Site icon Vistara News

15 ವರ್ಷದ ಕ್ರಿಕೆಟ್​ ಬಾಳ್ವೆಯಲ್ಲಿ ಕೊಹ್ಲಿ ನಿರ್ಮಿಸಲಿದ್ದಾರೆ ವಿಶಿಷ್ಟ ದಾಖಲೆ; ಏನದು?

Virat Kohli made his first century of this Asia Cup edition

ಕೊಲಂಬೊ: ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ಶ್ರೇಷ್ಠ ಬ್ಯಾಟಿಂಗ್​ ಪ್ರದರ್ಶನ ತೋರಿದ ವಿರಾಟ್​ ಕೊಹ್ಲಿ(Virat Kohli) ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ ಅವರು ಲಂಕಾ(IND vs SL) ವಿರುದ್ಧದ ಇಂದಿನ ಪಂದ್ಯಕ್ಕೆ ಸಿದ್ಧರಾಗುವ ಬಗ್ಗೆ ಆಡಿರುವ ಮಾತುಗಳು ತಂಡಕ್ಕೆ ಹೆಚ್ಚು ಆತ್ಮವಿಶ್ವಾಸ ಮೂಡುವಂತೆ ಮಾಡಿದೆ.

ಸೋಮವಾರ ಕೊಲಂಬೊದಲ್ಲಿ ನಡೆದ ಪಾಕ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪ್ರಚಂಡ ಬ್ಯಾಟಿಂಗ್​ ಮೂಲಕ ಶತಕ ಬಾರಿಸಿ ಸಂಭ್ರಮಿಸಿದ್ದರು. ಅಲ್ಲದೆ ಅತಿ ವೇಗವಾಗಿ 13 ಸಾವಿರ ರನ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ 47ನೇ ಶತಕವನ್ನು ಪೂರ್ತಿಗೊಳಿಸಿದರು. 55 ಎಸೆತದಲ್ಲಿ ಅರ್ಧಶತಕ ಬಾರಿಸಿದ ಅವರು ಆ ಬಳಿಕ ಬಿರುಸಿನ ಬ್ಯಾಟಿಂಗ್​ ನಡೆಸಿ 94 ಎಸೆತದಲ್ಲಿ  9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ ಅಜೇಯ 122 ರನ್​ ಗಳಿಸಿದ್ದರು. ಈ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ, ‘ನನ್ನ 15 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ ನಾನು ಇದೇ ಮೊದಲ ಬಾರಿಗೆ ಬ್ಯಾಕ್​ ಟು ಬ್ಯಾಕ್​ ಪಂದ್ಯ ಆಡುತ್ತಿದ್ದೇನೆ, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾ ವಿರುದ್ಧ ನಾನು ಆಡಬೇಕು. ಅದೃಷ್ಟವಶಾತ್, ನಾನು 100ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿದ್ದೇನೆ. ಹೀಗಾಗಿ ಪಂದ್ಯ ಆಡಿದ ಮರುದಿನವೇ ಮತ್ತೊಂದು ಪಂದ್ಯ ಆಡುವುದು ಕಷ್ಟವಾಗದು. ಅಲ್ಲದೆ ಇದಕ್ಕೆ ಹೇಗೆ ತಯಾರಾಗಬೇಕು, ಯಾವರೀತಿ ಆಡಬೇಕೆ ಎಂದು ನನಗೆ ತಿಳಿದಿದೆ. ಆದರೂ ಇದೊಂದು ಸವಾಲಿನಿಂದ ಕೂಡಿರಲಿದೆ’ ಎಂದು ಹೇಳಿದರು.

ತಂಡಕ್ಕಾಗಿ ಸದಾ ಸಿದ್ಧ

ತಂಡಕ್ಕಾಗಿ ನಾನು ಆಡಲು ಸದಾ ಸಿದ್ಧನಿದ್ದೇನೆ. 15 ವರ್ಷಗಳ ಕ್ರಿಕೆಟ್​ ಬಾಳ್ವೆಯಲ್ಲಿ ಇದೇ ಮೊದಕಲ ಬಾರಿಗೆ ಸತತ ಏಕದಿನ ಪಂದ್ಯ ಆಡುತ್ತಿದ್ದೇನೆ. ಏನೇ ಸವಾಲು ಎದುರಾದರು ಇದನ್ನು ನಿಭಾಯಿಸುವ ವಿಶ್ವಾಸವಿದೆ ಎಂದರು. ಕೊಹ್ಲಿಯ ಈ ಮಾತನ್ನು ಕೇಳಿದ ಅವರ ಅಭಿಮಾನಿಗಳಿಗೆ ಮತ್ತು ಟೀಮ್​ ಮ್ಯಾನೆಜ್​ಮೆಂಟ್​ಗೆ ಹೆಚ್ಚಿನ ಬಲ ಬಂದಂತಾಗಿದೆ. ಲಂಕಾ ವಿರುದ್ಧವೂ ಕೊಹ್ಲಿ ಶತಕ ಬಾರಿಸಲಿ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದೆ.

ಇದನ್ನೂ ಓದಿ IND vs PAK: ಶತಕ ಬಾರಿಸಿದರೂ ಕೊಹ್ಲಿ ಸಾಧನೆಯನ್ನು ಕಡೆಗಣಿಸಿದ ಗೌತಮ್​ ಗಂಭೀರ್​

ಏಕದಿನ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 13,000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಅವರು 267 ಇನಿಂಗ್ಸ್​ಗಳಲ್ಲಿ ಈ ದಾಖಲೆ ಮಾಡಿದ್ದಾರೆ. 321 ಇನಿಂಗ್ಸ್​ಗಳಲ್ಲಿ ಈ ಮೈಲುಗಲ್ಲನ್ನು ತಲುಪಿದ ಸಚಿನ್ ತೆಂಡೂಲ್ಕರ್ (Sachin tendulkar) ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ವಿರಾಟ್​ ಕೊಹ್ಲಿಗೆ ಕೊಲೊಂಬೊ ಸ್ಟೇಡಿಯಮ್​ ಎಂದರೆ ಅಚ್ಚುಮೆಚ್ಚು. ಈ ಹಿಂದೆ ಈ ಕ್ರೀಡಾಂಗಣದಲ್ಲಿ ಸತತ 3 ಶತಕಗಳನ್ನು ಬಾರಿಸಿದ್ದ ಅವರು ಇದೀಗ ಮತ್ತೊಂದು ಶತಕ ಬಾರಿಸಿದರು. ಇದು ಅವರು ಸತತ ನಾಲ್ಕನೇ ಶಕತವಾಗಿದೆ. ಈ ಮೂಲಕ ಅವರು ಕೊಲೊಂಬೊ ಸ್ಟೇಡಿಯಮ್​ನ ರಾಜ ಎನಿಸಿಕೊಂಡಿದ್ದಾರೆ.

Exit mobile version