Site icon Vistara News

Fifa World Cup | ಪೋಲೆಂಡ್​ ವಿರುದ್ಧ ಗೆಲುವು; ನಾಕೌಟ್​ ಪ್ರವೇಶಿಸಿದ ಅರ್ಜೆಂಟೀನಾ

argentina vs poland

ದೋಹಾ: ಲಿಯೊನಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಫಿಫಾ ವಿಶ್ವ ಕಪ್(Fifa World Cup) ಫುಟ್ಬಾಲ್ ಟೂರ್ನಿಯ ನಾಕೌಟ್ ಹಂತ ತಲುಪಿದೆ. ಬುಧವಾರ ನಡೆದ “ಸಿ” ಗುಂಪಿನ ಕೊನೆಯ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ 2-0 ಗೋಲುಗಳ ಜಯ ಸಾಧಿಸಿ ಈ ಸಾಧನೆ ಮಾಡಿತು. ಮುಂದಿನ 16ರ ಘಟ್ಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಸಮಬಲದ ಪ್ರದರ್ಶನ ಕಂಡುಬಂದಿತು. ಆದರೆ ಎರಡನೇ ಅವಧಿಯ ಆಟದಲ್ಲಿ ಒಂದು ನಿಮಿಷ ಬಾಕಿ ಇರುವಾಗ ಅರ್ಜೆಂಟೀನಾ ಮುನ್ನಡೆ ಗಳಿಸಿತು. ನಹೂಲ್ ಮೊಲಿನಾ ಅವರ ಅದ್ಭುತ ಪಾಸ್​ವೊಂದರನ್ನು ಅಲಿಸ್ಟರ್ ಗೋಲಾಗಿ ಪರಿವರ್ತಿಸಿದರು. ಉಳಿದಂತೆ ಜ್ಯೂಲಿಯನ್ ಅಲ್ವೆರೆಝ್ ಅವರ ಗೋಲು ಗೆಲುವಿನ ಅಂತರವನ್ನು ಹೆಚ್ಚಿಸಿತು.

ಇದಕ್ಕೂ ಮುನ್ನ ವಿವಾದಾತ್ಮಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಮೆಸ್ಸಿ ವಿಫಲವಾದದ್ದು ಅರ್ಜೆಂಟೀನಾ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು. ಪೋಲೆಂಡ್​ ಈ ಸೋಲಿನ ಹೊರತಾಗಿಯೂ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿ ನಾಕೌಟ್ ಪ್ರವೇಶ ಪಡೆದಿದೆ. ಮುಂದಿನ ಹಂತದಲ್ಲಿ ಹಾಲಿ ಚಾಂಪಿಯನ್​ ಫ್ರಾನ್ಸ್ ತಂಡದ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಇದನ್ನೂ ಓದಿ | FIFA World Cup | ನೆದರ್ಲೆಂಡ್ಸ್‌, ಸೆನೆಗಲ್‌ ತಂಡಗಳಿಗೆ ಜಯ ನಾಕೌಟ್‌ ಸುತ್ತಿಗೆ ಪ್ರವೇಶ

Exit mobile version