ಬ್ರಾಸಿಲಿಯಾ (ಬ್ರೆಜಿಲ್) : ಫುಟ್ಬಾಲ್ ದಿಗ್ಗಜ ಪೀಲೆ ಗುರುವಾರ ರಾತ್ರಿ (ಡಿಸೆಂಬರ್29) ದೀರ್ಘ ಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. (Pele Passes Away) ಅವರ ನಿರ್ಗಮನಕ್ಕೆ ಇಡೀ ಜಗತ್ತೇ ಸಂತಾಪ ಸೂಚಿಸುತ್ತಿದೆ. ಆದರೆ, ಅವರ ತಾಯಿಗೆ ಮಗ ನಿಧನ ಹೊಂದಿರುವ ಸುದ್ದಿ ಇನ್ನೂ ಗೊತ್ತಿಲ್ಲವಂತೆ.
ಪೀಲೆಯ ಅಮ್ಮ ಡೋನಾ ಸೆಲೆಸ್ಟೆ ಅರಾಂಟೀಸ್ ಅವರು ಅವರಿಗೆ 100 ವರ್ಷ ದಾಟಿದ್ದು ಅವರಿನ್ನೂ ಬದುಕಿದ್ದಾರೆ. ಆದರೆ, ವಯೋ ಸಹಜವಾಗಿರುವ ಸಮಸ್ಯೆಗಳಿಂದಾಗಿ ವಾಸ್ತವ ಪ್ರಪಂಚದ ಅರಿವು ಕಳೆದಕೊಂಡಿದ್ದಾರೆ. ಹೀಗಾಗಿ ಅವರಿಗೆ ಪುತ್ರನ ನಿಧನದ ಸುದ್ದಿ ಗೊತ್ತಾಗಿಲ್ಲ.
ಪೀಲೆ ನಿಧನ ಹೊಂದಿರುವ ಸುದ್ದಿಯನ್ನು ಅವರ ಪುತ್ರಿ ಕೆಲ್ಲಿ ಕ್ರಿಸ್ಟಿನೊ ನಾಸಿಮೆಂಟೊ ಅವರು ಜಗತ್ತಿಗೆ ತಿಳಿಸಿದ್ದರು. ಅಂತೆಯೇ ಪೀಲೆಯ ಸಹೋದರಿ ಮರಿಯಾ ಲೂಸಿಯಾ ಡಿ ನಾಸಿಮೆಂಟೊ ಅವರು ತಾಯಿಗೆ ಈ ಸುದ್ದಿಯನ್ನು ತಿಳಿಸಿದ್ದರು. ಪೀಲೆ ತಾಯಿ ಸೆಲೆಸ್ಟೆ ಅವರನ್ನು ಮರಿಯಾ ಲೂಸಿಯಾ ಡಿ ನಾಸಿಮೆಂಟೊ ಅವರೇ ನೋಡಿಕೊಳ್ಳುತ್ತಿದ್ದಾರೆ.
ಸಹೋದರನ ಸಾವಿನ ಸುದ್ದಿಯನ್ನು ಅಮ್ಮನಿಗೆ ತಿಳಿಸಿದೆವು. ಅವರಿಗೆ ಎಷ್ಟು ಗೊತ್ತಾಯಿತು ಎಂದು ಗೊತ್ತಿಲ್ಲ. ಅವರು ತಮ್ಮದೇ ಲೋಕದಲ್ಲಿದ್ದಾರೆ. ಆದಾಗ್ಯೂ ಚಿತ್ರವನ್ನು ಅವರ ಕೈಗೆ ಕೊಟ್ಟಾಗ ಹಿಡಿದುಕೊಂಡಿದ್ದಾರೆ ಎಂದು ಮರಿಯಾ ಲೂಸಿಯಾ ಡಿ ನಾಸಿಮೆಂಟೊ ಅವರು ತಿಳಿಸಿದ್ದಾರೆ.
ಇದನ್ನೂ ಓದಿ | RIP Pele | ಬ್ರೆಜಿಲ್ನ ಫುಟ್ಬಾಲ್ ದಿಗ್ಗಜ ಪೀಲೆ ನಿಧನಕ್ಕೆ ಹಲವು ಗಣ್ಯರ ಸಂತಾಪ