​ ಹೆಸ್ಸನ್​ ಹೇಳಿದ್ದೇನು?

Exit mobile version