ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಆಟಗಾರ ಹಾಗೂ ಒಲಿಂಪಿಯನ್ ಹಾಕಿ ಪಟು ಬ್ರಿಯಾನ್ ಬೂತ್ (Brian Booth)ನಿಧನ ಹೊಂದಿದ್ದಾರೆ. ಅವರಿಗೆ 89 ವಯಸ್ಸಾಗಿತ್ತು. ಬ್ರಿಯಾನ್ ಬೂತ್ ನಿಧನದ ವಿಚಾರವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಶನಿವಾರ ತಿಳಿಸಿದೆ. ಆದರೆ ಬೂತ್ ಸಾವಿಗೆ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ.
ಬೂತ್ ಅವರ ನಿಧನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸೇರಿ ಒಲಿಂಪಿಕ್ಸ್ ಕ್ರೀಡಾ ಸಂಸ್ಥೆ ಸಂತಾಪ ಸೂಚಿಸಿದೆ. ಬೂತ್ ಅವರು ಪತ್ನಿ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಬೂತ್ ಅವರು ಆಸ್ಟ್ರೇಲಿಯಾ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 1960ರ ದಶಕದ ಆರಂಭದಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದರು. ಅವರು 42.21 ರ ಸರಾಸರಿಯಲ್ಲಿ 1,773 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ. ಬೂತ್ ಅವರು 1961 ಮತ್ತು 1966 ರ ನಡುವೆ ಆಸ್ಟ್ರೇಲಿಯಾಕ್ಕಾಗಿ 29 ಟೆಸ್ಟ್‌ಗಳನ್ನು ಆಡಿದರು, ಇದರಲ್ಲಿ ಎರಡು ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಸಾಧನೆ ಇವರದ್ದಾಗಿತ್ತು.
ಇದನ್ನೂ ಓದಿ Football Viral Video| ಫುಟ್ಬಾಲ್ ಮೈದಾನದಲ್ಲೇ ಆಟಗಾರರ ಫೈಟಿಂಗ್; ವಿಡಿಯೊ ವೈರಲ್
“ಬ್ರಿಯಾನ್ ಅವರನ್ನು ಕ್ರಿಕೆಟ್ ಸಮುದಾಯ ಮತ್ತು ಅದರಾಚೆಗೂ ಅಪಾರವಾಗಿ ಗೌರವಿಸಲಾಗುತ್ತಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.