ನವದೆಹಲಿ: ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ(Hockey India) ತಂಡ ವೈಫಲ್ಯ ಅನುಭವಿಸಿದ ಹಿನ್ನೆಲೆ ಗ್ರಹಾಂ ರೀಡ್ ಭಾರತೀಯ ಹಾಕಿ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಭಾರತೀಯ ಹಾಕಿ ತಂಡದ ನೂತನ ಕೋಚ್ ಹುದ್ದೆಗೆ ಹುಡುಕಾಟ ಆರಂಭವಾಗಿದೆ.
ಸದ್ಯ ಭಾರತೀಯ ಹಾಕಿ ತಂಡದ ಕೋಚ್ ಹುದ್ದೆಗೆ ವಿದೇಶಿಯರು ರೇಸ್ನಲ್ಲಿದ್ದು, ಅರ್ಜೆಂಟೀನಾದ ಮ್ಯಾಕ್ಸ್ ಕಾಲ್ಡಾಸ್(Caldas), ನೆದರ್ಲೆಂಡ್ಸ್‌ನ ಸೀಗ್‌ಫ್ರೀಡ್ ಐಕ್‌ಮ್ಯಾನ್(Aikman) ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಮತ್ತು ಕಾಮನ್ವೆಲ್ತ್ ಗೇಲ್ಸ್ನಲ್ಲಿ ಪದಕ ಗೆದ್ದ ಬಳಿಕ ಭಾರತೀಯ ಹಾಕಿ ಪ್ರಗತಿಯ ಕಾಣಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಯಿತು. ಒಲಿಂಪಿಕ್ಸ್ ಪದಕ ಗೆಲುವಿನಲ್ಲಿ ಗ್ರಹಾಂ ರೀಡ್ ಪಾತ್ರ ಅತ್ಯುತ್ತಮ ಮಟ್ಟದಲ್ಲಿತ್ತು. ಅನಂತರ ಭಾರತ ತಂಡದ ಪ್ರದರ್ಶನ ಆತಂಕಕಾರಿ ರೀತಿಯಲ್ಲಿ ಕುಸಿಯಿತು. ಹಾಕಿ ವಿಶ್ವ ಕಪ್ನಲ್ಲಿ ಕ್ವಾರ್ಟರ್ ಫೈನಲ್ ಕೂಡ ಕಾಣದ ಆತಿಥೇಯ ಭಾರತ 9ನೇ ಸ್ಥಾನಕ್ಕೆ ಕುಸಿದಿತ್ತು. ಈ ಎಲ್ಲ ವೈಫಲ್ಯದಿಂದ ಗ್ರಹಾಂ ರೀಡ್ ತಮ್ಮ ಕೋಚ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದರು.
ಇದನ್ನೂ ಓದಿ Indian Hockey | ಭಾರತ ಹಾಕಿ ತಂಡದ ಕೋಚ್ ಗ್ರಹಾಮ್ ರೀಡ್ ರಾಜೀನಾಮೆ
ನೂತನ ಕೋಚ್ ಆಯ್ಕೆ ವಿವಾರವಾಗಿ ಮಾತನಾಡಿದ ಹಾಕಿ ಇಂಡಿಯಾದ ಅಧಿಕಾರಿಯೊಬ್ಬರು ನಾವು 2-3 ವಿದೇಶಿ ತರಬೇತುದಾರರೊಂದಿಗೆ ಮಾತುಕತೆ ನಡೆಸಿದ್ದೇವೆ. ಈಗಾಗಲೇ ಕಾಲ್ಡಾಸ್, ಐಕ್‌ಮ್ಯಾನ್ ಸೇರಿದಂತೆ ಇನ್ನೂ ಕೆಲವು ವಿದೇಶಿ ತರಬೇತುದಾರರ ಹೆಸರನ್ನು ಪರಿಶೀಲಿಸಲಾಗುತ್ತಿದೆ. ಈ ವರ್ಷ ಏಷ್ಯನ್ ಗೇಮ್ಸ್ ಇದೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದೆ. ಈ ಎರಡೂ ಕೂಟಗಳಲ್ಲಿ ಭಾರತ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಲೇಬೇಕು. ಅಂಥ ಸಾಮರ್ಥ್ಯವುಳ್ಳ ಕೋಚ್ ನಮ್ಮ ಆಯ್ಕೆ ಎಂದು ಅವರು ಹೇಳಿದರು.