ಮುಂಬಯಿ: ಕನ್ನಡಿಗ ಕೆ. ಎಲ್ ರಾಹುಲ್ ಫಾರ್ಮ್ ಕಳೆದುಕೊಂಡಿರುವುದು ಭಾರತೀಯ ಕ್ರಿಕೆಟ್ ಕಾರಿಡಾರ್ನಲ್ಲಿ ಬಹುಚರ್ಚಿತ ವಿಷಯ. ಅದೂ ಅಲ್ಲದೆ, ಆಸ್ಟ್ರೇಲಿಯಾ ವಿರುದ್ಧ ಸರಣಿಗೆ (INDvsAUS) ಮೊದಲು ಅವರನ್ನು ತಂಡದ ಉಪನಾಯಕರಾಗಿ ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಯೂ ಎದುರಾಗಿತ್ತು. ಅವರಿಗೆ ಉಪನಾಯಕನ ಪಟ್ಟ ಕಟ್ಟಿದ್ದ ಕಾರಣ ಉತ್ತಮ ಫಾರ್ಮ್ನಲ್ಲಿದ್ದ ಶುಭ್ಮನ್ ಗಿಲ್ಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಲು ಸಾಧ್ಯವಾಗಿಲ್ಲ ಎಂಬುದೇ ಎಲ್ಲರ ಆಕ್ಷೇಪ. ಇದೇ ಚರ್ಚಗೆ ತಮ್ಮ ಧ್ವನಿಯನ್ನೂ ಸೇರಿಸಿದ್ದಾರೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ. ಅವರ ಪ್ರಕಾರ ತವರಿನ ಸರಣಿಗೆ ಉಪನಾಯಕರನ್ನು ಆಯ್ಕೆ ಮಾಡುವುದೇ ಅನಗತ್ಯ ಎಂದು ಹೇಳಿದ್ದಾರೆ.
ಬಾರ್ಡರ್- ಗವಾಸ್ಕರ್ ಟ್ರೋಫಿಯ (INDvsAUS) ಮುಂದಿನ ಎರಡು ಪಂದ್ಯಗಳಿಗೆ ಕೆ. ಎಲ್ ರಾಹುಲ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದ್ದರೂ ಉಪನಾಯಕನ ಪಟ್ಟವನ್ನು ತೆಗೆದು ಹಾಕಲಾಗಿತ್ತು. ಇದರ ಅರ್ಥ ಅವರನ್ನು ಮುಂದಿನ ಪಂದ್ಯಗಳಿಗೆ ಆಡುವ 11ರ ಬಳಗಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು. ಕಳೆದ ಏಳು ಇನಿಂಗ್ಸ್ಗಳಲ್ಲಿ 22, 23, 10, 2, 20, 17 ರನ್ ಬಾರಿಸಿರುವುದೇ ಅವರು ಅವಕಾಶದಿಂದ ವಂಚಿತರಾಗಲು ಕಾರಣವಾಗಿದೆ.
ಈ ಕುರಿತು ಐಸಿಸಿ ರಿವ್ಯೂ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಶಾಸ್ತ್ರಿ, ಟೂರ್ನಿ ಆರಂಭಕ್ಕೆ ಮೊದಲು ಟೀಮ್ ಮ್ಯಾನೇಜ್ಮೆಂಟ್ ಆಟಗರರ ಫಾರ್ಮ್ ಬಗ್ಗೆ ತಿಳಿದುಕೊಂಡಿರಬೇಕಿತ್ತು. ಶುಭ್ಮನ್ ಅತ್ಯುತ್ತಮ ಫಾರ್ಮ್ನಲ್ಲಿ ಇರುವುದು ಅರಿವಿಗೆ ಇರಬೇಕಿತ್ತು. ಭಾರತದಲ್ಲಿ ಆಡುವ ಉಪನಾಯಕ ಅಗತ್ಯವೇ ಇಲ್ಲ ಎಂಬುದು ನನ್ನ ನಂಬಿಕೆ. ಅದರ ಬದಲಿಗೆ ಅತ್ಯುತ್ತಮ ಆಡುವ 11ರ ಬಳಗ ಆಯ್ಕೆ ಮಾಡುವೆ. ಒಂದು ವೇಳೆ ನಾಯಕ ಮೈದಾನ ತೊರೆಯಬೇಕದರೆ ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ : KL Rahul : ನಿಮ್ಮಷ್ಟು ಅವಕಾಶ ಇನ್ಯಾರಿಗೂ ಸಿಗದು ಎಂದು ಕೆ. ಎಲ್ ರಾಹುಲ್ ತರಾಟೆಗೆ ತೆಗೆದುಕೊಂಡ ವೆಂಕಟೇಶ್ ಪ್ರಸಾದ್
ಉಪನಾಯಕ ಎಂಬ ಟ್ಯಾಗ್ ಇಲ್ಲದೇ ಹೋದರೆ ಆ ಸ್ಥಾನಕ್ಕೆ ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಯಾರಾದರೂ ಪ್ರದರ್ಶನದ ಉತ್ತುಂಗದಲ್ಲಿ ಇದ್ದರೆ ಅವರನ್ನೇ ತಂಡದಲ್ಲಿ ಆಡಿಸಬಹುದು. ವಿದೇಶದಲ್ಲಿ ಉಪನಾಯಕರ ಅಗತ್ಯವಿದೆ. ಆದರೆ, ಭಾರತಕ್ಕೆ ಬೇಕಾಗಿಲ್ಲ ಎಂಬದಾಗಿ ಶಾಸ್ತ್ರಿ ನುಡಿದಿದ್ದಾರೆ.