ಕೋಲ್ಕೊತಾ : ಕಳೆದ ಶನಿವಾರ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿ ತಮ್ಮ ಹುಟ್ಟೂರು ಕೋಲ್ಕೊತಾಗೆ ಬಂದಾಗ ಅವರಿಗೆ ಕ್ರಿಕೆಟ್ ಅಭಿಮಾನಿಗಳು ಪುಷ್ಪ ವೃಷ್ಟಿ ಮಾಡಿದರು. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯವು ಅವರು ಕೊನೇ ಪಂದ್ಯವಾಗಿತ್ತು. ಅಲ್ಲಿಂದ ವಾಪಸಾದ ಅವರು ಕೋಲ್ಕೊತಾ ಏರ್‌ಪೋರ್ಟ್‌ಗೆ ಬಂದಿಳಿದಾಗ ಅಭಿಮಾನಿಗಳು ಸ್ವಾಗತಿಸಿ ಹೂವಿನ ಮಳೆಗೆರೆದರು.
೧೯ನೇ ವರ್ಷದಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು ೨೦ ವರ್ಷಗಳ ಕಾಲ ಭಾರತ ಮಹಿಳೆಯರ ತಂಡದ ಕಾಯಂ ಸದಸ್ಯರಾಗಿದ್ದರು. ಏರ್‌ಪೋರ್ಟ್‌ಗೆ ಆಗಮಿಸಿದ ಅವರು ಮಹಿಳೆಯರ ಕ್ರಿಕೆಟ್‌ನ ಪ್ರಗತಿಗೆ ಬೇಕಾದ ಬೆಂಬಲದ ಕುರಿತು ಮಾತನಾಡಿದರು.
“ಮಹಿಳೆಯರ ಕ್ರಿಕೆಟ್‌ಗೆ ಹೆಚ್ಚು ಮೂಲಸೌಕರ್ಯ ಕಲ್ಪಿಸಬೇಕು. ಅದರಿಂದ ಅವರು ಇನ್ನಷ್ಟು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬಹುದಾಗಿದೆ. ಅದೇ ರೀತಿ ಯುವ ಆಟಗಾರ್ತಿಯರಿಗೆ ಹೆಚ್ಚಿನ ಅವಕಾಶಗಳು ಸಿಗುವಂತೆ ಮಾಡಬೇಕು,” ಎಂದ ಹೇಳಿದರು.
ಇದನ್ನೂ ಓದಿ | Jhulan Goswami | ವೃತ್ತಿ ಕ್ರಿಕೆಟ್‌ನ ಕೊನೇ ಪಂದ್ಯದಲ್ಲೂ ದಾಖಲೆ ಸೃಷ್ಟಿಸಿದ ಜೂಲನ್ ಗೋಸ್ವಾಮಿ