Site icon Vistara News

Ricky Ponting | ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ಗೆ ಹೃದಯ ಬೇನೆ, ಅಸ್ಪತ್ರೆಗೆ ದಾಖಲು

Ricky ponting

ಕ್ಯಾನ್‌ಬೆರಾ : ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಹೆಡ್‌ ಕೋಚ್‌ ರಿಕಿ ಪಾಂಟಿಂಗ್‌ ಹೃದಯ ಬೇನೆ ಸಮಸ್ಯೆಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೂರನೇ ದಿನವಾದ ಶುಕ್ರವಾರ ಘಟನೆ ನಡೆದಿದೆ. ಅಸ್ವಸ್ಥಗೊಂಡ ಅವರು ಪರ್ತ್‌ ಸ್ಟೇಡಿಯಮ್‌ನಿಂದ ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

೪೭ ವರ್ಷದ ಕ್ರಿಕೆಟಿಗನಿಗೆ ಲಂಚ್‌ ಬ್ರೇಕ್‌ ವೇಳೆಯಲ್ಲಿ ಹೃದಯ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

“ರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದಾರೆ ಮತ್ತು ಇಂದಿನ ಪ್ರಸಾರದ ಉಳಿದ ಭಾಗಕ್ಕೆ ವಿವರಣೆಯನ್ನು ನೀಡುವುದಿಲ್ಲ” ಎಂದು ಪಂದ್ಯದ ನೇರ ಪ್ರಸಾರದ ಚಾನೆಲ್ 7 ಹೇಳಿಕೆ ನೀಡಿದೆ.

ಇದನ್ನೂ ಓದಿ | Asia Cup | ಭಾರತ ಈ ಬಾರಿ ಪಾಕಿಸ್ತಾನವನ್ನು ಬಗ್ಗು ಬಡಿಯೋದು ಗ್ಯಾರಂಟಿ ಎಂದ ಆಸೀಸ್‌ ಕ್ರಿಕೆಟಿಗ

Exit mobile version