ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಶನಿವಾರ ನಡೆದ ಭಾರತ ಮತ್ತು ಪಾಕ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ (ICC World Cup 2023) ರೋಹಿತ್ ಶರ್ಮಾ ಬಳಗ ಭರ್ಜರಿ ಗೆಲುವು ಸಾಧಿಸಿದೆ. ಸ್ಟೇಡಿಯಂನಲ್ಲಿ ಉಭಯ ಕಡೆಯವರು ಮುಖಾಮುಖಿಯಾಗುತ್ತಿದ್ದಂತೆ ಅಭಿಮಾನಿಗಳು ಅತ್ಯುತ್ಸಾಹ ತೋರಿದ್ದರು. ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸೇರಿದ್ದ ಸ್ಟೇಡಿಯಮ್ನಲ್ಲಿ ಅಬ್ಬರವೇ ಜೋರಾಗಿತ್ತು. ಇವೆಲ್ಲದರ ನಡುವೆ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಪ್ರೇಕ್ಷಕನ ನಡುವೆ ವಾಗ್ವಾದ ನಡೆದಿದೆ. ಅದರ ವೀಡಿಯೊ ವೈರಲ್ ಆಗಿದೆ.
Fight between police officer and audience during ind vs pak match😓 pic.twitter.com/jp0742HqzW
— S. (@mochacoldcoffee) October 15, 2023
ಎಸ್ ಎಂಬ ಎಕ್ಸ್ ಅಕೌಂಟ್ ಮೂಲಕ ಈ ವಿಡಿಯೋ ಶೇರ್ ಮಾಡಲಾಗಿದೆ. ಯುವಕ ಹಾಗೂ ಮಹಿಳಾ ಪೊಲೀಸ್ ಒಬ್ಬರ ನಡುವೆ ವಾಗ್ವಾದ ನಡೆಯುತ್ತಿರುವ ದೃಶ್ಯಗಳು ಅದರಲ್ಲಿವೆ. ಕೋಪಗೊಂಡ ಮಹಿಳಾ ಪೊಲೀಸ್ ಕೊನೆಗೆ ಯುವಕನ ಕಪಾಳಕ್ಕೆ ಬಾರಿಸುತ್ತಾರೆ. ಪ್ರೇಕ್ಷಕ ಕೂಡ ವಾಪಸ್ ಮಹಿಳೆ ಮೇಲೆ ಹಲ್ಲೆ ಮಾಡುತ್ತಾಳೆ. ಆದರೆ ಯಾಕೆ ಗಲಾಟೆ ನಡೆಯಿತು ಎಂಬುದರ ಮಾಹಿತಿ ಇಲ್ಲ..
ಶನಿವಾರ ನಡೆದ ಹೈವೋಲ್ಟೇಜ್ ಪಂದ್ಯಕ್ಕೆ ಒಂದು ಲಕ್ಷಕ್ಕಿಂತಲೂ ಅಧಿಕ ಅಭಿಮಾನಿಗಳು ಸೇರಿದ್ದರು. ಹೀಗಾಗಿ ಮೈದಾನದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಪಾಕಿಸ್ತಾನ ಆಟಗಾರರು ಪಾಲ್ಗೊಂಡಿದ್ದ ಕಾರಣ ಭದ್ರತೆ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿತ್ತು. ಗೃಹ ಮಂತ್ರಿ ಅಮಿತ್ ಶಾ ಅವರೂ ಪಾಲ್ಗೊಂಡಿದ್ದ ಕಾರಣ ಇನ್ನಷ್ಟು ಭದ್ರತೆ ಏರ್ಪಡಿಸಲಾಗಿತ್ತು. ಹೀಗಾಗಿ ಮೈದಾನದ ತುಂಬೆಲ್ಲ ಪೊಲೀಸರೇ ತುಂಬಿಕೊಂಡಿದ್ದರು. ಶಿಸ್ತು ಮೀರುವ ಅಭಿಮಾನಿಗಳಿಗೆ ಅಲ್ಲೇ ಶಿಸ್ತಿನ ಪಾಠ ಹೇಳಲಾಗಿತ್ತು. ಅಂತೆಯೇ ಮಹಿಳಾ ಪೊಲೀಸ್ ಹಾಗೂ ಅಭಿಮಾನಿಗಳ ನಡುವೆ ಮಾತುಕತೆ ಜೋರಾಗಿ ಜಗಳ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ : IND vs PAK: ಮೋದಿ ಸ್ಟೇಡಿಯಂನಿಂದಲೂ ಇಸ್ರೇಲ್‌ಗೆ ಬೆಂಬಲ; ಥ್ಯಾಂಕ್ಯೂ ಇಂಡಿಯಾ ಎಂದ ‘ಮಿತ್ರ’
ಭಾರತ ಮತ್ತು ಪಾಕ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಬಳಗ ಭರ್ಜರಿ ಗೆಲುವು ಸಾಧಿಸಿದೆ. ಮೆನ್ ಇನ್ ಬ್ಲೂ ತಂಡವು ಪಾಕಿಸ್ತಾನ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 191 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಬಾಬರ್ ಅಝಾಮ್ ಭಾರತ ವಿರುದ್ಧ ತಮ್ಮ ಚೊಚ್ಚಲ ಏಕದಿನ ಅರ್ಧಶತಕವನ್ನು ಗಳಿಸುವಲ್ಲಿ ಯಶಸ್ವಿಯಾದರೆ, ರಿಜ್ವಾನ್ ಈ ಮೈಲಿಗಲ್ಲು ತಲುಪಲು ಕೇವಲ ರನ್ ಬಾಕಿ ಇರುವಾಗ ವಿಕೆಟ್ ಕಳೆದುಕೊಂಡರು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ರೋಹಿತ್, ಶ್ರೇಯಸ್ ಅಯ್ಯರ್ ಜೊತೆಗೂಡಿ ಅರ್ಧಶತಕಗಳನ್ನು ಪೂರೈಸಿದರು. ಇದು ಏಕದಿನ ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಭಾರತದ ಸತತ 8 ನೇ ಗೆಲುವಾಗಿದೆ.