ದುಬೈ : ಪಾಕಿಸ್ತಾನ ತಂಡದ ವಿರುದ್ಧದ ಏಷ್ಯಾ ಕಪ್ ಸೂಪರ್- ೪ ಪಂದ್ಯದಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಬಗ್ಗೆ ಕ್ರಿಕೆಟ್ ಪಂಡಿತರು ನಿರಾಸೆ ವ್ಯಕ್ತಪಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಸೂರ್ಯಕುಮಾರ್ ಅವರ ಆಟದ ವೈಖರಿ ಬಗ್ಗೆ ಹೆಚ್ಚಿನ ಆಕ್ಷೇಪಗಳು ವ್ಯಕ್ತಗೊಂಡಿವೆ. ಇವರಿಬ್ಬರಲ್ಲೂ ರಿಷಭ್ ಪಂತ್ ಔಟಾಗಿರುವ ರೀತಿಗೆ ಹಿರಿಯ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು. ಈ ವೇಳೆ ಉತ್ತಮ ಆರಂಭದ ಹೊರತಾಗಿಯೂ ಭಾರತ ತಂಡ ೯.೪ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡಿತ್ತು. ೨೦೦ ರನ್‌ಗಳ ಗುರಿ ಹೊಂದಿದ್ದ ಭಾರತ ತಂಡದ ಯೋಜನೆಗೆ ಪೂರಕವಾಗಿ ರಿಷಭ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಬೇಕಾಗಿತ್ತು. ಆದರೆ, ಅವರು ೧೨ ಎಸೆತಗಳಲ್ಲಿ ೧೪ ರನ್ ಮಾಡಿ ಔಟಾದರು. ಅದೂ ಅನಗತ್ಯ ರಿವರ್ಸ್ ಸ್ವೀಪ್ ಬಾರಿಸಿ ಕ್ಯಾಚ್ ನೀಡುವ ಮೂಲಕ.
ರಿಷಭ್ ಪಂತ್ ಔಟಾದ ರೀತಿಯನ್ನು ಭಾರತ ತಂಡದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಹಾಗೂ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಟೀಕಿಸಿದ್ದಾರೆ. ಗಂಭೀರ್ ಅವರು “ರಿವರ್ಸ್ ಸ್ವೀಪ್ ಬ್ಯಾಟಿಂಗ್ ಶೈಲಿ ರಿಷಭ್ ಪಂತ್ ಅವರಿಗೆ ತಕ್ಕುದಾಗಿಲ್ಲ. ಅದು ಅವರ ಬಲವೂ ಅಲ್ಲ. ಅವರು ಅನಗತ್ಯವಾಗಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ಔಟಾಗಿದ್ದಾರೆ,” ಎಂದು ಹೇಳಿದ್ದಾರೆ.
ರವಿ ಶಾಸ್ತ್ರಿ ಮಾತನಾಡಿ “ದುಬೈ ಪಿಚ್ ಸ್ಪರ್ಧಾತ್ಮಕವಾಗಿದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಚೆಂಡಿಗೆ ಬಾರಿಸಿದರೆ ಬೌಂಡರಿ ಬಾರಿಸುವುದು ರಿಷಭ್‌ಗೆ ಕಷ್ಟವಲ್ಲ. ಅದರೆ, ಅವರು ಅನಗತ್ಯವಾಗಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ಔಟಾಗಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ರೀತಿಯಲ್ಲಿ ಆಡಿರುವಾಗ ರಿಷಭ್ ಪಂತ್ ಬೇಜವಾಬ್ದಾರಿಯಿಂದ ವಿಕೆಟ್ ಕಳೆದುಕೊಂಡಿರುವುದು ಸರಿಯಲ್ಲ,” ಎಂದು ಹೇಳಿದ್ದಾರೆ.
ಇದನ್ನೂ ಓದಿ | IND vs PAK | ಕೊಹ್ಲಿಯನ್ನು ನೋಡಿ ಕಲಿಯಿರಿ ಎಂದು ಸೂರ್ಯಕುಮಾರ್ ಮತ್ತು ಪಂತ್‌ಗೆ ಪಾಠ ಹೇಳಿದ ಗಂಭೀರ್