ಲಂಡನ್: ಲಾ ಲೀಗಾ ಫುಟ್ಬಾಲ್(Football) ಲೀಗ್ನಲ್ಲಿ ಮ್ಯಾಡ್ರಿಡ್ ಹಾಗೂ ಬಾರ್ಸಿಲೋನಾ ತಂಡದ ಆಟಗಾರರು ಪಂದ್ಯದ ಮಧ್ಯೆಯೇ ಮೈದಾನದಲ್ಲಿ ಕಿತ್ತಾಟ ನಡೆಸಿದ್ದಾರೆ. ಪಂದ್ಯದ ಅಂತಿಮ ಕ್ಷಣದಲ್ಲಿ ಈ ಘಟನೆ ಸಂಭವಿಸಿದೆ.
ಜಿದ್ದಾಜಿದ್ದಿನ ಹೋರಾಟದ ನಡುವೆ ಫೆರಾನ್ ಟೊರೆಸ್ ಹಾಗೂ ಸ್ಟೀಫನ್ ಸಾವಿಚ್ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಬರದಲ್ಲಿ ಜಗಳವಾಡಿದ್ದಾರೆ. ಪಂದ್ಯದ 92ನೇ ನಿಮಿಷದಲ್ಲಿ ಬಾರ್ಸಿಲೋನಾ ತಂಡದ ಟೊರೆಸ್ ಪಾಸ್ ನೀಡುವ ಯತ್ನದಲ್ಲಿದ್ದರು. ಎದುರಾಳಿ ತಂಡ ಆಟಗಾರ ಸಾವಿಚ್ ಡಿಫೆನ್ಸ್ ಮಾಡುವ ಯತ್ನದಲ್ಲಿ ಟೊರೆಸ್ ಅವರನ್ನು ನೆಲಕ್ಕೆ ಬೀಳಿಸಲು ಮುಂದಾದರು. ಇದರಿಂದ ಕೋಪಗೊಂಡ ಟೊರೆಸ್ ಮೈದಾನದಲ್ಲೇ ಸಾವಿಚ್ ಜತೆ ಕಿತ್ತಾಟ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರೀಡಾಸ್ಫೂರ್ತಿ ಮೆರೆತು ಮೈದಾನದಲ್ಲಿ ಕಿತ್ತಾಡುವ ಮೂಲಕ ಅತಿರೇಕದ ವರ್ತನೆ ತೋರಿದ ಉಭಯ ಆಟಗಾರರಿಗೂ ಪಂದ್ಯದ ರೆಫ್ರಿ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರಕ್ಕೆ ಕಳುಹಿಸಿದರು. ಇನ್ನು ಈ ಪಂದ್ಯದಲ್ಲಿ ಬಾರ್ಸಿಲೋನಾ ತಂಡವು 1-0 ಅಂತರದಿಂದ ಅಟ್ಲೆಟಿಕೊ ಮ್ಯಾಡ್ರಿಡ್ ತಂಡವನ್ನು ಸೋಲಿಸಿತು.
ಇದನ್ನೂ ಓದಿ | Fifa World Cup | ಅರ್ಜೆಂಟೀನಾದ ಕರೆನ್ಸಿಯಲ್ಲಿ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿಯ ಫೋಟೊ!