Site icon Vistara News

Neymar: ಫುಟ್ಬಾಲ್​ ಆಟಗಾರ ನೇಯ್ಮರ್‌ ಗೆಳತಿ, ಮಗುವನ್ನು ಅಪಹರಿಸಲು ಯತ್ನ

The couple welcomed their baby last month.

ಸಾವೋ:(ಬ್ರಿಜಿಲ್) ಖ್ಯಾತ ಫುಟ್ಬಾಲ್​ ಆಟಗಾರ ನೇಯ್ಮರ್‌(Neymar) ಅವರ ಗೆಳತಿ ಬ್ರೂನಾ ಬಿಯಾನ್ಕಾರ್ಡಿ ಹಾಗೂ ಮಗುವನ್ನು ದರೋಡೆ ಮಾಡಲು(Kidnapping Attempt) ಯತ್ನಿಸಿದ ಘಟನೆ ಬ್ರೆಜಿಲ್​ನ ಸಾವೋದಲ್ಲಿ ನಡೆದಿದೆ. ಅದೃಷ್ಟವಶಾತ್ ದರೋಡೆ ನಡೆಯುವ ಸಮಯದಲ್ಲಿ ಬಿಯಾನ್ಕಾರ್ಡಿ ಮತ್ತು ಆಕೆಯ ಮಗು ಮನೆಯಲ್ಲಿ ಇರಲಿಲ್ಲ.

ದರೋಡೆ ಕೋರರು ಮನೆಯಲ್ಲಿದ್ದ ಬಿಯಾನ್ಕಾರ್ಡಿ(Bruna Biancardi) ಅವರ ಪೋಷಕರನ್ನು ಕಟ್ಟಿ ಹಾಕಿ ಹಣ, ವಾಚ್​, ಆಭರಣಗಳನ್ನು ಕದ್ದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 20 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಮತ್ತೋರ್ವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನೇಯ್ಮರ್‌ ಭಾರತ ಭೇಟಿ ಅನುಮಾನ

ನೇಯ್ಮರ್‌(Neymar) ಅವರು ಭಾರತದಲ್ಲಿ ತಮ್ಮ ಕಾಲ್ಚಳಕ ತೋರಲು ಸಿದ್ಧರಾಗಿದ್ದರು. ಆದರೆ ಕಳೆದ ತಿಂಗಳು ವಿಶ್ವಕಪ್ ಅರ್ಹತಾ ಪಂದ್ಯದ(2026 World Cup qualifying match) ವೇಳೆ ಎಡ ಮೊಣಕಾಲು ಗಾಯಕ್ಕೀಡಾಗಿದ್ದು ಅವರು ಕನಿಷ್ಠ ಮೂರು ತಿಂಗಳು ಫುಟ್​ಬಾಲ್​ನಿಂದ ದೂರ ಉಳಿಯಲಿದ್ದಾರೆ. ಅವರ ಗಾಯದ ಸ್ವರೂಪ ಗಂಭಿರವಾಗಿದೆ. ಹೀಗಾಗಿ ಅವರು ಭಾರತದಲ್ಲಿ ಆಡುವುದು ಅನುಮಾನ ಎಂದು ತಿಳಿದುಬಂದಿದೆ. ವಿಶ್ವಕಪ್ ಅರ್ಹತಾ ಪಂದ್ಯವಾದ ಉರುಗ್ವೆ ವಿರುದ್ಧ ಆಡುತ್ತಿರುವ ವೇಳೆ ಮೊಣಕಾಲಿನ ಗಾಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದರು.

ಇದನ್ನೂ ಓದಿ Neymar: ಫುಟ್ಬಾಲ್​ ಮಾಂತ್ರಿಕ ಪೀಲೆ ಸಾರ್ವಕಾಲಿಕ ದಾಖಲೆ ಮುರಿದ ನೇಮರ್​

ಇಂಡಿಯನ್ ಸೂಪರ್ ಲೀಗ್ (ಐಎಸ್​ಎಲ್) ನ ಮುಂಬೈ ಸಿಟಿ(Mumbai City FC) ಫುಟ್ಬಾಲ್ ಕ್ಲಬ್ ಎಎಪ್​ಸಿ ಚಾಂಪಿಯನ್ಸ್ ಲೀಗ್​ನ(AFC Champions League) ಇತ್ತೀಚಿನ ಡ್ರಾದಲ್ಲಿ ಅಲ್-ಹಿಲಾಲ್(Al Hilal) ತಂಡವಿರುವ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಹೀಗಾಗಿ ನೇಯ್ಮರ್‌ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ಭಾರತದಲ್ಲಿ ಅಧಿಕೃತ ಪಂದ್ಯ ಆಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಕೇಳಿ ಭಾರತೀಯ ಫುಟ್ಬಾಲ್​ ಅಭಿಮಾನಿಗಳು ಸಂತಸಗೊಂಡಿದ್ದರು. ಅವರ ಬರುವಿಕೆಗಾಗಿ ಕಾತರಗೊಂಡಿದ್ದರು.

ನಿರೀಕ್ಷೆ ಹುಸಿಯಾಗುವ ಸಾಧ್ಯತೆ

ಮುಂಬೈ ಸಿಟಿ FC ತನ್ನ ತವರಿನ ಪಂದ್ಯಗಳನ್ನು ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಆಡಲಿದೆ. ನೇಮರ್​ ಕೂಡ ಭಾರತಕ್ಕೆ ಬಂದರೆ ಇದೇ ಮೈದಾನದಲ್ಲಿ ಪಂದ್ಯವನ್ನಾಡಲಿದ್ದಾರೆ ಒಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈಗ ಈ ನಿರೀಕ್ಷೆ ಹುಸಿಗೊಂಡಂತಿದೆ. ಅವರು ಗಾಯಕ್ಕೀಡಾಗಿದ್ದು ಭಾರತ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ಅಧಿಕವಾಗಿದೆ. ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ಲಬ್ ಆಗಿರುವ ಅಲ್-ಹಿಲಾಲ್, ನೇಯ್ಮರ್‌, ರುಬೆನ್ ನೆವೆಸ್, ಕಾಲಿಡೌ ಕೌಲಿಬಾಲಿ, ಸೆರ್ಗೆಜ್ ಮಿಲಿಂಕೋವಿಕ್-ಸಾವಿಕ್ ಮುಂತಾದ ಸ್ಟಾರ್​ ಆಟಗಾರರನ್ನು ಒಳಗೊಂಡಿತ್ತು.

ಪ್ಯಾರಿಸ್ ಸೇಂಟ್-ಜರ್ಮೈನ್​ಗೆ ಗುಡ್​ಬೈ

ಕೆಲ ತಿಂಗಳುಗಳ ಹಿಂದಷ್ಟೇ ನೇಯ್ಮರ್‌ ಫ್ರಾನ್ಸ್​ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್(Paris Saint-Germain Football Club)​ ತೊರೆದು ಸೌದಿ ಅರೇಬಿಯಾದ ಅಲ್‌-ಹಿಲಾಲ್‌ ಫುಟ್ಬಾಲ್‌ ಕ್ಲಬ್‌ಗೆ(Al Hilal Saudi Club) ಸೇರ್ಪಡೆಗೊಂಡಿದ್ದರು. 100 ಮಿಲಿಯನ್ ಯುರೋ (ಸುಮಾರು 1455ಕೋಟಿ ರೂ.) ಮೊತ್ತಕ್ಕೆ ಎರಡು ವರ್ಷಗಳ ಕಾಲ ನೇಯ್ಮರ್‌​ ಈ ಕ್ಲಬ್ ಆಡಲು ಒಪ್ಪಂದ ಮಾಡಿಕೊಂಡಿದ್ದರು. 2017 ರಲ್ಲಿ ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಯ್ಮರ್‌ ಅವರನ್ನು ಟ್ರಾನ್ಸ್​ಫರ್ ಆಯ್ಕೆಯ ಮೂಲಕ ಪಿಎಸ್​ಜಿ ತಂಡ ಖರೀದಿಸಿತ್ತು. 6 ವರ್ಷಗಳ ಕಾಲ ಪಿಎಸ್​ಜಿ ತಂಡದ ಪರ ಆಡಿದ್ದ ನೇಯ್ಮರ್‌, 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ಬಾರ್ಸಿಲೋನಾ(FC Barcelona) ಪರ 186 ಪಂದ್ಯಗಳಲ್ಲಿ 105 ಗೋಲುಗಳಿಸಿದ್ದರು. 

Exit mobile version